https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ಪ್ರೇಮಿಗಳಿಗಾಗಿ ಸಲ್ಮಾನ್ ಖಾನ್ ನಟನೆಯ ತೇರೆ ನಾಮ್’ ಸಿನಿಮಾದಲ್ಲಿ ಮತ್ತೆ ರಿಲೀಸ್ ಆಗಲಿದೆ. ತೇರೆ ನಾಮ್’ ಸಿನಿಮಾದಲ್ಲಿ ಕಾಡುವ ಒಂದು ಪ್ರೇಮ್ ಕಹಾನಿ ಇದೆ. ಈ ಚಿತ್ರಕ್ಕೆ ಸತೀಶ್ ಕೌಶಿಕ್ ಅವರು ನಿರ್ದೇಶನ ಮಾಡಿದ್ದಾರೆ.
2003ರ ಆಗಸ್ಟ್ 15ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಆಗ ಪ್ರೇಕ್ಷಕರು ಬಹಳ ಮೆಚ್ಚಿಕೊಂಡಿದ್ದರು. ಈ ಚಿತ್ರದಿಂದ ಸಲ್ಮಾನ್ ಖಾನ್ ಅವರ ಖ್ಯಾತಿ ಹೆಚ್ಚಾಗಿತ್ತು. ಮತ್ತೆ ಫೆಬ್ರವರಿ 27ರಂದು ‘ತೇರೆ ನಾಮ್’ ಸಿನಿಮಾ ಬಿಡುಗಡೆ ಆಗಲಿದೆ.
23 ವರ್ಷಗಳ ಬಳಿಕ ‘ತೇರೆ ನಾಮ್’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. 2003ರಲ್ಲಿ ರಿಲೀಸ್ ಆದಾಗ ಈ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ಮಿಸ್ ಮಾಡಿಕೊಂಡವರು ಈಗ ಕಣ್ತುಂಬಿಕೊಳ್ಳುವ ಚಾನ್ಸ್ ಸಿಗುತ್ತಿದೆ. ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಇದರಿಂದ ಖುಷಿ ಆಗಿದೆ.
ಅಭಿಮಾನಿಗಳು ‘ತೇರೆ ನಾಮ್’ ಸಿನಿಮಾವನ್ನು ಇಂದಿಗೂ ನೆನಪಿಸಿಕೊಳ್ಳವುದು ಸಲ್ಮಾನ್ ಖಾನ್ ಅವರ ನಟನೆ ಮತ್ತು ಹಿಮೇಶ್ ರೇಷಮಿಯಾ ಅವರ ಹಾಡುಗಳ ಕಾರಣದಿಂದ. ಸಲ್ಮಾನ್ ಖಾನ್ ಅವರ ವೃತ್ತಿಜೀವನದ ಅತ್ಯುತ್ತಮ ನಟನೆ ಈ ಸಿನಿಮಾದಲ್ಲಿದೆ ಎಂಬುದು ಫ್ಯಾನ್ಸ್ ಅಭಿಪ್ರಾಯ. ಅದೇ ರೀತಿ, ಹಿಮೇಶ್ ರೇಷಮಿಯಾ ಅವರು ಸಂಗೀತ ನೀಡಿದ ಹಾಡುಗಳು ಇಂದಿಗೂ ಎವರ್ಗ್ರೀನ್ ಆಗಿ ಉಳಿದುಕೊಂಡಿವೆ. ಹೊಸ ತಲೆಮಾರಿನ ಪ್ರೇಕ್ಷಕರಿಂದ ಈ ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ಕಾದುನೋಡಬೇಕು
https://www.newsics.com/2026/02/05/dont-watch-this-terrifying-horror-movie-alone/