Subscribe ನ್ಯೂಸಿಕ್ಸ್ ಕನ್ನಡ
newsics.com
ಮುಂಬೈ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್ ಅವರ ಮಡದಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಅಮೃತಾ ಅವರು ತಮ್ಮ ವೃತ್ತಿ ಪಯಣಕ್ಕೆ ವಿದಾಯ ಹೇಳಿದ್ದಾರೆ.
ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ ಅವರು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ನಾನು 23 ವರ್ಷಗಳ ಹಿಂದೆ ಎಕ್ಸಿಸ್ ಬ್ಯಾಂಕ್‌ನ ಮ್ಯಾನೇಜ್‌ಮೆಂಟ್ ವಿಭಾಗದ ಟ್ರೈನಿ ಹುದ್ದೆಗೆ ಕೆಲಸಕ್ಕೆ ಸೇರಿದ್ದೆ. ಅಲ್ಲಿಂದ ಉಪಾಧ್ಯಕ್ಷೆ ಆಗುವವರೆಗಿನ ಬ್ಯಾಂಕ್‌ನ ಜೊತೆಗಿನ ಪಯಣ ಅದ್ಭುತವಾಗಿತ್ತು. ಎಕ್ಸಿಸ್ ಫ್ಯಾಮಿಲಿಯ ಜೊತೆ ಸೇರಿ ಕೆಲಸ ಮಾಡಿದ್ದಕ್ಕೆ ಹೆಮ್ಮೆ ಇದೆ. ಇಲ್ಲಿನ ಕೆಲಸದ ಅನುಭವ, ಸುಮಧುರ ಕ್ಷಣಗಳ ನೆನಪನ್ನು ನನ್ನ ಜೀವನದುದ್ದಕ್ಕೂ ಕೊಂಡೊಯ್ಯುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಅಮೃತಾ ಫಡಣವೀಸ್ ಅವರು ತಮ್ಮ ಈ ನಿರ್ಧಾರಕ್ಕೆ ಕಾರಣ ನೀಡಿಲ್ಲ. 46 ವರ್ಷ ವಯಸ್ಸಿನ ಅಮೃತಾ, ತಮ್ಮ ಪತಿಗೆ ರಾಜಕೀಯದಲ್ಲೂ ಸಹಾಯ ಮಾಡುತ್ತಾ, ಹಲವು ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಅವರು ಫಿಟ್ನೆಸ್‌ನಿಂದಲೂ ಸಾಕಷ್ಟು ಗುರುತಿಸಿಕೊಳ್ಳುತ್ತಿದ್ದಾರೆ.