https://youtube.com/shorts/JFDfzeRUAUw?si=UPiQjhCFAIkLXEhb
newsics.com
ಖಾಸಗಿ ವಾಹನಗಳಿಗೆ ನೀಡಲಾಗುವ ವಾರ್ಷಿಕ ಫಾಸ್ಟ್ಯಾಗ್ ಪಾಸ್ನ ದರದಲ್ಲಿ ಏರಿಕೆ ಮಾಡಲಾಗಿದೆ. 75 ರೂನಷ್ಟು ಬೆಲೆ ಏರಿಕೆ ಆಗಿದೆ.
ಸದ್ಯ 3 ಸಾವಿರ ರೂಪಾಯಿ ವಾರ್ಷಿಕ ಪಾಸ್ ದರ ಇದ್ದು, ಮುಂದಿನ ತಿಂಗಳಿನಿಂದ 3075 ರೂ. ಆಗಲಿದೆ. ಶೇ. 2.5 ರಷ್ಟು ದರ ಹೆಚ್ಚಾಗಲಿದೆ. ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿ ವಾರ್ಷಿಕ ಪಾಸ್ ಶುಲ್ಕ ಹೆಚ್ಚಳ ಮಾಡಲಾಗಿದೆ. ಫಾಸ್ಟ್ಯಾಗ್ ವಾರ್ಷಿಕ ಪಾಸ್ ಖರೀದಿಸುವ ಖಾಸಗಿ ಕಾರು ಮಾಲೀಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಯ ಟೋಲ್ ಪ್ಲಾಜಾಗಳಲ್ಲಿ ವರ್ಷಕ್ಕೆ 200 ಟ್ರಿಪ್ ಕೈಗೊಳ್ಳಬಹುದು. ಈ ವಾರ್ಷಿಕ ಪಾಸ್ ಅನ್ನು ವರ್ಷದಲ್ಲಿ ಎಷ್ಟು ಬಾರಿಯಾದರೂ ರೀಚಾರ್ಜ್ ಮಾಡಬಹುದಾಗಿದೆ.
ವಾರ್ಷಿಕ ಪಾಸ್ ಪಡೆದರೆ ಪದೇ ಪದೇ ಫಾಸ್ಟ್ಯಾಗ್ ರೀಚಾರ್ಜ್ ಮಾಡುವುದು ತಪ್ಪುತ್ತದೆ. ಈ ಪಾಸ್ ಸ್ಕೀಮ್ ಆರಂಭವಾಗಿ ಇನ್ನೂ ಒಂದು ವರ್ಷ ಆಗಿಲ್ಲ, ಆಗಲೇ ಸಾಕಷ್ಟು ಜನಬಳಕೆ ಪಡೆಯುತ್ತಿದೆ. 50 ಲಕ್ಷಕ್ಕೂ ಹೆಚ್ಚು ಜನರು ಫಾಸ್ಟ್ಯಾಗ್ ವಾರ್ಷಿಕ ಪಾಸ್ ಖರೀದಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಖಾಸಗಿ ಕಾರುಗಳ ಶೇ. 20ರಷ್ಟು ಟೋಲ್ ಟ್ರಾನ್ಸಾಕ್ಷನ್ಗಳು ವಾರ್ಷಿಕ ಪಾಸ್ ಬಳಸಿ ಆಗುತ್ತಿವೆ ಎಂದು ದತ್ತಾಂಶಗಳು ಹೇಳುತ್ತವೆ.
https://www.newsics.com/2026/03/16/want-to-make-your-hair-and-skin-glow-then-drink-gooseberry-juice/