https://youtube.com/shorts/11hvM0bsJ2E?si=Q5TtqzkdIZKrnxiz
Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ: ಏರ್ ಇಂಡಿಯಾದ ಮತ್ತೊಂದು ಮಹಾ ಎಡವಟ್ಟು ಬೆಳಕಿಗೆ ಬಂದಿದ್ದು,ಈವಿಷಯ ಕೇಳಿದ ಪ್ರಯಾಣಿಕರು ದೇವರಿಗೊಂದು ಥ್ಯಾಂಕ್ಸ್ ಹೇಳುತ್ತಿದ್ದಾರೆ.
ವಾಯು ಯೋಗ್ಯತಾ ಪರಿಶೀಲನಾ ಪ್ರಮಾಣಪತ್ರ (ವಿಮಾನ ಫಿಟ್ನೆಸ್ ಪ್ರಮಾಣಪತ್ರ) ಇಲ್ಲದೆ ಏರ್ ಇಂಡಿಯಾ ಎಂಟು ಬಾರಿ ಹಾರಾಟ ನಡೆಸಿದೆ. ಈ ನಿಯಮ ಉಲ್ಲಂಘನೆಗೆ ಏರ್ ಇಂಡಿಯಾಗೆ ಭಾರತದ ನಾಗರಿಕ ವಿಮಾನಯಾನ ನಿಯಂತ್ರಕ ಬರೋಬ್ಬರಿ 1 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ.
2025ರಲ್ಲಿ ಸ್ವತಃ ಏರ್ ಇಂಡಿಯಾ ಸಂಸ್ಥೆಯೇ ನಿಯಮ ಉಲ್ಲಂಘನೆ ವಿಷಯ ತಿಳಿಸಿದಾಗ ಡಿಜಿಸಿಎ ಗೆ ಗೊತ್ತಾಗಿದೆ. ಇದು ನವೆಂಬರ್ 26, 2025ರ ಘಟನೆಯಾಗಿದೆ. ಕಂಪನಿಯು ತನ್ನ ಏರ್ಬಸ್ A320neo ವಿಮಾನಗಳಲ್ಲಿ ಒಂದರ ವಾಯು ಯೋಗ್ಯತಾ ಪ್ರಮಾಣಪತ್ರದ ಅವಧಿ ಮುಗಿದಿದೆ ಎಂದು ವರದಿ ಮಾಡಿತ್ತು. ಈ ವರದಿ ಬಳಿಕ DGCA ಡಿಸೆಂಬರ್ 2ರಂದು ತನಿಖೆ ಆರಂಭಿಸಿತ್ತು. ಪರವಾನಿಗೆ ಮುಕ್ತಾಯವಾಗಿದ್ರೂ ಏರ್ ಇಂಡಿಯಾ, ನವೆಂಬರ್ 24 ಮತ್ತು 25 ರಂದು ಎಂಟು ಬಾರಿ ಹಾರಾಟ ನಡೆಸಿತ್ತು.