https://youtube.com/shorts/iPk0YEWO1t8?si=tOj6kwL_UdC2E5Z8
Subscribe ನ್ಯೂಸಿಕ್ಸ್ ಕನ್ನಡ
newsics.com
ವಿಶ್ವದ ಅತ್ಯಂತ ಆಘಾತಕಾರಿ ಮತ್ತು ವಿವಾದಾತ್ಮಕ ಲೈಂಗಿಕ ಅಪರಾಧಗಳಲ್ಲಿ ಒಂದು ಎಂದು ಹೇಳಲಾಗುತ್ತಿರುವ Jeffery Epstein ಫೈಲಿನ ಮತ್ತೊಂದು ದಾಖಲೆಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ, ಭಾರತೀಯ ಮೂಲದ ಸಂತ್ರಸ್ತೆಯೂ ಒಬ್ಬರು ಎಂದು ಹೇಳಲಾಗುತ್ತಿದೆ. ಗೌಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ, ಹೆಸರನ್ನು ಬಹಿರಂಗ ಪಡಿಸಲಾಗಿಲ್ಲ..
2020ರ ಜನವರಿ 13ರಂದು ಬಿಡುಗಡೆಯಾದ ಆಂತರಿಕ ಇಮೇಲ್ನ ಪ್ರಕಾರ, ಎಪ್ಸ್ಟೈನ್ ಫೈಲ್ನ ಸಂತ್ರಸ್ತರಿಗೆ ನೀಡುವ ನಿಧಿಯನ್ನು ಯುವತಿಗೆ ಒದಗಿಸುವ ಉದ್ದೇಶದಿಂದಾಗಿ ಅಮೆರಿಕದ ಆಧಿಕಾರಿಗಳು ಭಾರತೀಯ ಯುವತಿಯನ್ನು ಪತ್ತೆ ಮಾಡಲು ಮುಂದಾಗಿದ್ದಾರೆ.
ಎಪ್ಸ್ಟೀನ್ ವಿಕ್ಟಿಮ್ಸ್ ಎನ್ನುವ ಶೀರ್ಷಿಕೆಯ ಇಮೇಲ್’ನಲ್ಲಿ, ಒಂದು ವೇಳೆ, ಆಕೆಯ ವಿಳಾಸ ಮತ್ತು ಇತರ ಮಾಹಿತಿಯು ಲಭ್ಯವಾದರೆ, ಭಾರತದಲ್ಲಿರುವ ರಾಯಭಾರ ಕಚೇರಿಯೊಂದಿಗೆ ಸಂಪರ್ಕವನ್ನು ಸಾಧಿಸುವಂತೆ ಸೂಚಿಸಲಾಗಿದೆ. ಇಮೇಲ್’ನಲ್ಲಿ ವೈಯಕ್ತಿಕ ದಾಖಲೆಗಳನ್ನು ಗೌಪ್ಯವಾಗಿಡುವ ದೃಷ್ಟಿಯಿಂದ ಅಳಿಸಿಹಾಕಲಾಗಿದೆ ಎಂದು ವರದಿಯಾಗಿದೆ.
ದಿ ಪಯೋನೀರ್ ವರದಿಯ ಪ್ರಕಾರ, ‘ಅಮೆರಿಕದ ಅಧಿಕಾರಿಗಳು ಎಪ್ಸ್ಟೈನ್ ಫೈಲ್ ಸಂತ್ರಸ್ತರಿಗೆ ಒದಗಿಸಲಾಗುವ ಪರಿಹಾರ ವಿಧಾನಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಹಾಗೂ ಸಂತ್ರಸ್ತರಿಗೆ ನೀಡುವ ಪರಿಹಾರದ ಕುರಿತು ಉಲ್ಲೇಖಿಸಿದ್ದಾರೆ. ಜೊತೆಗೆ ಎಫ್ಬಿಐಗೆ ಸಲ್ಲಿಸಬೇಕಾದ ದಾಖಲೆಗಳು, ಅರ್ಜಿಯ ನಮೂನೆಯನ್ನು ರವಾನಿಸುವಂತೆ ಅಧಿಕಾರಿಗಳಿಗೆ ಕೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದರ ಜೊತೆಗೆ ಅರ್ಹ ಸಂತ್ರಸ್ತರಿಗೆ ತುರ್ತು ಸಹಾಯದ ಅಡಿಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಹಾಯ ಮಾಡುವ ಕುರಿತ ಉಲ್ಲೇಖವಿದೆ.
ಯುಎಸ್ ನ್ಯಾಯಾಂಗ ಇಲಾಖೆಯು ‘EFTA 00038425’ ಸಂಖ್ಯೆಯ ಅಡಿಯಲ್ಲಿ ಭಾರತೀಯ ಸಂತ್ರಸ್ತೆಯ ಕುರಿತಾದ ಮಾಹಿತಿ ನೀಡಿದೆ. ಅದರ ಅನ್ವಯ ‘ಭಾರತದಲ್ಲಿರುವ ಸಂತ್ರಸ್ತ ವ್ಯಕ್ತಿಯ ಕುರಿತು, ಅವರ ವಿಳಾಸ ಮತ್ತು ಸಂಪರ್ಕ ಮಾಹಿತಿಯನ್ನು ನಮಗೆ ನೀಡಿದರೆ, ನಾವು ಅಲ್ಲಿರುವ ನಮ್ಮ ರಾಯಭಾರ ಕಚೇರಿಯ ಸಹೋದ್ಯೋಗಿಗಳೊಂದಿಗೆ ಸಮನ್ವಯ ಸಾಧಿಸುತ್ತೇವೆ. ನಿಮಗೆ ಯಾವುದೇ ಹೆಚ್ಚುವರಿ ಪ್ರಶ್ನೆಗಳಿದ್ದರೆ ದಯವಿಟ್ಟು ನಮಗೆ ಕರೆ ಮಾಡಿ’ ಎಂದಿದ್ದಾರೆ.