https://youtube.com/shorts/yMSO-E277Og?si=gFSvtQQHQjZ3lXBt
newsics.com
ಸೇನಾನೆಲೆ, ತೈಲಾಗಾರ, ವಿಮಾನನಿಲ್ದಾಣಗಳಿಗೆ ಸೀಮಿತವಾಗಿದ್ದ ದಾಳಿ-ಪ್ರತಿದಾಳಿಗಳು ಇದೀಗ ಆರ್ಥಿಕತೆಗಳನ್ನೇ ನೇರ ಗುರಿಯಾಗಿಸಿಕೊಳ್ಳುವತ್ತ ತಿರುಗಿದೆ. ‘ಬ್ಯಾಂಕ್ ಸೆಪಾ’ ಮೇಲಿನ ದಾಳಿಗೆ ಪ್ರತೀಕಾರವಾಗಿ ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ಪ್ರಮುಖ ಕಂಪನಿಗಳ ಕಚೇರಿ ಮೇಲೆ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.
ಇರಾನ್‌ನ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಒಂದಾದ ‘ಬ್ಯಾಂಕ್ ಸೆಪಾ’ಗೆ ಸೇರಿದ ಕಟ್ಟಡವೊಂದರ ಮೇಲೆ ತಡರಾತ್ರಿ ಅಮೆರಿಕ–ಇಸ್ರೇಲ್ ದಾಳಿ ನಡೆಸಿದ್ದವು.
ಈಗಾಗಲೇ ಕೆಲ ಗಲ್ಫ್ ರಾಷ್ಟ್ರಗಳಲ್ಲಿ ತಮ್ಮ ಕಾರ್ಯಾಚರಣೆಯನ್ನು ಭಾಗಶಃ ನಿಲ್ಲಿಸಿರುವ ಐಟಿ ಕಂಪನಿಗಳಿಗೂ ದುಃಸ್ಥಿತಿ ಒದಗಲಿದೆ ಎನ್ನಲಾಗಿದೆ. ಐಆರ್‌ಜಿಸಿಗೆ ಸಂಬಂಧಿಸಿದ ತನ್ಸಿಂ ಪತ್ರಿಕೆಯಲ್ಲಿ ಗೂಗಲ್, ಮೈಕ್ರೊಸಾಫ್ಟ್, ಒರಾಕಲ್, ಐಬಿಎಂ, ಎನ್ವಿಡಿಯಾ ಸೇರಿದಂತೆ ಅಮೆರಿಕದ ಐಟಿ ಕಂಪನಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇವುಗಳು ಇಸ್ರೇಲ್ ಜತೆಗೆ ಸಂಬಂಧ ಹೊಂದಿ ಯುದ್ಧದಲ್ಲಿ ಸಹಕರಿಸುತ್ತಿವೆ ಎಂದು ಆರೋಪಿಸಲಾಗಿದೆ. ಜತೆಗೆ ಇದೇ ಕಾರಣಕ್ಕೆ ಅವುಗಳೇ ಇರಾನ್‌ನ ಹೊಸ ಗುರಿಗಳು ಎಂದು ಬರೆಯಲಾಗಿದೆ.
ಐಆರ್‌ಜಿಸಿಯ ಖತಮ್ ಅಲ್-ಅನ್ಬಿಯಾ ಪ್ರಧಾನ ಕಚೇರಿಯ ವಕ್ತಾರ ಮಾತನಾಡಿ, ‘ಅಮೆರಿಕ ಮತ್ತು ಇಸ್ರೇಲ್‌ನ ಬ್ಯಾಂಕ್ ಸೇರಿ ಇತರೆ ಆರ್ಥಿಕ ಸಂಸ್ಥೆಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಅವರೇ ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಮಧ್ಯಪ್ರಾಚ್ಯದಲ್ಲಿರುವ ಶತ್ರುರಾಷ್ಟ್ರಗಳಿಗೆ ಸೇರಿದ ಆರ್ಥಿಕ ಕೇಂದ್ರಗಳ ಮೇಲೆ ಆಕ್ರಮಣ ಮಾಡಲಿದ್ದೇವೆ. ನಾಗರಿಕರು ಅವುಗಳಿಂದ ದೂರವಿರಿ’ ಎಂದು ಎಚ್ಚರಿಕೆ ನೀಡಿದ್ದಾರೆ.
https://www.newsics.com/2026/03/12/iran-attacks-us-oil-tanker-indian-crew-killed/