newsics.com
ಮುಂಬೈ: ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಹೊಸ ಜಮೀನು ಖರೀದಿಸಿದ್ದಾರೆ. ವಿಶೇಷ ಅಂದರೆ ಮುಂಬೈ ಅಥವಾ ಮುಂಬೈ ಹೊರವಲಯದಲ್ಲಿ ಅಲ್ಲ. ಇದೀಗ ಅಮಿತಾಬ್ ಬಚ್ಚನ್ ಶ್ರೀರಾಮ ಜನ್ಮ ಭೂಮಿಯಾಗಿರುವ ಆಯೋಧ್ಯೆಯಲ್ಲಿ ಜಮೀನು ಖರೀದಿಸಿದ್ದಾರೆ.
ಅಮಿತಾಬ್ ಬಚ್ಚನ್ ಅಯೋಧ್ಯೆಯಲ್ಲಿ ರಾಮ ಮಂದಿರ ಸಮೀಪ 2.67 ಎಕರೆ ಜಮೀನು ಖರೀದಿಸಿರುವುದು ತಿಳಿದುಬಂದಿದೆ. ಈ ಆಸ್ತಿಯನ್ನು ಅವರು ಸುಮಾರು 35 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಅಯೋಧ್ಯೆಯಲ್ಲಿ ಅವರು ಕೆಲವು ಹೂಡಿಕೆಗಳನ್ನು ಮಾಡಿದ್ದು, ಇದು ಅವರ ನಾಲ್ಕನೇ ರಿಯಲ್ ಎಸ್ಟೇಟ್ ಹೂಡಿಕೆ ಎಂದು ವರದಿಗಳು ಹೇಳುತ್ತಿವೆ.
ಕೆಲ ವರ್ಷಗಳ ಹಿಂದೆ ಅಮಿತಾಭ್ ಬಚ್ಚನ್ ಹೌಸ್ ಆಫ್ ಅಭಿನಂದನ್ ಲೋಧಾ ಸಂಸ್ಥೆಯಿಂದ ಅಯೋಧ್ಯೆಯಲ್ಲಿ ಭೂಮಿಯನ್ನು ಖರೀದಿಸಿದ್ದರು. ಈ ವಿಷಯವನ್ನು ಕಳೆದ ವರ್ಷ ರಿಯಲ್ ಎಸ್ಟೇಟ್ ಕ್ಷೇತ್ರದ ಪ್ರಮುಖ ಉದ್ಯಮಿ ಅಭಿನಂದನ್ ಲೋಧಾ ಬಹಿರಂಗಪಡಿಸಿದ್ದರು. ಅಯೋಧ್ಯೆಗೆ ಭೇಟಿ ನೀಡುವ ಮುನ್ನವೇ ಅಲ್ಲಿನ ನಾಗರಿಕರಾಗಬೇಕು ಎಂಬ ಆಸೆಯಿಂದ ಅವರು ಅಲ್ಲಿ ಜಮೀನು ಖರೀದಿಸಿದ್ದರು ಎಂದು ತಿಳಿದುಬಂದಿತ್ತು. ಇದೀಗ ಅವರು ಆ ಹೂಡಿಕೆಯನ್ನು ಮತ್ತಷ್ಟು ವಿಸ್ತರಿಸಿರುವುದು ಗಮನಾರ್ಹವಾಗಿದೆ.