Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಹಸುಗೂಸಿಗೆ ಕಳೆನಾಶಕ ಔಷಧಿ ಉಣಿಸಿ ಕೊಲೆ ಮಾಡಿದ ತಂದೆಯ ಬಂಧನ
ಕರ್ನಾಟಕಪ್ರಮುಖ

ಹಸುಗೂಸಿಗೆ ಕಳೆನಾಶಕ ಔಷಧಿ ಉಣಿಸಿ ಕೊಲೆ ಮಾಡಿದ ತಂದೆಯ ಬಂಧನ

Share
2 Min Read
SHARE

newsics.com

ಬೆಳಗಾವಿ : ತಾಲೂಕಿನ ಉಕ್ಕಡ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹಸುಗೂಸು ಏಕಾಏಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಾಗ ಪ್ರಕರಣಕ್ಕೆ ತಿರುವು ಸಿಕ್ಕಿದೆ.

ಹೆತ್ತ ತಂದೆಯೇ ಹೆಣ್ಣುಮಗು ಎಂಬ ಕಾರಣಕ್ಕೆ ವಿಷವುಣಿಸಿದ್ದು, ಕೊಲೆ ಮಾಡಿದ ಪಾಪಿ ತಂದೆಯನ್ನು ಕಾಕತಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹಸುಗೂಸು ಕೊಲೆ ಆರೋಪಿ ಭೀಮರಾಯ ಚಿಪ್ಪಾಡೆ ತಂದೆ. ಮಾ.17ರಂದು ಉಕ್ಕಡ ಗ್ರಾಮದಲ್ಲಿ ಈ ಘಟನೆ ನಡೆದಿತ್ತು, 15 ದಿನದ ಹಸು ಗೂಸು ಸಾವಿನ ಬಗ್ಗೆ ತಾಯಿ ಶೀಲಾ ಕಾಕತಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಳು, ಪ್ರಕರಣವನ್ನು ತನಿಖೆ ಕೈಗೊಂಡ ಪೊಲೀಸರು ಕೊಲೆ ಆರೋಪಿ ತಂದೆಯನ್ನು ಇದೀಗ ಬಂಧಿಸಿದ್ದಾರೆ.

ಇತ್ತೀಚೆಗೆ ಅಂದರೆ ಮಾರ್ಚ್ 17ರಂದು 15 ದಿನಗಳ ಹಿಂದೆ ಜನಿಸಿದ್ದ ಹಸುಗೂಸು ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಮಗುವಿನ ಸಾವಿಗೆ ತಂದೆಯೇ ಕಾರಣ ಎಂಬ ಗಂಭೀರ ಆರೋಪನ್ನು ಕುಟುಂಬಸ್ಥರೇ ಮಾಡಿದ್ದರು. ಒಂದು ವರ್ಷದ ಹಿಂದೆ ಭೀಮರಾಯ ಶೀಲಾರನ್ನು ಮದುವೆ ಆಗಿದ್ದರು.

ಕೂಲಿ ಕೆಲಸ ಮಾಡಿಕೊಂಡಿದ್ದ ಭೀಮರಾಯಗೆ ಗಂಡು ಮಕ್ಕಳೆಂದರೆ ಹುಚ್ಚು. ಆದರೆ 15 ದಿನದ ಹಿಂದೆ ಹೆಣ್ಣು ಮಗು ಆಗಿದ್ದಕ್ಕೆ ನೊಂದುಕೊಂಡಿದ್ದರು. ಪತ್ನಿ ತವರು ಮನೆಗೆ ಬಂದಿದ್ದ ಭೀಮರಾಯ ಮಗು ನೋಡಿ ವಾಪಾಸ್ ಹೋಗಿದ್ದರು. ಅವರು ಅತ್ತ ಹೋಗ್ತಿದ್ದಂತೆ ಮಗು ಅಸ್ವಸ್ಥಗೊಂಡಿತ್ತು. ಕೂಡಲೇ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆದರೆ ಅಷ್ಟರಲ್ಲಿ ಮಗು ಮೃತಪಟ್ಟಿತ್ತು. ಹತ್ತಿ ಬೆಳೆಗೆ ಸಿಂಪಡಣೆ ಮಾಡುವ ಔಷಧಿಯನ್ನು ಮಗುವಿಗೆ ಉಣಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು.

ಮಗುವನ್ನ ಬಿಮ್ಸ್ ಆಸ್ಪತ್ರೆ ಶವಗಾರಕ್ಕೆ ಶಿಫ್ಟ್ ಮಾಡಿ, ಮರಣೋತ್ತರ ಪರೀಕ್ಷೆಯ ಬಳಿಕವೇ ಮಗುವಿನ ಸಾವಿನ ನಿಖರ ಕಾರಣ ಬಹಿರಂಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಮಗು ಕಳೆದುಕೊಂಡ ತಾಯಿ ಹಾಗೂ ಕುಟುಂಬಸ್ಥರ ದುಃಖ ಮಡುಗಟ್ಟಿತ್ತು. ಇನ್ನು ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಡಿಸಿಪಿ ನಾರಾಯಣ್ ಭರಮನಿ, ಬೆಳಗಾವಿ ಗ್ರಾಮೀಣ ಎಸಿಪಿ ಹಾಗೂ ಕಾಕತಿ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಮತ್ತೊಂದೆಡೆ ಆರೋಪ ಎದುರಿಸುತ್ತಿದ್ದ ಪತಿ ಭೀಮರಾಯ ನಾಪತ್ತೆ ಆಗಿದ್ದರು. ಬಂಧನಕ್ಕೆ ಪೊಲೀಸರು ಬಲೆ ಬೀಸಿ ಆರೋಪಿ ತಂದೆಯನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ.

https://www.newsics.com/2026/03/20/dont-waste-your-money-by-going-to-the-theater-ramya-garam-watch-dhurandar-2/

TAGGED:Father arrested for murdering cow by feeding it herbicide
Share This Article
Facebook Twitter Copy Link Print
Previous Article ಥಿಯೇಟರ್‌ಗೆ ಹೋಗಿ ಹಣ ವ್ಯರ್ಥ ಮಾಡಬೇಡಿ : ಧುರಂದರ್- 2 ಚಿತ್ರ ನೋಡಿ ರಮ್ಯಾ ಗರಂ.!
Next Article ಜನ ನಾಯಗನ್​ ಗೆ ಒಂದೆರೆಡಲ್ಲ ಸಂಕಷ್ಟ! ಚುನಾವಣೆ ನೀತಿಸಂಹಿತೆಯಿಂದ ವಿಜಯ್ ಚಿತ್ರಕ್ಕೆ ಹಿನ್ನಡೆ

Popular Posts

ದರ್ಶನ್_ಕೇಸ್‌ಗೆ_ಹೊಸ_ತಿರುವು: ಹೈಕೋರ್ಟ್‌ನಲ್ಲಿ ವಕಾಲತ್ತಿನಿಂದ ಹಿಂದೆ ಸರಿಯಲು ಮುಂದಾದ ದರ್ಶನ್ ಪರ ವಕೀಲ

1 Min Read

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮುಖ್ಯಶಿಕ್ಷಕ ಪ್ರಕರಣ: 5 ಶಿಕ್ಷಕರು ಸೇರಿದಂತೆ 10 ಮಂದಿಯ ವಿರುದ್ಧ ಎಫ್ಐಆರ್

1 Min Read

Viral video ಅಮ್ಮಾ, ಫೋನ್ ಕೊಡು ಎಂದ ಮಗು… ಮುಂದಿನ ಕ್ಷಣದಲ್ಲೇನಾಯ್ತು? ವಿಡಿಯೋ ನೋಡಿ

1 Min Read

Thaai Kizhavi 10 ಕೋಟಿ ಬಜೆಟ್, 82 ಕೋಟಿ ಕಲೆಕ್ಷನ್: 2026ರ ಅತಿದೊಡ್ಡ ಲಾಭದ ತಮಿಳು ಸಿನಿಮಾ ಇದೇ…!

1 Min Read

You Might Also Like

ಕರ್ನಾಟಕದೇಶಪ್ರಮುಖ

PhonePe shock ಫೋನ್‌ಪೆ ಬಳಕೆದಾರರಿಗೆ ಶಾಕ್: ನಿಷ್ಕ್ರಿಯ ವ್ಯಾಲೆಟ್‌ಗೆ 3 ತಿಂಗಳಿಗೊಮ್ಮೆ 100 ರೂ. ಶುಲ್ಕ!

2 Min Read
ಕರ್ನಾಟಕಪ್ರಮುಖ

MLC Election ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್ ಕ್ಲೀನ್ ಸ್ವೀಪ್, ಮೈತ್ರಿಕೂಟಕ್ಕೆ ಭಾರೀ ಹಿನ್ನಡೆ

1 Min Read
ವೈರಲ್ಪ್ರಮುಖ

ಟೆಲಿಗ್ರಾಂ ಉಗ್ರವಾದ, ಸೈಬರ್ ಅಪರಾಧಗಳಿಗೆ ಅಡ್ಡೆ; ಹೈಕೋರ್ಟ್‌ಗೆ ಕೇಂದ್ರ ಸರ್ಕಾರದ ಗಂಭೀರ ಮಾಹಿತಿ

2 Min Read
ಕರ್ನಾಟಕಪ್ರಮುಖ

Parishat election ಪರಿಷತ್ ಚುನಾವಣೆ ವೇಳೆ ಯತ್ನಾಳ್ ಮತದಾನಕ್ಕೆ ಟ್ವಿಸ್ಟ್: ‘ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಮೊದಲೇ ಹೇಳಿದ್ದೆ’

1 Min Read

Social Networks

Facebook-f Instagram Twitter
Welcome Back!

Sign in to your account

Lost your password?