Subscribe ನ್ಯೂಸಿಕ್ಸ್ ಕನ್ನಡ
newsics.com
ಇರಾನ್‌ಗೆ 10 ದಿನಗಳ ಅಂತಿಮ ಗಡುವು ನೀಡಿದ್ದು, ಹೇಳಿದ್ದನ್ನು ಕೇಳದಿದ್ದರೆ ಯುದ್ಧ ಗ್ಯಾರಂಟಿ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಸಿದ್ದಾರೆ.
ಪರಿಣಾಮಗಳು ಭೀಕರವಾಗಿರುತ್ತವೆ ಎಂದು ಹೇಳುವ ಮೂಲಕ ಖಮೇನಿಗೆ ಅಲ್ಟಿಮೇಟಮ್ ನೀಡಿದ್ದಾರೆ. ಗುರುವಾರ ನಡೆದ ಗಾಜಾ ಶಾಂತಿ ಮಂಡಳಿಯ ಸಭೆಯಲ್ಲಿ ಅಧ್ಯಕ್ಷ ಟ್ರಂಪ್ ಟೆಹ್ರಾನ್ಗೆ ನೇರ ಎಚ್ಚರಿಕೆ ನೀಡಿದ್ದಾರೆ. ಮುಂದಿನ 10 ದಿನಗಳಲ್ಲಿ, ಇರಾನ್‌ನೊಂದಿಗೆ ಒಪ್ಪಂದವಾಗುತ್ತದೆಯೇ ಅಥವಾ ಯುದ್ಧವಾಗುತ್ತದೆಯೇ ಎಂಬುದು ಇಡೀ ಜಗತ್ತಿಗೆ ತಿಳಿಯಲಿದೆ.
ಯಾವುದೇ ಒಪ್ಪಂದಕ್ಕೆ ಬರದಿದ್ದರೆ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಮುಂದಿನ ಹೆಜ್ಜೆ ಎಂದರೆ ಇರಾನ್ನ ಪರಮಾಣು ಸೌಲಭ್ಯಗಳ ಮೇಲೆ ನೇರವಾಗಿ ದಾಳಿ ಮಾಡುವುದು ಎಂದರ್ಥ.ಕ್ಷಿಪಣಿಗಳು ಮತ್ತು ಪರಮಾಣು ಸೌಲಭ್ಯಗಳನ್ನು ಸಂಪೂರ್ಣವಾಗಿ ಕೆಡವಬೇಕು, ಇಲ್ಲದಿದ್ದರೆ ಅಮೆರಿಕ ದಾಳಿಗೆ ಸಿದ್ಧವಾಗಿದೆ ಎಂಬುದು ಟ್ರಂಪ್ ಅವರ ನೇರ ಸಂದೇಶವಾಗಿದೆ.