https://youtube.com/shorts/yMSO-E277Og?si=gFSvtQQHQjZ3lXBt
newsics.com
ನವದೆಹಲಿ: ನೀವು ಅತಿಯಾಗಿ ಇಂಟರ್ನೆಟ್ ಬಳಸುವವರೇ? ಹಾಗಿದ್ದರೆ ನಿಮಗೊಂದು ಶಾಕಿಂಗ್ ನ್ಯೂಸ್ ಇಲ್ಲಿದೆ. ಸ್ಮಾರ್ಟ್ಫೋನ್ ಬಳಕೆದಾರರು ಮತ್ತು ಇಂಟರ್ನೆಟ್ ಪ್ರಿಯರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಲು ಸಿದ್ಧತೆ ನಡೆಸುತ್ತಿದೆ. ಇನ್ಮುಂದೆ ಇಂಟರ್ನೆಟ್ ಡೇಟಾ ಬಳಕೆಯ ಮೇಲೆ ಹೊಸದಾಗಿ ‘ಡೇಟಾ ತೆರಿಗೆ’ (Data Tax) ವಿಧಿಸುವ ಕುರಿತು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಏನಿದು ಹೊಸ ಪ್ರಸ್ತಾವನೆ?
ಕಳೆದ ಜನವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಟೆಲಿಕಾಂ ಇಲಾಖೆಯ ಪರಾಮರ್ಶನಾ ಸಭೆಯಲ್ಲಿ ಈ ಮಹತ್ವದ ಪ್ರಸ್ತಾವನೆ ಚರ್ಚೆಗೆ ಬಂದಿದೆ ಎನ್ನಲಾಗಿದೆ. ಈ ಯೋಜನೆಯ ಹಿಂದೆ ಸರ್ಕಾರ ಪ್ರಮುಖವಾಗಿ ಎರಡು ಉದ್ದೇಶಗಳನ್ನು ಹೊಂದಿದೆ:
ದೇಶದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತರುವುದು.
ಜನರಲ್ಲಿ, ವಿಶೇಷವಾಗಿ ಯುವಜನತೆಯಲ್ಲಿ ಹೆಚ್ಚುತ್ತಿರುವ ಇಂಟರ್ನೆಟ್ ಚಟವನ್ನು ಕಡಿಮೆ ಮಾಡುವುದು.
ಒಂದು ಅಂದಾಜಿನ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ ಭಾರತೀಯರು ಒಟ್ಟು 229 ಬಿಲಿಯನ್ ಜಿಬಿ (GB) ಡೇಟಾವನ್ನು ಬಳಸಿದ್ದಾರೆ.
ಈ ಲೆಕ್ಕಾಚಾರದಂತೆ ಪ್ರತಿ 1 ಜಿಬಿ ಬಳಕೆಯ ಮೇಲೆ ಕೇವಲ 1 ರೂಪಾಯಿ ತೆರಿಗೆ ವಿಧಿಸಿದರೂ, ಸರ್ಕಾರದ ಖಜಾನೆಗೆ ವರ್ಷಕ್ಕೆ ಬರೋಬ್ಬರಿ 22,900 ಕೋಟಿ ರೂಪಾಯಿ ಆದಾಯ ಹರಿಯಲಿದೆ.
ಸದ್ಯ ಟೆಲಿಕಾಂ ಸೇವೆಗಳ ಮೇಲೆ ಈಗಾಗಲೇ ಶೇ. 18 ರಷ್ಟು GST ಪಾವತಿಸಲಾಗುತ್ತಿದೆ. ಈಗ ಹೆಚ್ಚುವರಿಯಾಗಿ ಈ ಡೇಟಾ ತೆರಿಗೆ ಜಾರಿಯಾದರೆ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ.