Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ರಶ್ಮಿಕಾ ಮಂದಣ್ಣ ಇನ್ಮುಂದೆ ಪತಿ ವಿಜಯ್ ದೇವರಕೊಂಡ ಜೊತೆ ಮಾತ್ರ ಸಿನಿಮಾ ಮಾಡೋದಾ?
ಪ್ರಮುಖಮನರಂಜನೆ

ರಶ್ಮಿಕಾ ಮಂದಣ್ಣ ಇನ್ಮುಂದೆ ಪತಿ ವಿಜಯ್ ದೇವರಕೊಂಡ ಜೊತೆ ಮಾತ್ರ ಸಿನಿಮಾ ಮಾಡೋದಾ?

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com
ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿ, ಭಾರತದ ಬಹುಭಾಷೆಗಳಲ್ಲಿ ಬೇಡಿಕೆ ಹೊಂದಿರುವ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಪ್ರಸ್ತುತ ಸುಮಾರು 12 ಪ್ರಾಜೆಕ್ಟ್ಗಳನ್ನು ಹೊಂದಿದ್ದಾರೆ. ಈ ಸಂಖ್ಯೆಯೇ ಬಹಳಷ್ಟು ಹೇಳುತ್ತಿವೆ. ಚಲನಚಿತ್ರೋದ್ಯಮ ನಿಧಾನವಾಗಿ ಹೇಗೆ ಬದಲಾಗುತ್ತಿದೆ ಎಂಬುದನ್ನು ಈ ಸಂಖ್ಯೆ ಎತ್ತಿ ಹಿಡಿದಿದೆ. ವೈವಾಹಿಕ ಜೀವನದ ಜೊತೆಗೆ ಪ್ರತಿಭೆ, ಸಾಮರ್ಥ್ಯ ಪ್ರದರ್ಶನ, ಸಾಧನೆಯ ಸಾಕಾರವೂ ಬಹಳ ಮುಖ್ಯ ಎಂಬುದನ್ನು ಇದು ಒತ್ತಿ ಹೇಳುತ್ತಿದೆ.
ರಶ್ಮಿಕಾ ಈಗಾಗಲೇ ತಮ್ಮ ಮುಂದಿನ ದೊಡ್ಡ ಸಿನಿಮಾಗಳ ಬಿಡುಗಡೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಕಾಕ್‌ಟೇಲ್ 2ನಲ್ಲಿ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಜೊತೆ ತೆರೆಹಂಚಿಕೊಂಡಿದ್ದು, ಹೋಮಿ ಅದಜಾನಿಯಾ ನಿರ್ದೇಶಿಸಿದ್ದಾರೆ. ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ.
ಕಾಕ್ಟೇಲ್ 2 ನಂತರ ರಶ್ಮಿಕಾ ಮತ್ತು ಶಾಹಿದ್ ಮತ್ತೊಂದು ರೊಮ್ಯಾಂಟಿಕ್ ಡ್ರಾಮಾಗಾಗಿ ಮತ್ತೆ ಒಂದಾಗುವ ಸಾಧ್ಯತೆಗಳಿವೆ ಎಂದು ವರದಿಗಳು ಸೂಚಿಸಿವೆ. ಸ್ಟ್ರಾಂಗ್ ಆನ್ ಸ್ಕ್ರೀನ್ ಕೆಮಿಸ್ಟ್ರಿ ಮೇಲೆ ಚಿತ್ರತಂಡ ಕೆಲಸ ಮಾಡುತ್ತಿದೆ ಎಂದು ಹೇಳಲಾಗಿದೆ. ರಶ್ಮಿಕಾ ಅವರ ಸ್ಟಾರ್ ಪವರ್‌ನಲ್ಲಿ ಚಿತ್ರರಂಗ ಎಷ್ಟು ನಂಬಿಕೆಯಿಟ್ಟಿದೆ ಎಂಬುದನ್ನು ಇದು ಒತ್ತಿ ಹೇಳಿದೆ.
ಇದಲ್ಲದೇ ಪತಿ ವಿಜಯ್ ದೇವರಕೊಂಡ ಜೊತೆ ‘ರಣಬಾಲಿ’ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಬ್ರಿಟಿಷ್ ಆಳ್ವಿಕೆ ಕಾಲದ ಒಂದು ಪೀರಿಯಾಡಿಕಲ್ ಆ್ಯಕ್ಷನ್ ಡ್ರಾಮಾ ಆಗಿದೆ. ಇದು ವಸಾಹತುಶಾಹಿ ದಬ್ಬಾಳಿಕೆ ಮತ್ತು ಶೌರ್ಯದ ಬಗ್ಗೆ ಹೇಳಲಿದ್ದು, ವಿರೋಶ್ ಜೋಡಿಯ ಮೂರನೇ ಸಿನಿಮಾ ಆಗಲಿದೆ.
ಅಲ್ಲು ಅರ್ಜುನ್ ಜೊತೆಗೆ ‘ಪುಷ್ಪ 3: ದಿ ರಾಂಪೇಜ್‌’ನಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಮರಳಲಿದ್ದಾರೆ. ನಿರ್ದೇಶಕ ಸುಕುಮಾರ್ ಅವರು ಮೂರನೇ ಭಾಗದಲ್ಲಿ ಪಾತ್ರವನ್ನು ವಿಸ್ತರಿಸಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳು, ನಟಿಯ ಸ್ಕ್ರೀನ್ ಸ್ಪೇಸ್ ಈ ಬಾರಿ ನಾಯಕನ ಸ್ಕ್ರೀನ್ ಸ್ಪೇಸ್ಗೆ ಸಮನಾಗಿರಬಹುದು ಎಂದು ಹೇಳಿವೆ. ಇದು ಮಾಸ್ ಆ್ಯಕ್ಷನ್ ಫ್ರಾಂಚೈಸಿಯಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ.
ಅಟ್ಲೀ ನಿರ್ದೇಶನದ ‘AA22xA6’ ಎಂಬ ತಾತ್ಕಾಲಿಕ ಶೀರ್ಷಿಕೆಯ ಬಿಗ್ ಬಜೆಟ್ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ನಟಿ ದಿಟ್ಟ ನಕಾರಾತ್ಮಕ ಪಾತ್ರವನ್ನು ನಿರ್ವಹಿಸಬಹುದು. ಇದು ನಿಜವಾದರೆ, ರಶ್ಮಿಕಾರ ಮುದ್ದಿನ ಹುಡುಗಿ ಇಮೇಜ್‌ನಿಂದ ಪ್ರಮುಖ ಬದಲಾವಣೆ ಆಗಲಿದೆ.
ಬ್ಲಾಕ್ಬಸ್ಟರ್ ಅನಿಮಲ್ ಚಿತ್ರದ ಮುಂದುವರಿದ ಭಾಗವಾದ ‘ಅನಿಮಲ್ ಪಾರ್ಕ್’ ಸಿನಿಮಾ ಕೂಡಾ ನಟಿಯ ಕೈಯಲ್ಲಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ರಣ್ಬೀರ್ ಕಪೂರ್ ಅವರೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ. ರಶ್ಮಿಕಾ ಈಗಾಗಲೇ ಈ ಮುಂದುವರಿದ ಭಾಗವನ್ನು “ಮ್ಯಾಡ್ನೆಸ್” ಎಂದು ವರ್ಣಿಸಿದ್ದಾರೆ. ಸ್ಕ್ರಿಪ್ಟ್‌ನ ಕೇವಲ ಒನ್ ಲೈನ್ ತಮ್ಮನ್ನು ಮತ್ತೆ ಚಿತ್ರಕ್ಕೆ ಮರಳಲು ಮನವೋಲಿಸಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ನಟಿಯ ಮುಂಬರುವ ಸಿನಿಮಾಗಳ ಪೈಕಿ ‘ಮೈಸಾ’ ಎಂಬ ರಾ ಆ್ಯಕ್ಷನ್ ಥ್ರಿಲ್ಲರ್ ಇದ್ದು, ಇದರಲ್ಲವರು ಉಗ್ರ ಬುಡಕಟ್ಟು ಮಹಿಳೆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈಗಾಗಲೇ ನಟಿಯ ಫಸ್ಟ್ ಲುಕ್ ಅನಾವರಣಗೊಂಡಿದ್ದು, ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿದೆ.
ಆರ್ಆರ್ಆರ್ ಸ್ಟಾರ್ ರಾಮ್ ಚರಣ್ ಜೊತೆ ಬಹುನಿರೀಕ್ಷಿತ ‘ಆರ್‌ಸಿ 17’ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದೊಂದು ಬಿಗ್ ಬಜೆಟ್ನ ದೇಶಭಕ್ತಿ ಡ್ರಾಮಾವಾಗುವ ನಿರೀಕ್ಷೆಯಿದೆ.
ಬಾಲಿವುಡ್ನ ಖ್ಯಾತ ನಿರ್ದೇಶಕ ಅನುರಾಗ್ ಬಸು ಅವರೊಂದಿಗಿನ ಯೋಜನೆಯಲ್ಲಿ ನಟಿ ಕೈ ಜೋಡಿಸಿದ್ದಾರೆ.
ರಶ್ಮಿಕಾ ‘ಏಕ್ ಸಾಥ್ ದೋ ದೋ’ ಶೀರ್ಷಿಕೆಯ ಚಿತ್ರದಲ್ಲೂ ನಟಿಸಿದ್ದಾರೆ. ಆದಾಗ್ಯೂ, ಬಹಳ ಸಮಯದಿಂದ ಈ ಸಿನಿಮಾ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಬಂದಿಲ್ಲ.
ಕೆ.ಎಸ್ ನಿರ್ದೇಶನದ ತೆಲುಗು ಬಯೋಪಿಕ್ ಸ್ಟುವರ್ಟ್‌ಪುರಂ ಡೊಂಗಾದಲ್ಲಿ ಸಾಯಿ ಶ್ರೀನಿವಾಸ್ ಬೆಲ್ಲಂಕೊಂಡ ಅವರೊಂದಿಗೆ ರಶ್ಮಿಕಾ ನಟಿಸುವುದಾಗಿ ಘೋಷಿಸಲಾಗಿದೆ. ಇದು ಕುಖ್ಯಾತ ಕಳ್ಳ ಟೈಗರ್ ನಾಗೇಶ್ವರ ರಾವ್ ಅವರ ಜೀವನವನ್ನು ಆಧರಿಸಿದೆ.
ಇದಲ್ಲದೇ, ಅವರು ರೈನ್‌ಬೋ ಚಿತ್ರವನ್ನು ಸಹ ನಿರ್ವಹಿಸುತ್ತಿದ್ದಾರೆ. ತೆಲುಗು-ತಮಿಳು ದ್ವಿಭಾಷಾ ಫ್ಯಾಂಟಸಿ ರೊಮ್ಯಾಂಟಿಕ್ ಡ್ರಾಮಾ ಈಗಾಗಲೇ ನಿರ್ಮಾಣ ಹಂತದಲ್ಲಿದೆ. ಇದೊಂದು ಮಹಿಳಾ ಪ್ರದಾನ ಸಿನಿಮಾವಾಗಿದೆ.

ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ ದಳಪತಿ ವಿಜಯ್ ಪತ್ನಿ: ನಟಿ ಜೊತೆ ಅನೈತಿಕ ಸಂಬಂಧ ಆರೋಪ

TAGGED:Will Rashmika Mandanna do films only with husband Vijay Devarakonda from now on?
Share This Article
Facebook Twitter Copy Link Print
Previous Article ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ ದಳಪತಿ ವಿಜಯ್ ಪತ್ನಿ: ನಟಿ ಜೊತೆ ಅನೈತಿಕ ಸಂಬಂಧ ಆರೋಪ
Next Article ನಿಖಿಲ್-ಡಿಕ್ಸನ್‌ರಿಂದ 19 ಕಾಲೇಜು ಯುವತಿಯರ ಮೇಲೆ ಅತ್ಯಾ*ಚಾರ!

Popular Posts

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

You Might Also Like

ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read
ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?