Subscribe ನ್ಯೂಸಿಕ್ಸ್ ಕನ್ನಡ
newsics.com
ಶಿವಮೊಗ್ಗ:m ಪಾರ್ಶ್ವವಾಯುವಿಗೆ ತುತ್ತಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ಇಲ್ಲಿನ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದ ಚಿರತೆ ಭದ್ರಾಗೆ (15) ನಗರದ ನಂಜಪ್ಪ ಆಸ್ಪತ್ರೆಗೆ ತಡರಾತ್ರಿ ಲಯನ್ ಸಫಾರಿಯ ಚಿರತೆಯೊಂದನ್ನು ಎಂಆರ್‍ಐ ಸ್ಕ್ಯಾನಿಂಗ್‍ಗೆ ತಂದ ಘಟನೆ ನಡೆದಿದೆ.
ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ವನ್ಯಜೀವಿ ವಿಭಾಗದ ಡಿಎಫ್‍ಒ ಡಾ|| ಅಮರಾಕ್ಷರ್ ಮಾಹಿತಿ ನೀಡಿದ್ದು, ಲಯನ್ ಸಫಾರಿಯಲ್ಲಿ ಭದ್ರ ಎನ್ನುವ 14 ವರ್ಷದ ಚಿರತೆ ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಕುಂಟುತ್ತಾ ನಡೆಯುತ್ತಿತ್ತು.
ಮೊನ್ನೆಯಿಂದ ಎದ್ದು ನಿಲ್ಲದ ಸ್ಥಿತಿಯಲ್ಲಿತ್ತು. ತಕ್ಷಣ ನಾವು ಅದನ್ನು ಉಳಿಸುವ ನಿಟ್ಟಿನಲ್ಲಿ ಎಂಆರ್‍ಐ ಸ್ಕ್ಯಾನಿಂಗ್ ಮೂಲಕ ಅದರ ಆರೋಗ್ಯದ ಮಾಹಿತಿ ತಿಳಿಯಲು ನಿನ್ನೆ ನಗರದ ನಂಜಪ್ಪ ಆಸ್ಪತ್ರೆಗೆ ಕರೆದುಕೊಂಡು ಬಂದು ಎಂಆರ್‍ಐ ಮಾಡಿಸಿದ್ದೇವೆ.
ಈ ಸಂದರ್ಭದಲ್ಲಿ ವನ್ಯಜೀವಿ ವಿಭಾಗದ ನುರಿತ ವೈದ್ಯರು ಮತ್ತು ನಂಜಪ್ಪ ಆಸ್ಪತ್ರೆಯ ವೈದ್ಯರು ಇದ್ದು, ಪರಿಶೀಲನೆ ನಡೆಸಿ ಮುಂದಿನ ಚಿಕಿತ್ಸೆಯನ್ನು ತಿಳಿಸಿದ್ದಾರೆ. ಎಂಆರ್‍ಐ ಸ್ಕ್ಯಾನಿಂಗ್ ಬಹುದುಬಾರಿಯಾಗಿದ್ದು, ಪಶುವೈದ್ಯಕೀಯ ಕಾಲೇಜಿನಲ್ಲಿ ಆ ಸೌಲಭ್ಯ ಇರಲಿಲ್ಲ. ಸಾಮಾನ್ಯವಾಗಿ ಮನುಷ್ಯರ ಮತ್ತು ಪ್ರಾಣಿಗಳ ದೇಹರಚನೆ ಒಂದೇ ರೀತಿ ಇದ್ದು ಪಶುವೈದ್ಯರ ನೆರವಿನೊಂದಿಗೆ ಅವರ ಸಮ್ಮುಖದಲ್ಲೇ ಈ ಸ್ಕ್ಯಾನಿಂಗ್ ಮಾಡಲಾಗಿದೆ. ಪ್ರಸ್ತುತ ಲಯನ್ ಸಫಾರಿಯಲ್ಲಿ 6 ಗಂಡು, 5 ಹೆಣ್ಣು ಚಿರತೆಗಳಿವೆ. ಸ್ಕ್ಯಾನಿಂಗ್ ರಿಪೋರ್ಟ್ ಆಧರಿಸಿ ಉತ್ತಮ ಚಿಕಿತ್ಸೆ ನೀಡಲಾಗುವುದು ಎಂದರು.
ಖಾಸಗಿ ಆಸ್ಪತ್ರೆಗೆ ಚಿರತೆ ತರಲಾಗಿದ್ದು, ಶಿವಮೊಗ್ಗ ಪಶುವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇನ್ನು ಮುಂದಾದರೂ ಪ್ರಾಣಿಗಳಿಗೆ ಅಗತ್ಯ ಎಲ್ಲಾ ಸೌಲಭ್ಯಗಳು ಸಿಗಲಿ ಎಂದು ನಾಗರೀಕರು ಸಲಹೆ ನೀಡಿದ್ದಾರೆ.