https://youtube.com/shorts/NQT6o3FTgxQ?si=QO7iNw2quSngYXpc
newsics.com
ಇಬ್ಬರು ಪ್ರಭಾವಿ ವ್ಯಕ್ತಿಗಳ ಮಕ್ಕಳನ್ನು ಜೋಡಿಸಿ ನೆಟ್ಟಿಗರು ಹೊಸದೊಂದು ಡಿಜಿಟಲ್ ಲವ್ ಸ್ಟೋರಿಯನ್ನು ಸೃಷ್ಟಿಸಿದ್ದಾರೆ.
ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಪುತ್ರ 19 ವರ್ಷದ ಬ್ಯಾರನ್ ಟ್ರಂಪ್ ಮತ್ತು ಕಿಮ್ ಜೊಂಗ್ ಉನ್ ಅವರ ಪುತ್ರಿ ಕಿಮ್ ಜು ಏ ನಡುವೆ ಸಂಬಂಧವಿದೆ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಮಿಮ್ಸ್ ಗಳು ವೈರಲ್ ಆಗ್ತಿವೆ.
ಟ್ರಂಪ್ ಮತ್ತು ಕಿಮ್ ಜೊಂಗ್ ಉನ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಸದಾ ಸುದ್ದಿಯಲ್ಲಿರುತ್ತವೆ. ಆದರೆ, ನೆಟ್ಟಿಗರು ಈಗ ಅವರ ಮಕ್ಕಳನ್ನು ಇಟ್ಟುಕೊಂಡು ‘ರೋಮಿಯೋ-ಜೂಲಿಯೆಟ್’ ಮಾದರಿಯ ಮೀಮ್‌ಗಳನ್ನು ತಯಾರಿಸುತ್ತಿದ್ದಾರೆ. ಎಐ (AI) ಮೂಲಕ ಸೃಷ್ಟಿಸಲಾದ ಚಿತ್ರಗಳಲ್ಲಿ ಬ್ಯಾರನ್ ಮತ್ತು ಕಿಮ್ ಜು ಏ ಒಟ್ಟಿಗೆ ಇರುವುದನ್ನು ತೋರಿಸಲಾಗುತ್ತಿದೆ. ‘ಜಗತ್ತಿನ ಎರಡು ಬದ್ಧ ವೈರಿ ರಾಷ್ಟ್ರಗಳನ್ನು ಈ ಪ್ರೇಮಕಥೆ ಒಂದು ಮಾಡಬಹುದು’ ಎಂಬ ಹಾಸ್ಯದ ಸಾಲುಗಳೊಂದಿಗೆ ಈ ಚಿತ್ರಗಳು ವೈರಲ್ ಅಗ್ತಿವೆ.
ಎಕ್ಸ್ (X), ಇನ್‌ಸ್ಟಾಗ್ರಾಮ್ ಮತ್ತು ರೆಡ್ಡಿಟ್‌ನಂತಹ ವೇದಿಕೆಗಳಲ್ಲಿ ಈ ಮೀಮ್‌ಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿವೆ. ವಿಶೇಷವಾಗಿ ಇಬ್ಬರೂ ನಾಯಕರು ಇತ್ತೀಚೆಗೆ ರಾಜತಾಂತ್ರಿಕವಾಗಿ ಚರ್ಚೆಯಲ್ಲಿರುವುದರಿಂದ ಈ ಮೀಮ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ.
ಇಸ್ರೇಲ್ ಹಾಗೂ ಅಮೆರಿಕ ಇರಾನ್ ಮೇಲೆ ದಾಳಿ ಮಾಡಿದ್ದಾರೆ. ಈ ಕಾರಣಕ್ಕೆ ಉತ್ತರ ಕೊರಿಯಾ ನಮಗೆ ಬೆಂಬಲ ನೀಡಬೇಕು ಎಂಬ ಉದ್ದೇಶದಿಂದ ಟ್ರಂಪ್ ಈ ಸಂಬಂಧ ಬೆಳೆಸಿಕೊಂಡಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.
https://www.instagram.com/p/DVYTdiZFk5i/?igsh=d3J3ejB5M2dnbnV1
ತುಪ್ಪದ ಟ್ಯಾಂಕರ್ ಪಲ್ಟಿ : ಕೊಡ, ಕ್ಯಾನ್ ಗಳಲ್ಲಿ ತುಂಬಿಸಿಕೊಳ್ಳಲು ಮುಗಿಬಿದ್ದ ಜನ!