https://youtube.com/shorts/JFDfzeRUAUw?si=UPiQjhCFAIkLXEhb
newsics.com
ಹೇರಳ ಪೋಷಕಾಂಶಗಳು, ಔಷಧೀಯ ಗುಣಗಳನ್ನು ಹೊಂದಿರುವ ನೆಲ್ಲಿಕಾಯಿಯನ್ನು ಆಯುರ್ವೇದ ಔಷಧಗಳಲ್ಲಿ ಅಮೃತವೆಂದು ಪರಿಗಣಿಸಲಾಗುತ್ತದೆ. ಹೌದು ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಟ್ಯಾನಿನ್, ರಂಜಕ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೇರಳವಾಗಿದ್ದು, ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ದಿನಕ್ಕೊಂದರಂತೆ ಹಿತಮಿತವಾಗಿ ನೆಲ್ಲಿಕಾಯಿಯನ್ನು ಸೇವನೆ ಮಾಡುವ ಮೂಲಕ ಸಾಕಷ್ಟು ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹಾಗಿದ್ರೆ ನೆಲ್ಲಿಕಾಯಿ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ನೆಲ್ಲಿಕಾಯಿಯ ಅಚ್ಚರಿಯ ಪ್ರಯೋಜನಗಳು:
ರೋಗನಿರೋಧಕ ಶಕ್ತಿ: ನೆಲ್ಲಿಕಾಯಿಯಲ್ಲಿ ವಿಟಮಿನ್ ‘ಸಿ’ ಸಮೃದ್ಧವಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕಾಲೋಚಿತ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ.
ಹೃದಯದ ಆರೋಗ್ಯ: ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಹೊಳೆಯುವ ಚರ್ಮ: ನೆಲ್ಲಿಕಾಯಿಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ವಯಸ್ಸಾದ ಲಕ್ಷಣಗಳನ್ನು ತಡೆಯುತ್ತವೆ ಮತ್ತು ಚರ್ಮಕ್ಕೆ ನೈಸರ್ಗಿಕ ಕಾಂತಿಯನ್ನು ನೀಡುತ್ತವೆ.
ಕೂದಲಿನ ಬೆಳವಣಿಗೆ: ನಿಯಮಿತವಾಗಿ ನೆಲ್ಲಿಕಾಯಿ ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆಯಾಗಿ, ಕೂದಲು ದಟ್ಟವಾಗಿ ಬೆಳೆಯಲು ಸಹಾಯವಾಗುತ್ತದೆ.
ಮನೆಯಲ್ಲೇ ತಾಜಾ ನೆಲ್ಲಿಕಾಯಿ ರಸ ತಯಾರಿಸುವುದು ಹೇಗೆ?
ಮಾರುಕಟ್ಟೆಯಲ್ಲಿ ಸಿಗುವ ಸಂರಕ್ಷಕಗಳಿರುವ ರಸಕ್ಕಿಂತ ಮನೆಯಲ್ಲೇ ತಾಜಾ ರಸ ತಯಾರಿಸುವುದು ಉತ್ತಮ.
ಸುಮಾರು 7 ತಾಜಾ ನೆಲ್ಲಿಕಾಯಿಗಳನ್ನು ತೊಳೆದು, ಬೀಜ ತೆಗೆದು ಸಣ್ಣ ಚೂರುಗಳನ್ನಾಗಿ ಮಾಡಿ.
ಮಿಕ್ಸರ್ ಜಾರ್‌ಗೆ ಈ ಚೂರುಗಳನ್ನು ಹಾಕಿ ಅರ್ಧ ಕಪ್ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಒಂದು ಬಟ್ಟೆ ಅಥವಾ ಸೋಸುವ ಚಮಚದ ಸಹಾಯದಿಂದ ರಸವನ್ನು ಸೋಸಿಕೊಳ್ಳಿ.
ಉಳಿದ ಸಿಪ್ಪೆಗೆ ಮತ್ತೆ ಸ್ವಲ್ಪ ನೀರು ಸೇರಿಸಿ ರುಬ್ಬಿ ಪೂರ್ತಿ ರಸವನ್ನು ಹಿಂಡಿ ತೆಗೆಯಿರಿ.
ಸೇವಿಸುವ ಕ್ರಮ:
ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ 1 ರಿಂದ 2 ನೆಲ್ಲಿಕಾಯಿಯಿಂದ ತಯಾರಿಸಿದ ರಸವನ್ನು ಸೇವಿಸುವುದು ಅತ್ಯಂತ ಪರಿಣಾಮಕಾರಿ. ಇದು ದುಬಾರಿ ಔಷಧಿಗಳಿಗಿಂತಲೂ ವೇಗವಾಗಿ ನಿಮ್ಮ ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
https://www.newsics.com/2026/03/16/sslc-exams-start-from-march-18-students-must-follow-these-rules/