https://youtu.be/yWrDals90_k?si=xNPoBRstQj8HIt-m
Subscribe ನ್ಯೂಸಿಕ್ಸ್ ಕನ್ನಡ
newsics.com
ಕಾನ್ಫಿಡೆನ್ಸ್, ಆತ್ಮವಿಶ್ವಾಸ.. ಈ ಹೆಸರಿನಲ್ಲೇ ಉದ್ಯಮಿ ಸಿ.ಜೆ. ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್ ಅನ್ನೋ ಸಾಮ್ರಾಜ್ಯವನ್ನೇ ಕಟ್ಟಿದ್ದರು. ಸಾವಿರಾರು ಕೋಟಿ ಆಸ್ತಿಯ ಒಡೆಯರಾಗಿದ್ದರು. ಸದಾ ಲವಲವಿಕೆಯಿಂದ ಇದ್ದ ರಾಯ್ ಜನರಿಗೆ ಬ್ಯುಸಿನೆಸ್ ಟಿಪ್ಸ್ ಕೂಡ ನೀಡುತ್ತಿದ್ದರು. ಆದರೆ ದುರಾದೃಷ್ಟವಶಾತ್ ರಾಯ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಟಿ ದಾಳಿ ವೇಳೆ ಎದೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ರಾಯ್ ಅವರ ಸಾವು ಇಡೀ ಉದ್ಯಮ ಲೋಕವನ್ನೇ ತಲ್ಲಣಗೊಳಿಸಿದೆ.
ರಾಯ್ ಸಾವಿಗೆ ಪ್ರಮುಖವಾಗಿ ಕೇಳಿಬರುತ್ತಿರುವ ಆರೋಪ ಆದಾಯ ತೆರಿಗೆ ವಿಭಾಗ, ಅಧಿಕಾರಿಗಳ ಕಿರುಕುಳ. ಇದೇ ವಿಚಾರದಲ್ಲಿ ಕೆಲ ಮಹತ್ವದ ಮಾಹಿತಿಗಳು ಬಯಲಾಗಿದೆ. ಪ್ರಮುಖವಾಗಿ ಡಿಸೆಂಬರ್ 16, 2025ರಿಂದ ರಾಯ್ ಕಚೇರಿಗಳ ಮೇಲೆ ಐಟಿ ದಾಳಿ ನಡೆಯುತ್ತಿತ್ತು.
ಇದೀಗ ಕಾನ್ಫಿಡೆಂಟ್ ಗ್ರೂಪ್ ಕಚೇರಿಗಳ ಮೇಲಿನ ದಾಳಿ ವಿರುದ್ಧ ಸಿಜೆ ರಾಯ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಐಟಿ ದಾಳಿಗೆ ತಕ್ಷಣಕ್ಕೆ ತಡೆ ನೀಡಲು ಕೋರಿ ಪಿಟೀಶನ್ ಸಲ್ಲಿಸಿದ್ದರು.
ಈ ಅರ್ಜಿಯಲ್ಲಿ ಹಲವು ವಿಚಾರಗಳ ಕುರಿತು ಸಿಜೆ ರಾಯ್ ಉಲ್ಲೇಖಿಸಿದ್ದರು. ಪ್ರಮುಖವಾಗಿ ತಮ್ಮ ಉದ್ಯಮ, ಪ್ರಧಾನ ಕಚೇರಿ, ವ್ಯವಹಾರಗಳು ಬೆಂಗಳೂರಿನಲ್ಲಿದೆ. ಆದರೆ ಇಲ್ಲಿನ ಸ್ಥಳೀಯ ಅಧಿಕಾರಿಗಳ ಬಳಸಿಕೊಳ್ಳದೆ, ಕೇರಳದ ಕೊಚ್ಚಿಯ ಅಧಿಕಾರಿಗಳನ್ನು ಬಳಲಿ ದಾಳಿ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದರು. ಕೇರಳದ ಅದಿಕಾರಿಗಳಿಗೆ ಬೆಂಗಳೂರಿನಲ್ಲಿ ದಾಳಿ ನಡೆಸಲು ಅಧಿಕಾರವಿಲ್ಲ. ಸಿಂಗಲ್ ಒಮ್ನಿ ಬಸ್ ವಾರೆಂಟ್ (ದಾಳಿಗೆ ಅನುಮತಿ ನೀಡುವ ಕೋರ್ಟ್ ಆದೇಶ) ಪ್ರತಿ ಹಿಡಿದು ಹಲವು ಕಡೆ ದಾಳಿ ಮಾಡಲಾಗಿದೆ.
ಇದು ನಿಯಮ ಉಲ್ಲಂಘನೆಯಾಗಿದೆ. ಸ್ಥಳೀಯರಲ್ಲದ ಸಾಕ್ಷಿಗಳನ್ನು ಬಳಸಿ ದಾಳಿ ಮಾಡಲಾಗಿದೆ. ಬಳಿಕ ಕಚೇರಿಗಳನ್ನು ಸುದೀರ್ಘ ಕಾಲಕ್ಕೆ ಸೀಲ್ ಮಾಡಲಾಗಿದೆ. ಈ ಮೂಲಕ ಹಲವು ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಕರ್ನಾಟಕ ಹೈಕೋರ್ಟ್ ಈ ದಾಳಿಗೆ ತಡೆ ನೀಡಬೇಕು ಎಂದು ಸಿಜೆ ರಾಯ್ ಮನವಿ ಮಾಡಿದ್ರು.
ಈ ಪಿಟೀಶನ್ ಪ್ರಾಥಮಿಕ ವಿಚಾರಣೆಗೆ ಬಂದಾಗ ತೆರಿಗೆ ಅಧಿಕಾರಿಗಳು ಉತ್ತರಿಸಲು ಕೆಲ ಸಮಯ ಕೇಳಿದ್ದರು. ಡಿಸೆಂಬರ್ 18 ರಂದು ಉತ್ತರಿಸುವುದಾಗಿ ಹೇಳಿತ್ತು. ಇದೇ ವೇಳೆ ಕೋರ್ಟ್ ಡಿಸೆಂಬರ್ 18ರಂದು ಉತ್ತರ ಕೇಳುತ್ತೇವೆ. ಹೀಗಾಗಿ ಐಟಿ ದಾಳಿಗೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ ಎಂದಿತ್ತು. ಆದರೆ ಡಿಸೆಂಬರ್ 18 ರಂದು ಸಿಜೆ ರಾಯ್ ಈ ಅರ್ಜಿಯನ್ನು ಹೆಚ್ಚಿನ ಕಾರಣ ನೀಡಿದ ಹಿಂಪಡೆದಿದ್ದರು. ಇದೀಗ ಈ ಅರ್ಜಿ ವಾಪಸ್ ಪಡೆದಿದ್ದೇಕೆ ಎಂಬ ಚರ್ಚೆ ಹಾಗೂ ಪ್ರಶ್ನೆ ಇದೀಗ ಶುರುವಾಗಿದೆ.