https://youtube.com/shorts/4DdUNKT1F8Q?si=WqCYQodDieS5bX6t
Subscribe ನ್ಯೂಸಿಕ್ಸ್ ಕನ್ನಡ
newsics.com
ಹೈದರಾಬಾದ್: ದಕ್ಷಿಣ ಭಾರತದ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇದೇ ಗುರುವಾರ (ಫೆ.26) ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಶ್ಮಿಕಾ-ವಿಜಯ್ ಅವರ ಮದುವೆ ಮುಗಿದಿದೆ ಆದರೆ ಆರತಕ್ಷತೆ ಕಾರ್ಯಕ್ರಮ ಮಾರ್ಚ್ 04ರಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ರಾಜಕೀಯ ಗಣ್ಯರನ್ನು ಖುದ್ದಾಗಿ ಆಹ್ವಾನಿಸುತ್ತಿದ್ದಾರೆ.
ಆದರೆ ರೆಸೆಪ್ಶನ್‌ಗೂ ಮೊದಲೇ ಈ ಜೋಡಿಯ ಕ್ಯೂಟ್ ಜಟಾಪಟಿ ಬಹಿರಂಗವಾಗಿದೆ. ಇಬ್ಬರು ಮ್ಯಾಚಿಂಗ್ ಡ್ರೆಸ್ ಹಾಕಲು ಎಲ್ಲಾ ಪ್ಲಾನ್ ಮಾಡಿದ್ದಾರೆ. ಭರ್ಜರಿ ತಯಾರಿಯೊಂದಿಗೆ ರಶ್ಮಿಕಾ ಆಗಮಿಸಿದ್ದಾರೆ. ಇತ್ತ ವಿಜಯ್ ದೇವರಕೊಂಡ ಕೂಡ ಅಷ್ಟೇ ಹ್ಯಾಂಡ್‌ಸಮ್ ಆಗಿ ಆಗಮಿಸಿದ್ದಾರೆ. ಇಬ್ಬರ ಡ್ರೆಸ್ ಬಣ್ಣ ಬೇರೆ ಬೇರೆ. ಇದು ರಶ್ಮಿಕಾ ಕೋಪಕ್ಕೂ ಕಾರಣವಾಗಿದೆ. ಇವರಿಬ್ಬರ ಈ ಕ್ಯೂಟ್ ಜಗಳದ ವಿಡಿಯೋ ಬಹಿರಂಗವಾಗಿದೆ.
ಮಾನ್ಯವರ್ ಬ್ರ್ಯಾಂಡ್ ನವ ಜೋಡಿಗಳಾದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿಯನ್ನು ತನ್ನ ಬ್ರ್ಯಾಂಡ್ ಪ್ರಮೋಶನ್‌ಗೆ ಬಳಸಿಕೊಂಡಿದೆ. ಇಬ್ಬರು ಮ್ಯಾಚಿಂಗ್ ಡ್ರೆಸ್ ಪ್ಲಾನ್ ಮಾಡಿರುತ್ತಾರೆ. ಆದರೆ ಕೊನೆಯ ಕ್ಷಣದಲ್ಲಿ ವಿಜಯ್ ದೇವರಕೊಂಡ ಬೇರೆ ಬಣ್ಣದ ಡ್ರೆಸ್ ಧರಿಸಿ ಆಗಮಿಸಿರುತ್ತಾರೆ. ಮ್ಯಾಚಿಂಗ್ ಪ್ಲಾನ್ ಮಾಡಿದ್ದೆವು. ಯಾಕೆ ನೀನು ಬೇರೆ ಬಣ್ಣಧ ಡ್ರೆಸ್ ಧರಿಸಿದ್ದಿಯಾ, ಕ್ಯಾನ್ಸಲ್ ಎಂದು ರಶ್ಮಿಕಾ ಮಂದಣ್ಣ ಖಡಕ್ ಆಗಿ ಹೇಳಿದ್ದಾಳೆ. ಇತ್ತ ಇವರಿಬ್ಬ ನಡುವಿನ ಸಂಭಾಷೆಯನ್ನು ಹಾಡಿನ ಮೂಲಕ ತೋರಿಸಲಾಗಿದೆ. ಅದ್ಭುತ ಜಾಹೀರಾತು ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.
ಸೆಲೆಬ್ರೆಟಿ ಜೋಡಿಗಳ ಈ ವಿಡಿಯೋ ಒಂದು ಸಾರಿ ನೋಡಿದರೆ ನಿಮ್ಮ ಟೆನ್ಶನ್ ಕಡಿಮೆಯಾಗುತ್ತೆ. ಈ ಕ್ಯೂಟ್ ಜೋಡಿ ಕಿತ್ತಾಡಿಕೊಂಡಿರುವುದು ನಿಜ. ಆದರೆ ರಿಯಲ್ ಅಲ್ಲ, ಇದು ಜಾಹೀರಾತಿಗಾಗಿ ಚಿತ್ರೀಕರಿಸಿದ ವಿಡಿಯೋ. ಪ್ರತಿಷ್ಠಿತ ಡ್ರೆಸ್ ಬ್ರ್ಯಾಂಡ್ ಮೇಡ್ ಫಾರ್ ಈಚ್ ಅದರ್ ಪರಿಕಲ್ಪನೆಯಲ್ಲಿ ಈ ಜಾಹೀರಾತು ಬಿಡುಗಡೆ ಮಾಡಿದೆ.
https://www.instagram.com/reel/DVVqF26E566/?igsh=OHJoY2R1M2Zmbmc0