https://youtube.com/shorts/lXpfR5AMayg?si=7veIYlHbfMC24bIz
Subscribe ನ್ಯೂಸಿಕ್ಸ್ ಕನ್ನಡ
newsics.com
ಹಾಸ್ಟೆಲ್ ವಾರ್ಡನ್ ಕಿರುಕುಳದಿಂದ ನೊಂದು ಚಿತ್ರದುರ್ಗ ಭರಮಸಾಗರ ಗ್ರಾಮದ ಡಿವಿಎಸ್ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಶಾಲಾ ಕಟ್ಟಡದ ಎರಡನೇ ಮಹಡಿಯಿಂದ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಕೊಟ್ರೇಶ್ (16) ಮೃತ ವಿದ್ಯಾರ್ಥಿ ಜಿಗಿಯುತ್ತಿರುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಕರಿಯಮ್ಮನಹಳ್ಳಿಯ ಗುರುಲಿಂಗಯ್ಯ ಎಂಬವರ ಮಗ ಕೊಟ್ರೇಶ್, ಭ್ರಮಸಾಗರದ ಡಿವಿಎಸ್ ವಸತಿ ಶಾಲೆಯಲ್ಲಿ ಓದುತ್ತಿದ್ದನು. ಮಗನ ಸಾವಿಗೆ ಹಾಸ್ಟೆಲ್ ವಾರ್ಡನ್ ದೀಪಾ, ನಾಗರಾಜ್, ಪ್ರಿನ್ಸಿಪಾಲ್ ಸುಶ್ಮಿತಾ ಮತ್ತು ಆಡಳಿತ ಮಂಡಳಿಯೇ ಕಾರಣ ಎಂದು ಗುರುಲಿಂಗಯ್ಯ ಆರೋಪಿಸಿದ್ದಾರೆ.ಭಾನುವಾರವಷ್ಟೇ ಶಾಲೆಗೆ ಬಂದು ಮಗನನ್ನು ನೋಡಿಕೊಂಡು ಗುರುಲಿಂಗಯ್ಯ ಹೇಳಿದ್ದರು.
ಹಾಸ್ಟೆಲ್ ವಾರ್ಡನ್‌ಗಳಾದ ದೀಪಾ ಮತ್ತು ನಾಗರಾಜ್ ತನಗೆ ಕಿರುಕುಳ ನೀಡುತ್ತಿರುವ ವಿಷಯವನ್ನು ತಂದೆಗೆ ಕೊಟ್ರೇಶ್ ಹೇಳಿಕೊಂಡಿದ್ದನು. ಗುರುಲಿಂಗಯ್ಯ ಅವರು ಈ ವಿಷಯವನ್ನು ಪ್ರಿನ್ಸಿಪಾಲ್ ಸುಶ್ಮಿತಾ ಗಮನಕ್ಕೆ ತಂದಿದ್ದರು.
ಈ ಸಂಬಂಧ ಗುರುಲಿಂಗಯ್ಯ ಅವರು ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.