https://youtube.com/shorts/74VSpekXhn4?si=vijWxjVUFibUVb68
Subscribe ನ್ಯೂಸಿಕ್ಸ್ ಕನ್ನಡ
newsics.com
ಪಾಟ್ನಾ: ಯುವ ವಿದ್ಯಾರ್ಥಿಗಳ ಮಾತು, ಪ್ರಚೋದನೆ, ಅಸಭ್ಯ ಮಾತುಗಳು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
21 ಸೆಕೆಂಡ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾ, ವಾಟ್ಸ್ಯಾಪ್ ಸೇರಿದಂತೆ ಹಲವು ತಾಣಗಳಲ್ಲಿ ಹರಿದಾಡುತ್ತಿದ್ದು, ಸಂಚಲನ ಸೃಷ್ಟಿಸಿದೆ.
ವಿದ್ಯಾರ್ಥಿಗಳ ಗುಂಪು ಶಾಲೆಯ ಕ್ರೈಸ್ತ ಸನ್ಯಾಸಿನಿಗೆ ಕಾಮ ಪ್ರಚೋದನೆ, ನೀಲಿ ಚಿತ್ರಕ್ಕೆ ಪ್ರಚೋದನೆ ನೀಡುತ್ತಿರುವ ವಿಡಿಯೋ ಕೋಲಾಹಲ ಸೃಷ್ಟಿಸಿದೆ.
ವಿದ್ಯಾರ್ಥಿಗಳು ಹಾಸ್ಯ, ತಮಾಷೆ ಹೆಸರಿನಲ್ಲಿ ಮಾತನಾಡುತ್ತಿರುವ ಅಸಭ್ಯ ವಿಚಾರಗಳು ಅಮಾನವೀಯ ಎಂದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
21 ಸೆಕೆಂಡ್ ವಿಡಿಯೋದಲ್ಲಿ ಏನಿದೆ?
ಶಾಲಾ ಮೈದಾನದಲ್ಲಿ ಕ್ರೈಸ್ತ ಸನ್ಯಾನಿಸಿ (ಟೀಚರ್ ) ವಿದ್ಯಾರ್ಥಿಗಳನ್ನು ನಿಯಂತ್ರಿಸುವ ದೃಶ್ಯವಿದೆ.
ವಿದ್ಯಾರ್ಥಿಗಳ ಹೆಸರು ಹೇಳಿ ಕರೆದು ಇತ್ತ ಬರುವಂತೆ ಸೂಚನೆ ನೀಡುತ್ತಿದ್ದಾರೆ. ಇದೇ ವೇಳೆ ಕೆಲ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಾ ಡಾರ್ಕ್ ಹ್ಯೂಮರ್ (ಕಟು ಹಾಸ್ಯ) ಮಾತುಗಳನ್ನು ಆಡಿದ್ದಾರೆ. ಕ್ರೈಸ್ತ ಸನ್ಯಾನಿಸಿ ಬಳಿ ತೆರಳಿ, ಸಿಸ್ಟರ್, ಸಿಸ್ಟರ್, ನೀವು ಬ್ರಾಜರ್ಸ್ ((Brazzers ಖ್ಯಾತ ನೀಲಿ ಚಿತ್ರಗಳ ಸಂಸ್ಥೆ) ಪರ ಆಡುತ್ತೀರಾ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಇಷ್ಟಕ್ಕೇ ವಿದ್ಯಾರ್ಥಿಗಳ ಅಸಭ್ಯ ವರ್ತನೆ ನಿಂತಿಲ್ಲ. ನಿಮ್ ತಂಡದಲ್ಲಿ ಜಾನಿ ಸಿನ್ಸ್, ಮಿಯಾ ಕಲೀಫಾ ಸೇರಿದಂತೆ ಹಲವರು ಇರುತ್ತಾರೆ ಎಂದು ಕಾಮ ಪ್ರಚೋದನೆಗೆ ಯತ್ನಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಈ ಮಾತುಗಳನ್ನು ಹೇಳುತ್ತಿದ್ದಂತೆ ಕ್ರೈಸ್ತ ಸನ್ಯಾನಿಸಿ ರೆಕಾರ್ಡ್ ವಿಡಿಯೋದತ್ತ ಕೈ ಬೀಸುತ್ತಾರೆ. ಈ ವೇಳೆ ವಿಡಿಯೋ ಆಫ್ ಆಗಿದೆ.
ಬಿಹಾರದ ಜಮುಯಿ ಜಿಲ್ಲೆಯ ಝಝಾದಲ್ಲಿರುವ ಸೆಂಟ್ ಜೊಸೆಫ್ ಶಾಲೆಯಲ್ಲಿ ಈ ಘಟನೆ ನಡೆದಿದೆ.
ವಿದ್ಯಾರ್ಥಿಗಳ ಗುಂಪು ಸಲೀಸಾಗಿ ನೀಲಿ ಚಿತ್ರ ತಾರೆ ಸಂಸ್ಥೆ, ನೀಲಿ ಚಿತ್ರ ತಾರೆಯರ ಹೆಸರು ಸೇರಿದಂತೆ ಹಲವು ವಿಚಾರಗಳನ್ನು ಕ್ರೈಸ್ತ ಸನ್ಯಾಸಿನಿ ಬಳಿ ಹೇಳುತ್ತಿದೆ. ಇದು ಅಸಭ್ಯತೆಯ ಪ್ರದರ್ಶನವಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದೆ ಸಾಮಾಜಿಕ ಕಾರ್ಯಕರ್ತ ಸೂರಜ್ ಬರ್ನವಾಲ್ ಜಮುಯಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಇತ್ತ ಜಿಲ್ಲಾಧಿಕಾರಿಗಳು ಈ ಕುರಿತು ತನಿಖೆಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಇಲ್ಲಿ ವಿದ್ಯಾರ್ಥಿಗಳು ಅಪ್ರಾಪ್ತರಾಗಿರುವ ಕಾರಣ ಜುವೆನೆಲ್ ನೆರವು ಪಡೆಯುವ ಸಾಧ್ಯತೆ ಇದೆ. ಶಾಲಾ ಆಡಳಿತ ಮಂಡಳಿ ಈ ಕುರಿತು ಆಂತರಿಕ ತನಿಖೆ ನಡೆಸಲು ಸೂಚಿಸುವ ಸಾಧ್ಯತೆ ಇದೆ.
ಇದೇ ವೇಳೆ ಕಾರ್ಯಕರ್ತ ಸೂರಜ್, ಶಾಲಾ ಆಡಳಿತ ಮಂಡಳಿಯಲ್ಲಿನ ಅಶಿಸ್ತು ಇದಕ್ಕೆ ಒಂದ ಕಾರಣವಾಗಿದೆ. ಹೀಗಾಗಿ ಆಡಳಿತ ಮಂಡಳಿ ವಿರುದ್ದವೂ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.
https://twitter.com/i/status/2022930737016828180