https://youtube.com/shorts/yMSO-E277Og?si=gFSvtQQHQjZ3lXBt
newsics.com
ನಟಿ ಹನ್ಸಿಕಾ ಮೋಟ್ವಾನಿ ಮತ್ತು ಉದ್ಯಮಿ ಸೊಹೈಲ್ ಕಥುರಿಯಾ ಅವರ ಮದುವೆ ನಾಲ್ಕು ವರ್ಷಗಳಲ್ಲೇ ಅಂತ್ಯಗೊಂಡಿದೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಬುಧವಾರ (ಮಾ. 11) ಇವರ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿದೆ.
ಬಹಳ ಹಿಂದಿನಿಂದಲೇ ಇವರಿಬ್ಬರು ಜೊತೆಯಾಗಿ ವಾಸಿಸುತ್ತಿಲ್ಲ ಎಂಬ ವದಂತಿಗಳು ಹರಿದಾಡುತ್ತಿದ್ದವು. ಹನ್ಸಿಕಾ ತಮ್ಮ ತಾಯಿಯ ಮನೆಗೆ ಮರಳಿದ್ದರೆ, ಸೊಹೈಲ್ ತಮ್ಮ ಕುಟುಂಬದೊಂದಿಗೆ ವಾಸ ಮಾಡುತ್ತಿದ್ದರು. ಮದುವೆಯ ನಂತರ ಸೊಹೈಲ್ ಅವರ ಕುಟುಂಬದ ಜೊತೆಗೆ ಹನ್ಸಿಕಾ ವಾಸಿಸುತ್ತಿದ್ದರು. ಕೊನೆಗೆ ಅದೇ ಅಪಾರ್ಟ್‌ಮೆಂಟ್‌ನ ಮತ್ತೊಂದು ಫ್ಲಾಟ್‌ಗೆ ವಾಸ್ತವ್ಯವನ್ನು ಹನ್ಸಿಕಾ ಬದಲಿಸಿದ್ದರು. ಆರಂಭದಲ್ಲಿ ಇಬ್ಬರು ಬೇರೆಯಾಗಿರುವ ಸುದ್ದಿಯನ್ನು ಸೊಹೈಲ್ ನಿರಾಕರಿಸಿದ್ದರು. ಹನ್ಸಿಕಾ ಅವರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಕಳೆದ ಒಂದು ವರ್ಷದಿಂದ ಹರಿದಾಡುತ್ತಿದ್ದ ವಿಚ್ಛೇದನದ ವದಂತಿಗಳಿಗೆ ಈಗ ಮುದ್ರೆ ಬಿದ್ದಿದೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಹನ್ಸಿಕಾ ಮತ್ತು ಉದ್ಯಮಿ ಸೊಹೈಲ್ ಖತುರಿಯಾ ಅವರಿಗೆ ವಿಚ್ಛೇದನ ಮಂಜೂರು ಮಾಡಿದೆ. ಹನ್ಸಿಕಾ ಮೋಟ್ವಾನಿ ಮತ್ತು ಸೊಹೈಲ್ ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ವಿಶೇಷವೆಂದರೆ, ಹನ್ಸಿಕಾ ಅವರು ಪತಿಯಿಂದ ಯಾವುದೇ ರೀತಿಯ ಜೀವನಾಂಶ ಕೇಳಿಲ್ಲ.
ಮದುವೆಯಾದ ನಂತರ ಇಬ್ಬರೂ ಕೆಲವೇ ಕಾಲ ಒಟ್ಟಿಗೆ ವಾಸವಿದ್ದರು. ಆದರೆ, ಇಬ್ಬರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡಿದ್ದವು. ಸಣ್ಣ ಸಣ್ಣ ವಿಷಯಗಳಿಗೂ ಜಗಳ ಶುರುವಾಗಿ, ಒಂದೇ ಮನೆಯಲ್ಲಿ ಇರುವುದು ಕಷ್ಟವಾಗಿತ್ತು ಎಂದು ವರದಿಗಳು ತಿಳಿಸಿವೆ.
ಹನ್ಸಿಕಾ ಮತ್ತು ಸೊಹೇಲ್ 2022ರಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಹನ್ಸಿಕಾ, ನಂತರ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದರು. ಬಿ. ಉಣ್ಣಿಕೃಷ್ಣನ್ ನಿರ್ದೇಶನದ, ಮೋಹನ್‌ಲಾಲ್ ನಟನೆಯ ‘ವಿಲ್ಲನ್’ ಚಿತ್ರದ ಮೂಲಕ ಅವರು ಮಲಯಾಳಂಗೂ ಎಂಟ್ರಿ ಕೊಟ್ಟಿದ್ದರು. 2024ರಲ್ಲಿ ತೆರೆಕಂಡ ತಮಿಳಿನ ‘ಗಾರ್ಡಿಯನ್’ ಚಿತ್ರ ಹನ್ಸಿಕಾ ನಟನೆಯ ಕೊನೆಯ ಸಿನಿಮಾ.