Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಪ್ರಿಯಕರನ ನಂಬಿ ಹೋದವಳ ಕಥೆ ಏನಾಯ್ತು?; ಯುವತಿ ಆರೋಪವೇನು?
ಕರ್ನಾಟಕಪ್ರಮುಖ

ಪ್ರಿಯಕರನ ನಂಬಿ ಹೋದವಳ ಕಥೆ ಏನಾಯ್ತು?; ಯುವತಿ ಆರೋಪವೇನು?

Share
2 Min Read
SHARE

https://youtube.com/shorts/9RsasXrq5aU?si=7o1s1Fcwa742mk87

Subscribe ನ್ಯೂಸಿಕ್ಸ್ ಕನ್ನಡ

newsics.com

ಹನಿಟ್ರ್ಯಾಪ್ ಕೇಸ್ ಆರೋಪಿತ ಯುವತಿ ತನ್ನ ಮೇಲೆ ಗ್ಯಾಂಗ್ರೇಪ್ ನಡೆದಿದೆ ಎಂದು ಆರೋಪಿಸಿ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪಾರ್ಟಿಯೊಂದಕ್ಕೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಸಂತ್ರಸ್ತೆ ದೂರಿದ್ದು, ಈ ಸಂಬಂಧ ನಿಖಿಲ್ ಮತ್ತು ಡಿಕ್ಸನ್ ಸಾಂಡ್ರಾ ಎಂಬ ಇಬ್ಬರ ವಿರುದ್ಧ ಫೆ.22ರಂದು ಎಫ್ಐಆರ್ ದಾಖಲಾಗಿದೆ. ಇದಕ್ಕೂ ಮುನ್ನ ಒಂದು ದಿನ ಮೊದಲಷ್ಟೇ ಅಂದರೆ ಫೆ.21ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಯುವತಿ ವಿರುದ್ಧ ಹನಿಟ್ರ್ಯಾಪ್ ಕೇಸ್ ದಾಖಲಾಗಿತ್ತು.

ಯುವತಿ ಆರೋಪವೇನು?
2026ರ ಜನವರಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಡಿಕ್ಸನ್ ಸಾಂಡ್ರಾ ಎಂಬಾತನ ಪರಿಚಯವಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರೂ ಹಲವು ಬಾರಿ ಭೇಟಿ ಆಗಿದ್ದೆವು. ಹೀಗಿರುವಾಗ ಫೆಬ್ರವರಿ 14ರಂದು ಕರೆ ಮಾಡಿದ್ದ ಡಿಕ್ಸನ್, ಜಕ್ಕೂರಿನಲ್ಲಿರುವ ವಿಲ್ಲಾವೊಂದಕ್ಕೆ ಪಾರ್ಟಿಗೆ ಬರುವಂತೆ ಕರೆದಿದ್ದ. ಹೀಗಾಗಿ ಗೆಳತಿಯ ಜೊತೆ ತಾನು ಮಧ್ಯರಾತ್ರಿ ಸುಮಾರು 1.15ಕ್ಕೆ ವಿಲ್ಲಾಗೆ ತೆರಳಿದ್ದು, ಈ ವೇಳೆ ಡಿಕ್ಸನ್ ಆತನ ಗೆಳೆಯ ಎಂದು ನಿಖಿಲ್ ಎಂಬಾತನನ್ನು ಪರಿಚಯಿಸಿದ್ದ. ಪಾರ್ಟಿ ನಡುವೆ ಡಿಕ್ಸನ್ ಮತ್ತು ನಿಖಿಲ್ ಸೇರಿ ಬಲವಂತವಾಗಿ ಮಾತ್ರೆಯನ್ನು ತಿನ್ನಿಸಿದ್ದಾರೆ. ಈ ವೇಳೆ ಕಣ್ಣುಗಳು ಮಂಜಾಗತೊಡಗಿದ್ದು, ಡಿಕ್ಸನ್ ರೂಮಿಗೆ ಕರೆದೊಯ್ದು ತನ್ನ ಮಲಗಿಸಿದ್ದ. ಆದಾದ ನಂತರ ನನಗೆ ಪ್ರಜ್ಞೆತಪ್ಪಿದೆ. ನನಗೆ ಎಚ್ಚರ ಆದಾಗ ನನ್ನ ದೇಹದ ಮೇಲೆ ಅರ್ಧಂಬರ್ಧ ಬಟ್ಟೆ ಇರುವುದರ ಜೊತೆಗೆ ಪಕ್ಕದಲ್ಲಿ ನಿಖಿಲ್ ಇರುವುದನ್ನು ಕಂಡು ಶಾಕ್ ಆಗಿದ್ದೇನೆ ಎಂದು ಯುವತಿ ಆರೋಪಿಸಿದ್ದಾಳೆ.
ಮೊದಲೇ ಗಾಬರಿಗೊಂಡಿದ್ದ ತಾನು ಡಿಕ್ಸನ್ ಬಗ್ಗೆ ಕೇಳಿದಾಗ ಹೊರಗಿನಿಂದ ಬಂದ ಆತ ತನ್ನ ಬಟ್ಟೆಯನ್ನು ಕಿತ್ತೆಸೆದಿದ್ದು, ಇಬ್ಬರೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಈ ವೇಳೆ ತಾನು ಜೋರಾಗಿ ಕಿರುಚಾಡಿದ ಪರಿಣಾಮ ನನ್ನನ್ನು ರೂಮ್ನಲ್ಲಿ ಲಾಕ್ ಮಾಡಲಾಗಿತ್ತು. ಬಳಿಕ ಮರುದಿನ ಮಧ್ಯಾಹ್ನದ ವೇಳೆಗೆ ಆರೋಪಿಗಳು ರೂಮ್ ಬಾಗಿಲು ತೆರೆದಿದ್ದು, ರಾತ್ರಿ ನಡೆದ ವಿಚಾರವನ್ನು ಯಾರಿಗಾದರೂ ಅಥವಾ ಪೊಲೀಸರಿಗೆ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ನಿಖಿಲ್ ಬೆದರಿಕೆ ಹಾಕಿರೋದಾಗಿ ಯುವತಿ ಆರೋಪಿಸಿದ್ದಾಳೆ.

ಇನ್ನು ಫೆ.21ರಂದು ಇದೇ ಯುವತಿಯ ವಿರುದ್ಧ ನಿಖಿಲ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ನಿಖಿಲ್ ಮತ್ತು ಡಿಕ್ಸನ್ ತನಗೆ ಮಾದಕ ವಸ್ತು ನೀಡಿ ಲೈಂಗಿಕ ದೌರ್ಜನ್ಯ ನಡೆಸಿರೋದಾಗಿ ಯುವತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ.

ಯುವತಿ ನೀಡಿದ ದೂರಿನನ್ವಯ ಸಕಲೇಶಪುರ ಮೂಲದ ವಿದ್ಯಾರ್ಥಿ ನಿಖಿಲ್ ಹಾಗೂ ವೆಸ್ಟ್ ಬೆಂಗಾಲ್ ಮೂಲದ ಡಿಕ್ಸಿನ್ ಎಂಬುವವರು ಪಾರ್ಟಿಗೆಂದು ಕರೆದೊಯ್ಯದು ಅತ್ಯಾಚಾರವೆಸಗಿದ್ದಾರಂತೆ. ಯುವತಿ ಕೊಟ್ಟ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ.

ಫೆಬ್ರವರಿ 14 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಆಗಿದ್ದ ಡಿಕ್ಸನ್ ಎಂಬಾತ ಜೊತೆ ಸಂತ್ರಸ್ತೆ ಪ್ರೀತಿಯಲ್ಲಿ ಬಿದ್ದಿದ್ದಳಂತೆ. ನಂತರ ಯುವತಿಗೆ ಡಿಕ್ಸನ್ ಪ್ರಪೋಸ್ ಕೂಡ ಮಾಡಿದ್ದ. ಪ್ರೀತಿ ಸೆಲೆಬ್ರೇಷನ್ ಮಾಡೋ ನೆಪದಲ್ಲಿ ಫೆಬ್ರವರಿ 14ನೇ ತಾರೀಖು ಯುವತಿಯನ್ನ ಡಿಕ್ಸನ್ ಪಾರ್ಟಿಗೆ ಕರೆದಿದ್ದ ಎಂದು ವರದಿ ಆಗಿದೆ.

IDFC ಬ್ಯಾಂಕ್ ಷೇರು ಪತನ: ಕೇಂದ್ರ ಸರ್ಕಾರಕ್ಕೆ 1100 ಕೋಟಿ ರೂ. ನಷ್ಟ

TAGGED:What happened to the story of the woman who trusted her lover?; Did Dixin commit a heinous act under the pretext of a party?
Share This Article
Facebook Twitter Copy Link Print
Previous Article IDFC ಬ್ಯಾಂಕ್ ಷೇರು ಪತನ: ಕೇಂದ್ರ ಸರ್ಕಾರಕ್ಕೆ 1100 ಕೋಟಿ ರೂ. ನಷ್ಟ
Next Article ಹೆಂಡ್ತಿಯನ್ನೇ ಬಾಡಿಗೆಗೆ ನೀಡುವುದಾಗಿ ಘೋಷಿಸಿದ ಗಂಡ

Popular Posts

ನಟ ದರ್ಶನ್ ಪತ್ನಿ, ವಿಜಯಲಕ್ಷ್ಮಿ ಬಾಸ್ ಚಿತ್ರದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದು ಯಾಕೆ?

2 Min Read

ಅಯೋಧ್ಯೆಯ ರಾಮ ಮಂದಿರ ದೇಣಿಗೆ ವಿವಾದ ; 1250 ಚಿನ್ನ, ವಜ್ರಗಳಿಂದ ಅಲಂಕರಿಸಿದ ಇಟ್ಟಿಗೆಗಳು ನಾಪತ್ತೆ!

2 Min Read

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 17-6-2026, ಬುಧವಾರ, ಇಂದು‌ ಹೇಗಿದೆ ನಿಮ್ಮ ಅದೃಷ್ಟ?

4 Min Read

You Might Also Like

ಕರ್ನಾಟಕಪ್ರಮುಖ

Elephant in garbage dump ಎಂಎಂ ಹಿಲ್ಸ್‌ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖ

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read
ಮನರಂಜನೆಪ್ರಮುಖ

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read
ಕರ್ನಾಟಕಪ್ರಮುಖ

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?