Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಟ್ರಂಪ್ ವಿರುದ್ದ ವಾದಿಸಿದ ಭಾರತೀಯ ಮೂಲದ ನೀಲ್ ಕಟ್ಯಾಲ್ – ಯಾರು ಈ ಕಾನೂನು ದೈತ್ಯ
ದೇಶಪ್ರಮುಖವಿದೇಶ

ಟ್ರಂಪ್ ವಿರುದ್ದ ವಾದಿಸಿದ ಭಾರತೀಯ ಮೂಲದ ನೀಲ್ ಕಟ್ಯಾಲ್ – ಯಾರು ಈ ಕಾನೂನು ದೈತ್ಯ

Share
2 Min Read
SHARE

https://youtube.com/shorts/meQfr5hOsT4?si=LcQn9Gs6kHRLRtfy

Subscribe ನ್ಯೂಸಿಕ್ಸ್ ಕನ್ನಡ

newsics.com

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಅವರಿಗೆ ಕ್ಯಾಬಿನೆಟ್​​ ಒಪ್ಪಿಗೆಯಿಲ್ಲದೆ ಸರ್ವಾಧಿಕಾರದಿಂದ ಜಾಗತಿಕ ಸುಂಕಗಳನ್ನು ವಿಧಿಸುವ ಅಧಿಕಾರವಿಲ್ಲ ಎನ್ನುವ ಮೂಲಕ ಅಮೆರಿಕದ ಸುಪ್ರೀಂ ಕೋರ್ಟ್​ ಟ್ರಂಪ್​ಗೆ ದೊಡ್ಡ ಶಾಕ್ ನೀಡಿದೆ. ಅಲ್ಲದೆ, ಟ್ರಂಪ್ ಅವರ ಸುಂಕ ನೀತಿ ಕಾನೂನುಬಾಹಿರ ಎಂದು ಕೂಡ ಹೇಳಿದೆ. ಈ ಮೂಲಕ ಟ್ರಂಪ್ ಅವರ ಜಾಗತಿಕ ಸುಂಕಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ 6-3 ಅಂತರದಿಂದ ರದ್ದುಗೊಳಿಸಿದೆ.ಕೋರ್ಟ್ ನಲ್ಲಿ ಟ್ರಂಪ್ ಗೆ ಹಿನ್ನಡೆ ಆಗುವಂತೆ ಮಾಡಿದ್ದು, ಭಾರತೀಯ ಮೂಲದ ಕಾನೂನು ದೈತ್ಯ ನೀಲ್ ಕಟ್ಯಾಲ್.

54ವರ್ಷದ ನೀಲ್ ಕಟ್ಯಾಲ್, ಅಮೆರಿಕಾದ ಅತ್ಯಂತ ವರ್ಚಸ್ಸಿನ ಮತ್ತು ಅನುಭವಿ ವಕೀಲರು. ಸುಪ್ರೀಂಕೋರ್ಟ್’ನಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. ಹಿಂದಿನ ಬರಾಕ್ ಒಬಾಮಾ ಆಡಳಿತದ ಅವಧಿಯಲ್ಲಿ ಇವರು ಅಮೆರಿಕಾದ ’ಆಕ್ಟಿಂಗ್ ಸಾಲಿಸಿಟರ್ ಜನರಲ್’ ಆಗಿ ಸೇವೆಯನ್ನು ಸಲ್ಲಿಸಿದ್ದರು. ಸಾಂವಿಧಾನಿಕ ವಿಷಯಗಳಲ್ಲಿ ದೇಶದ ಪ್ರಮುಖ ಕಾನೂನು ಸಲಹೆಗಾರರಾಗಿ ಇವರು ಗುರುತಿಸಲ್ಪಡುತ್ತಿದ್ದಾರೆ. ಇವರೇ, ಟ್ರಂಪ್ ಸುಂಕದ ವಿರುದ್ದ ಕೋರ್ಟ್’ನಲ್ಲಿ ವಾದ ಮಂಡಿಸಿದ್ದು.

ಅಮೆರಿಕಾದ ಲೀಡಿಂಗ್ ವಕೀಲರಾದ ನೀಲ್ ಕಟ್ಯಾಲ್ ಅಮೆರಿಕಾದ ಚಿಕಾಗೋ ನಗರದಲ್ಲಿ ಹುಟ್ಟಿದ್ದಾರೆ. ಇವರ ಪೋಷಕರು ಭಾರತದಿಂದ ಯುಎಸ್’ಗೆ ವಲಸೆ ಹೋದವರು. ಇವರ ತಾಯಿ ವೈದ್ಯೆ ಮತ್ತು ತಂದೆ ಇಂಜಿನಿಯರ್ ಆಗಿದ್ದರು. ಪ್ರತಿಷ್ಠಿತ ಯೇಲ್ ಲಾ ಸ್ಕೂಲ್’ನಲ್ಲಿ ಇವರು ಕಾನೂನು ಪದವಿಯನ್ನು ಪಡೆದವರು. ನೀಲ್ ಅವರ ಸಹೊದರಿ ಸೋನಿಯಾ ಕಟ್ಯಾಲ್ ಕೂಡಾ, ಕ್ಯಾಲಿಫೋರ್ನಿಯಾದ ವಿವಿಯಲ್ಲಿ ಕಾನೂನು ವಿಭಾಗದ ಲೆಚ್ಚರರ್ ಆಗಿದ್ದಾರೆ.

ಈ ಹಿಂದೆ ಕೂಡಾ, ಟ್ರಂಪ್ ಜಾರಿಗೆ ತಂದಿದ್ದ, ಮುಸ್ಲಿಂ ದೇಶಗಳ ಮೇಲೆ ಪ್ರಯಾಣ ನಿಷೇಧ ನೀತಿಯ ವಿರುದ್ದವಾಗಿಯೂ ಇವರು ನ್ಯಾಯಾಲಯದಲ್ಲಿ ಹೋರಾಡಿದ್ದರು. ಇಷ್ಟೇ ಅಲ್ಲದೇ, ’ Impeach: The Case Against Donald Trump’ ಎನ್ನುವ ಪುಸ್ತಕವನ್ನೂ ಇವರು ಬರೆದಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಸುಂಕದ ನಿರ್ಧಾರದಿಂದಾಗಿ, ಸಣ್ಣ ಕಂಪೆನಿಗಳಿಗೆ, ಖಾಸಗಿ ಕಂಪೆನಿಗಳಿಗೆ, ಭಾರತದಲ್ಲಿ ಅಗಾಧ ಮಾರುಕಟೆಯನ್ನು ಹೊಂದಿರುವ ಕಂಪೆನಿಗಳಿಗೆ, ಯುಎಸ್ ಮೂಲದ ಸಂಸ್ಥೆಗಳಾಗಿದ್ದರೂ, ಭಾರತದಲ್ಲಿ ಹೆಚ್ಚು ವಹಿವಾಟು ನಡೆಸುತ್ತಿರುವ ಕಂಪೆನಿಗಳಿಗೆ ತೊಂದರೆಯಾಗಿತ್ತು. ನೀಲ್ ಕಟ್ಯಾಲ್, ಇವರೆಲ್ಲರ ಪರವಾಗಿ ವಾದವನ್ನು ಮಂಡಿಸಿದ್ದರು.

ತೆರಿಗೆ ಮತ್ತು ಸುಂಕದ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸಂಸತ್ತಿಗೆ ಇದೆಯೇ ಹೊರತು, ಅಮೆರಿಕಾದ ಅಧ್ಯಕ್ಷರಿಗೆ ಅಲ್ಲ ಎನ್ನುವುದನ್ನು ನೀಲ್ ಕಟ್ಯಾಲ್, ಸಮರ್ಥವಾಗಿ ಸುಪ್ರೀಂಕೋರ್ಟ್’ನಲ್ಲಿ ಮಂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂವಿಧಾನವು, ತೆರಿಗೆ ವಿಧಿಸುವ ಅಧಿಕಾರವನ್ನು ಕಾರ್ಯಾಂಗಕ್ಕೆ ನೀಡಿಲ್ಲ, ನೀವು ಇದನ್ನು ಬಳಸಿದ ರೀತಿಯೇ ಕಾನೂನುಬಾಹಿರ ಎಂದು ಟ್ರಂಪ್’ಗೆ ಕೋರ್ಟ್ ಚಾಟಿ ಬೀಸಿದೆ.

https://www.newsics.com/2026/02/21/rs-3-crore-that-was-supposed-to-be-deposited-in-the-atm-was-looted-by-cms-staff/

TAGGED:Indian-origin Neil Katyalwho argued against Trump - who is this legal giant?
Share This Article
Facebook Twitter Copy Link Print
Previous Article ಎಟಿಎಂಗೆ ಹಾಕಬೇಕಿದ್ದ ಮೂರು ಕೋಟಿ ರೂ. CMS ಸಿಬ್ಬಂದಿಯಿಂದಲೇ ಲೂಟಿ!
Next Article 9 ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

Popular Posts

Today Gold Rate ಬೆಂಗಳೂರು ಗೋಲ್ಡ್ ರೇಟ್ ಟುಡೆ (ಜುಲೈ 27): ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಏರಿಳಿತ

2 Min Read

Everyday Foods That Can Support Your Health Naturally ಪ್ರತಿದಿನ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಸಿಗುವ ಅದ್ಭುತ ಲಾಭಗಳು!

2 Min Read

Karnataka Mansoon Report ಜುಲೈ 27ರಿಂದ ಆಗಸ್ಟ್ 1ರವರೆಗೆ ಕರ್ನಾಟಕದಲ್ಲಿ ಮಳೆ ಅಬ್ಬರ

1 Min Read

Karnataka Cabinet Expension ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ನಿರ್ಣಾಯಕ ಘಟ್ಟ

1 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

ASTRO ಇಂದು ವೈಧೃತಿ ಯೋಗ, ವಿಷ್ಕುಂಭ ಯೋಗ, ಶನಿ ಹಿಮ್ಮುಖ ಸಂಚಾರ ಆರಂಭ: ಈ ರಾಶಿಗಳ ಜನರಿಗೆ ಭಾರೀ ಲಾಭ!

4 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್

Health- Personal care ಉತ್ತಮ ಲೈಂಗಿಕ ಜೀವನಕ್ಕಾಗಿ ಈ ಆಹಾರಗಳಿಂದ ದೂರವಿರಿ

2 Min Read
ಪ್ರಮುಖಜ್ಯೋತಿಷ್ಯ

Astrology ಜುಲೈ 27ರಿಂದ ಈ 5 ರಾಶಿಯವರಿಗೆ ಎಚ್ಚರಿಕೆ ವಹಿಸುವ ಸಮಯ, ಜ್ಯೋತಿಷ್ಯ ಫಲಗಳು ಇಲ್ಲಿವೆ

2 Min Read
ಪ್ರಮುಖಆರೋಗ್ಯಲೈಫ್‌ಸ್ಟೈಲ್

Kitchen Hacks ಕತ್ತರಿಸಿದ ಹಣ್ಣುಗಳು ಬೇಗ ಕಪ್ಪಾಗುತ್ತವೆಯೇ? ಬಣ್ಣ ಬದಲಾಗದಂತೆ ತಡೆಯಲು ಇಲ್ಲಿದೆ ಸರಳ ಹಾಗೂ ಪರಿಣಾಮಕಾರಿ ಸಲಹೆಗಳು

3 Min Read

Social Networks

Facebook-f Instagram Twitter
Welcome Back!

Sign in to your account

Lost your password?