https://youtube.com/shorts/j6ilMdnEwVU?si=zmhmirtwo-4Y6IAU
Subscribe ನ್ಯೂಸಿಕ್ಸ್ ಕನ್ನಡ
newsics.com
ಪ್ರತಾಪ್‌ಗಢ: 15 ವರ್ಷದ ಬಾಲಕನೊಬ್ಬ ತಾನು ಪ್ರೀತಿಸಿದ ಹುಡುಗಿಯ ಜೊತೆ ಮದುವೆ ಮಾಡಿಸಿ ಎಂದು ಹೈ-ವೋಲ್ಟೇಜ್ ವಿದ್ಯುತ್ ತಂತಿಯನ್ನು ಹಿಡಿದು ನೇತಾಡಿದ ಘಟನೆ ಪ್ರತಾಪಗಢದಲ್ಲಿ ನಡೆದಿದೆ.
ಪೊಲೀಸರು ಆತ ಇಷ್ಟಪಟ್ಟ ಹುಡುಗಿಯ ಜೊತೆ ಮದುವೆ ಮಾಡಿಸುವುದಾಗಿ ಮನವೊಲಿಸಿದ ನಂತರ ಆತ ಕೆಳಗೆ ಇಳಿಯಲು ಒಪ್ಪಿಕೊಂಡ.
ಕೊನೆಗೆ ಏಣಿಯನ್ನು ಹಾಕಿ ಅವನನ್ನು ಸುರಕ್ಷಿತವಾಗಿ ಕೆಳಗೆ ತರಲಾಯಿತು. 40 ನಿಮಿಷಗಳ ಕಾಲ ಆತ ವಿದ್ಯುತ್ ತಂತಿ ಹಿಡಿದು ನೇತಾಡುತ್ತಿದ್ದ. ಕೆಳಗೆ ಬಂದ ತಕ್ಷಣ ಆತ ಅಳಲು ಪ್ರಾರಂಭಿಸಿದನು.
ಆತ 13 ವರ್ಷದ ಹುಡುಗಿಯನ್ನು ಪ್ರೀತಿಸುತ್ತಿದ್ದ. 1 ವರ್ಷದಿಂದ ಅವರಿಬ್ಬರೂ ಪ್ರೀತಿಸುತ್ತಿದ್ದರು. ಆಕೆಯ ಜೊತೆ ಮದುವೆ ಮಾಡಲು ಮನೆಯವರು ಒಪ್ಪಿರಲಿಲ್ಲ. ಹೀಗಾಗಿ, ಆತ ಈ ನಾಟಕವಾಡಿದ್ದ. ನಂತರ ಪೊಲೀಸರು ಹುಡುಗನನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಅವನಿಗೆ ಸಲಹೆ ನೀಡಿ ಅವನ ಕುಟುಂಬಕ್ಕೆ ಒಪ್ಪಿಸಿದರು.
https://www.newsics.com/2026/02/07/four-members-of-a-family-found-hanging/