https://youtube.com/shorts/iPk0YEWO1t8?si=tOj6kwL_UdC2E5Z8
Subscribe ನ್ಯೂಸಿಕ್ಸ್ ಕನ್ನಡ
newsics.com
ದಾಬಸ್‍ಪೇಟೆ: ನಾನು ಇನ್ನೂ ರಾಜಕೀಯದಲ್ಲಿ ಅಂಬೆಕಾಲು ಇಡುತ್ತಿದ್ದು, ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಿದೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಮಠದಲ್ಲಿ ಮಂಗಳವಾರ ಶ್ರೀಮಠದಿಂದ ನೀಡಲಾದ ಶಿವಗಂಗೋತ್ರಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಇದೇ ಮೊದಲ ಬಾರಿಗೆ ಮಠಕ್ಕೆ ಭೇಟಿ ನೀಡುತ್ತಿದ್ದೇನೆ. ನಾನು ಇದನ್ನು ಪ್ರಶಸ್ತಿ ಎನ್ನುವುದಿಲ್ಲ, ನನ್ನ ರಾಜಕೀಯ ಜೀವನಕ್ಕೆ ಕಿರೀಟ ಎಂದು ಭಾವಿಸಿಸುತ್ತೇನೆ. ಶಿವಗಂಗೋತ್ರಿ ಪ್ರಶಸ್ತಿಯನ್ನು ಮಾತ್ರ ಸ್ವೀಕರಿಸುತ್ತೇನೆ. ಬೆಳ್ಳಿ ಕಿರೀಟವನ್ನು ಮಠದ ಕಾರ್ಯಗಳಿಗೆ ನೀಡುತ್ತೇನೆ, ಪೂಜ್ಯರು ಸ್ವೀಕರಿಸಬೇಕೆಂದು ಮನವಿ ಮಾಡಿ ಮಠಕ್ಕೆ ಹಿಂತಿರುಗಿಸಿದರು. ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ಹತ್ತಕ್ಕೂ ಹೆಚ್ಚು ಮಠಾಧೀಶರು ವಿಜಯೇಂದ್ರ ಅವರಿಗೆ ಹೂವು ಸುರಿದು ಮಂತ್ರಪಠಣೆ ಮಾಡಿ ಆಶೀರ್ವದಿಸಿದರು.
https://www.newsics.com/2026/02/18/6-crore-roses-exported-from-bengaluru-for-valentines-day/