Subscribe ನ್ಯೂಸಿಕ್ಸ್ ಕನ್ನಡ
newsics.com
ಕಳೆದೆರಡು ದಿನದ ಹಿಂದೆ ನಾಲ್ಕು ವಾರಗಳ ಗರಿಷ್ಠ ಮಟ್ಟವನ್ನು ತಲುಪಿದ್ದ ಬೆಳ್ಳಿ, ಇದೀಗ ಸುಮಾರು 11 ಪ್ರತಿಶತದಷ್ಟು ಕುಸಿದಿದೆ. ಅದೇ ರೀತಿ, ಚಿನ್ನ ಬೆಲೆ ಕೂಡ ಕುಸಿಯುತ್ತಿದೆ. ಈ ಹಠಾತ್ ಕುಸಿತಕ್ಕೆ ಪ್ರಮುಖ ಕಾರಣ ಯುಎಸ್ ಡಾಲರ್ ಬಲಗೊಳ್ಳುವುದು. ಯುಎಸ್ ಡಾಲರ್ ಒಂದು ತಿಂಗಳ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದಂತೆ, ಹೂಡಿಕೆದಾರರು ಅಮೂಲ್ಯ ಲೋಹಗಳ ಖರೀದಿಯನ್ನು ಕಡಿಮೆ ಮಾಡಿದ್ರು. ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಚಂಚಲತೆಯನ್ನು ಹೆಚ್ಚಿಸಿದ್ದರೂ, ಡಾಲರ್ ಬಲಗೊಳ್ಳುವುದ್ರಿಂದ ಚಿನ್ನ-ಬೆಳ್ಳಿ ಬೆಲೆಗಳ ಮೇಲೆ ಒತ್ತಡ ಹೇರಲಾಗಿದೆ.
ಚಿನ್ನದ ಬೆಲೆಯೂ ಗಣನೀಯವಾಗಿ ಕುಸಿದಿದೆ. ಮಾರುಕಟ್ಟೆ ಮೂಲಗಳ ಪ್ರಕಾರ, ಸುಮಾರು ಶೇ. 3 ರಷ್ಟು ಕುಸಿದಿದೆ. ಸೋಮವಾರ ಗರಿಷ್ಠ ಮಟ್ಟವನ್ನು ತಲುಪಿದ ಕಾಮೆಕ್ಸ್ ಬೆಳ್ಳಿ ಇದೀಗ ಶೇ. 9 ರಷ್ಟು ಕುಸಿದಿದೆ ಪ್ರತಿ ಔನ್ಸ್ ಗೆ $81.66 ಕ್ಕೆ ವಹಿವಾಟು ನಡೆಸಿದೆ. ಕಾಮೆಕ್ಸ್ ಚಿನ್ನವು ಸುಮಾರು ಶೇ. 2.6 ರಷ್ಟು ಕುಸಿದು ಪ್ರತಿ ಔನ್ಸ್ ಗೆ $5,172 ಕ್ಕೆ ತಲುಪಿದೆ. ಈ ಬೆಲೆ ಇಳಿಕೆ ಚಿನ್ನ-ಬೆಳ್ಳಿ ಖರೀದಿಸುವವರಿಗೆ ಸಂತಸದ ವಿಚಾರವಾಗಿದೆ
ಅಂತರರಾಷ್ಟ್ರೀಯ ಬೆಳವಣಿಗೆಗಳು ಚಿನ್ನದ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿವೆ. ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯಿಂದಾಗಿ ಚಿನ್ನದ ಬೆಲೆಗಳು ಸತತ ಮೂರು ದಿನಗಳಿಂದ ಏರಿಕೆಯಾಗಿವೆ. ಯುದ್ಧದ ಪರಿಸ್ಥಿತಿ ಹದಗೆಟ್ಟರೆ ಚಿನ್ನದ ಬೆಲೆಗಳು ಗಮನಾರ್ಹವಾಗಿ ಹೆಚ್ಚಾಗಬಹುದು ಎಂಬ ನಿರೀಕ್ಷೆಗಳಿವೆ. ಕೆಲವು ವಿಶ್ಲೇಷಕರು ಬೆಲೆಗಳು 2 ಲಕ್ಷ ರೂ.ಗಳ ಕಡೆಗೆ ಸಾಗಬಹುದು ಎಂದು ಎಚ್ಚರಿಕೆ ನೀಡ್ತಿದ್ದಾರೆ. ಆದ್ರೆ ಇದೀಗ ಮಾರುಕಟ್ಟೆಯಲ್ಲಿನ ಕೆಲವು ಸ್ಥಿರತೆಯಿಂದಾಗಿ ಇದೀಗ ಚಿನ್ನ-ಬೆಳ್ಳಿ ಬೆಲೆಗಳು ಸ್ವಲ್ಪ ಕಡಿಮೆಯಾಗಿದೆ. ಇದ್ರಿಂದ ಖರೀದಿದಾರರಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ಒಂದೇ ದಿನದಲ್ಲಿ ಗಣನೀಯವಾಗಿ ಕುಸಿದ ಬೆಲೆಗಳು ಈಗ ಸ್ಥಿರವಾಗಿವೆ. ಪ್ರಸ್ತುತ, 10 ಗ್ರಾಂ ಬೆಳ್ಳಿಯ ಬೆಲೆ ಸುಮಾರು 3,150 ರೂ.ಗಳಷ್ಟಿದ್ದರೆ, ಒಂದು ಕಿಲೋ ಬೆಳ್ಳಿಯ ಬೆಲೆ 3,15,000 ರೂ.ಗಳಷ್ಟಿದೆ. ಕೈಗಾರಿಕಾ ಬಳಕೆ, ಸೌರಶಕ್ತಿ ವಲಯದಲ್ಲಿ ಹೆಚ್ಚುತ್ತಿರುವ ಅಗತ್ಯಗಳು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆಗಳು ಬೆಳ್ಳಿ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿವೆ.
ಮಾರುಕಟ್ಟೆ ತಜ್ಞರ ಪ್ರಕಾರ, ಜಾಗತಿಕ ಆರ್ಥಿಕ ಪರಿಸ್ಥಿತಿಗಳು, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಡಾಲರ್ ಮೌಲ್ಯದಂತಹ ಅಂಶಗಳು ಚಿನ್ನದ ಬೆಲೆಯನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ. ಅದೇ ರೀತಿ, ಬೆಳ್ಳಿ ಬೆಲೆಗಳು ಹೆಚ್ಚಾಗಿ ಕೈಗಾರಿಕಾ ಬೇಡಿಕೆಯನ್ನು ಅವಲಂಬಿಸಿವೆ.
ಮತ್ತು ಬೆಳ್ಳಿ ಬೆಲೆಗಳು ಪ್ರತಿದಿನ ಏರಿಳಿತಗೊಳ್ಳುತ್ತವೆ, ಆದ್ದರಿಂದ ಖರೀದಿ ಮಾಡುವ ಮೊದಲು ಇತ್ತೀಚಿನ ದರಗಳನ್ನು ತಿಳಿದುಕೊಳ್ಳುವುದು ಮುಖ್ಯ. ಪ್ರಮುಖ ನಗರಗಳಲ್ಲಿ ಪ್ರಸ್ತುತ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಸುಮಾರು 1,67,620 ರೂ.ಗಳಷ್ಟಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಸುಮಾರು 1,53,650 ರೂ.ಗಳಷ್ಟಿದೆ.