https://youtube.com/shorts/lXpfR5AMayg?si=7veIYlHbfMC24bIz
Subscribe ನ್ಯೂಸಿಕ್ಸ್ ಕನ್ನಡ
newsics.com
ಇಲ್ಲೊಬ್ಬರು 54 ವರ್ಷದ ಮಹಿಳಾ ಅಧಿಕಾರಿ, ತಮಗಿಂತ 12 ವರ್ಷ ಚಿಕ್ಕವನಾದ ಸಹೋದ್ಯೋಗಿಯನ್ನು ಮದುವೆಯಾಗಲು, ಆತನ ಹೆಂಡತಿಗೆ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ಕೊಟ್ಟಿರುವ ಪ್ರಕರಣ ಭೋಪಾಲ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ.
ಕೇಂದ್ರ ಸರ್ಕಾರಿ ಇಲಾಖೆಗೆ ಹೊಸದಾಗಿ ಕೆಲಸಕ್ಕೆ ಸೇರಿದ್ದ 42 ವರ್ಷದ ಉದ್ಯೋಗಿ ಮೇಲೆ, ಅದೇ ಇಲಾಖೆಯ 54 ವರ್ಷದ ಹಿರಿಯ ಅಧಿಕಾರಿಗೆ ಪ್ರೀತಿ ಹುಟ್ಟಿದೆ. ಈ ಅಫೇರ್ ಶುರುವಾದ ಮೇಲೆ, ಆತ ತನ್ನ ಹೆಂಡತಿ ಹಾಗೂ 16 ಮತ್ತು 12 ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ಕಡೆಗಣಿಸಲು ಶುರುಮಾಡಿದ. ಮನೆಯಲ್ಲಿ ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ದಿನವೂ ಜಗಳ ನಡೆಯುತ್ತಿತ್ತು.
ಇದರಿಂದ ಬೇಸತ್ತ ಹಿರಿಯ ಮಗಳು ಖಿನ್ನತೆಗೆ ಜಾರಿದ್ದಳು. ಕೊನೆಗೆ, ಮನೆಯಲ್ಲಿ ಶಾಂತಿ ಬೇಕೆಂದು ಆಕೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋದಳು. ಕೋರ್ಟ್‌ನಲ್ಲಿ ಸುಮಾರು ಐದು ವರ್ಷಗಳ ಕಾಲ ದಂಪತಿಗೆ ಕೌನ್ಸೆಲಿಂಗ್ ನಡೆಸಲಾಯಿತು. ಆದರೆ, ಗಂಡ ಮಾತ್ರ ತನಗೆ ಹೆಂಡತಿ ಜೊತೆ ಬಾಳಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ.
ಕೊನೆಗೆ, ಗಂಡನಿಂದ ವಿಚ್ಛೇದನ ಪಡೆಯಲು ಪತ್ನಿ ಪರಿಹಾರಕ್ಕೆ ಬೇಡಿಕೆಯಿಟ್ಟರು. ಒಂದು ಡ್ಯೂಪ್ಲೆಕ್ಸ್ ಫ್ಲ್ಯಾಟ್ ಹಾಗೂ 27 ಲಕ್ಷ ರೂಪಾಯಿ ನಗದು ನೀಡಬೇಕೆಂದು ಕೇಳಿದರು. ಇದಕ್ಕೆ ಒಪ್ಪಿದ ಮಹಿಳಾ ಅಧಿಕಾರಿ, ತಮ್ಮ ಜೀವನದ ಸಂಪಾದನೆಯಿಂದಲೇ ಈ ಹಣವನ್ನು ಕೊಡುವುದಾಗಿ ಹೇಳಿದರು. ಒಪ್ಪಂದದಂತೆ ಹಣ ಕೈಸೇರಿದ ನಂತರ ದಂಪತಿ ವಿಚ್ಛೇದನ ಪಡೆದುಕೊಂಡಿದ್ದಾರೆ.