Subscribe ನ್ಯೂಸಿಕ್ಸ್ ಕನ್ನಡ
newsics.com
ಅರ್ಜುನ್ ರೆಡ್ಡಿ ಬೆಡಗಿ ಟಾಪ್-ಲೆಸ್ ಫೋಟೋಸ್ ಶೇರ್ ಮಾಡಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿವೆ.ತಮ್ಮ ಜನಪ್ರಿಯತೆಗಾಗಿ ಇಂದಿನ ನಾಯಕಿಯರು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಾ ತಮ್ಮ ಫಾಲೋವರ್ಸ್ ಹೆಚ್ಚಿಸಿಕೊಂಡಿದ್ದಾರೆ. ಅದೇ ಹಾದಿಯಲ್ಲಿ ಸಾಗುತ್ತಿರುವ ಶಾಲಿನಿ ಪಾಂಡೆ ತಮ್ಮ ಗ್ಲಾಮರ್‌ನಿಂದ ಆನ್‌ಲೈನ್ ಮಾಧ್ಯಮವನ್ನು ಬೆಚ್ಚಿ ಬೀಳಿಸಿದ್ದಾರೆ.
ಶಾಲಿನಿ ಪಾಂಡೆ ಅವರು ರಿಯಲ್ ಲೈಫ್ನಲ್ಲಿ ಸಖತ್ ಬೋಲ್ಡ್. ಈಗ ತಮ್ಮ ಗ್ಲಾಮರಸ್ ಅವತಾರದ ಮೂಲಕ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಸಾಮಾನ್ಯವಾಗಿ ತೆರೆಯ ಮೇಲೆ ಸಂಪ್ರದಾಯಬದ್ಧ ಪಾತ್ರಗಳಲ್ಲಿ ನಟಿಸುವ ಶಾಲಿನಿ ಅವರು, ತಮ್ಮ ಇಮೇಜ್ ಬದಿಗಿಟ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶಾಲಿನಿ ಪಾಂಡೆ ಇತ್ತೀಚೆಗೆ ಹಂಚಿಕೊಂಡಿರುವ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ಶಾಲಿನಿ ಕೇವಲ ಟವಲ್ ಸುತ್ತಿಕೊಂಡು, ಬೆನ್ನು ತೋರಿಸಿ ಪೋಸ್ ನೀಡಿದ್ದಾರೆ. ಯಾವುದೇ ಅಬ್ಬರವಿಲ್ಲದೇ ಸರಳ ಮೇಕಪ್, ಬಿಟ್ಟ ಕೂದಲು ಹಾಗೂ ಮಂದ ಬೆಳಕಿನಲ್ಲಿ ಮೂಡಿಬಂದಿರುವ ಈ ಫೋಟೋಗಳು ಶಾಲಿನಿ ಅವರ ಆತ್ಮವಿಶ್ವಾಸವನ್ನು ಎತ್ತಿ ತೋರಿಸುತ್ತಿವೆ.
ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಮೆಚ್ಚುಗೆಯ ಮಳೆ ಸುರಿಯುತ್ತಿದ್ದಾರೆ. ಕೆಲವರಿಗೆ ಶಾಲಿನಿ ಅವರ ಈ ಅವತಾರ ಕಂಡು ಅಚ್ಚರಿ ಆಗಿದೆ.
ಇತ್ತೀಚೆಗಷ್ಟೇ ಅವರು ಪುಲ್ಕಿತ್ ಸಾಮ್ರಾಟ್ ಮತ್ತು ವರುಣ್ ಶರ್ಮಾ ನಟನೆಯ ‘ರಾಹು ಕೇತು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾದಿಂದ ಸಿನಿಮಾಗೆ ವಿಭಿನ್ನ ಪಾತ್ರಗಳನ್ನು ಆರಿಸಿಕೊಳ್ಳುತ್ತಿರುವ ಶಾಲಿನಿ, ಈಗ ತಮ್ಮ ಈ ಬೋಲ್ಡ್ ಫೋಟೋಶೂಟ್ ಮೂಲಕ ತಾನು ಕೇವಲ ಸಾಂಪ್ರದಾಯಿಕ ಪಾತ್ರಗಳಿಗೆ ಮಾತ್ರ ಸೀಮಿತವಲ್ಲ ಎಂಬ ಸಂದೇಶ ನೀಡಿದ್ದಾರೆ.
https://www.instagram.com/p/DUapnnek3L4/?igsh=MWF6dGZwMnd6bDAwNg==