https://youtube.com/shorts/tAQS6h_SZWA?si=vAoxcVAHQglCsru5
Subscribe ನ್ಯೂಸಿಕ್ಸ್ ಕನ್ನಡ
newsics.com
ಆಸ್ಟ್ರೇಲಿಯಾದಲ್ಲಿರುವ ಭಾರತ ಮೂಲದ ವ್ಯಕ್ತಿಯೊಬ್ಬರು 20ಕ್ಕೂ ಹೆಚ್ಚು ಪ್ರಾಪರ್ಟಿಗಳನ್ನು ಹೊಂದಿದ್ದರೂ ಬಾಡಿಗೆ ಮನೆಯಲ್ಲಿ ವಾಸವಿದ್ದಾರಂತೆ. ಇವರ ಹೆಸರು ರವಿ ಶರ್ಮಾ. 32 ವರ್ಷದ ಇವರು ಸರ್ಚ್ ಪ್ರಾಪರ್ಟಿ ಬಯರ್ಸ್ ಏಜೆನ್ಸಿ ಸಂಸ್ಥೆಯ ಸಂಸ್ಥಾಪಕರು.
ರವಿ ಶರ್ಮಾ ಅವರು ಆಸ್ಟ್ರೇಲಿಯಾದ ವಿವಿಧೆಡೆ ಹೊಂದಿರುವ 20ಕ್ಕೂ ಅಧಿಕ ಮನೆಗಳ ಒಟ್ಟು ಮೌಲ್ಯ 25 ಮಿಲಿಯನ್ ಎಯುಡಿ, ಅಥವಾ ಸುಮಾರು 160 ಕೋಟಿ ರೂ. ಆದರೆ, ತಮ್ಮದೇ ಮನೆಗಳನ್ನು ಬಿಟ್ಟು ಇವರು ಸಿಡ್ನಿಯ ಮೆಕ್ವಾರೀ ಪಾರ್ಕ್ನಲ್ಲಿರುವ ಪ್ರತಿಷ್ಠಿತ ಅಪಾರ್ಟ್ಮೆಂಟ್ವೊಂದರಲ್ಲಿ ಮೂರು ಬೆಡ್ರೂಮ್ಗಳ ಪೆಂಟ್ಹೌಸ್ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದಾರೆ.
ರವಿ ಶರ್ಮಾ ಅವರು ರೆಂಟ್ವೆಸ್ಟಿಂಗ್ (Rentvesting) ಎನ್ನುವ ತಂತ್ರ ಬಳಸುತ್ತಾರೆ. ನೀವು ಯಾವ ಏರಿಯಾದಲ್ಲಿ ಇರಬಯಸುತ್ತೀರೋ ಅಲ್ಲಿ ಪ್ರಾಪರ್ಟಿ ದರ ಹೆಚ್ಚಿದ್ದರೆ ಅಂಥ ಕಡೆ ಬಾಡಿಗೆ ಮನೆಯಲ್ಲಿ ವಾಸ ಇರುವುದು ರೆಂಟ್ವೆಸ್ಟಿಂಗ್ ತಂತ್ರಗಾರಿಕೆ. ಕಡಿಮೆ ಬೆಲೆ ಇರುವ ಕಡೆ ಪ್ರಾಪರ್ಟಿ ಖರೀದಿಸಲು ಸಾಧ್ಯವಾಗುತ್ತದೆ. ಇದರಿಂದ ಹೆಚ್ಚೆಚ್ಚು ಕಡೆ ರಿಯಲ್ ಎಸ್ಟೇಟ್ಗಳಲ್ಲಿ ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ.
ಆಸ್ಟ್ರೇಲಿಯಾದಲ್ಲಿ ರೆಂಟ್ವೆಸ್ಟಿಂಗ್ ತಂತ್ರಗಾರಿಕೆ ಟ್ರೆಂಡಿಂಗ್ನಲ್ಲಿದೆ. ಸಿಡ್ನಿಯಂತಹ ನಗರಗಳಲ್ಲಿ ರಿಯಲ್ ಎಸ್ಟೇಟ್ ಬೆಲೆ ಬಹಳ ಅಧಿಕ ಇದೆ. ಆದರೆ ಇಲ್ಲಿಯೇ ವಾಸಿಸಲು ಜನರು ಇಷ್ಟಪಡುತ್ತಾರೆ. ಹೀಗಾಗಿ, ಸಿಡ್ನಿಯಲ್ಲಿ ಮನೆಯನ್ನು ಬಾಡಿಗೆಗೆ ಪಡೆದು, ಬೇರೆ ಪ್ರದೇಶಗಳಲ್ಲಿ ಮನೆ ಖರೀದಿಗೆ ಹೆಚ್ಚು ಹೂಡಿಕೆ ಮಾಡಬಹುದು.