https://youtu.be/yWrDals90_k?si=xUOVhUsK_gHUutwu
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು ಜಲಮಂಡಳಿಯು ಫೆಬ್ರವರಿ 5 ಮತ್ತು 6 ರಂದು ಸಾರಕ್ಕಿಯಲ್ಲಿ ತುರ್ತು ಪೈಪ್‌ಲೈನ್ ನಿರ್ವಹಣಾ ಕಾಮಗಾರಿ ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ದಕ್ಷಿಣ ಮತ್ತು ಕೇಂದ್ರ ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳಲ್ಲಿ 24 ಗಂಟೆಗಳ ಕಾಲ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಮಂಡಳಿಯ ವತಿಯಿಂದ ಸಾರಕ್ಕಿ ಮಾರ್ಗವಾಗಿ ಬರುವ ನೀರಿನ ಪೈಪ್‌ಲೈನ್ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಅಡಿಯಲ್ಲಿ 1,200 ಮಿ.ಮೀ. ಮತ್ತು 700 ಮಿ.ಮೀ. ವ್ಯಾಸದ ಕೊಳವೆ ಮಾರ್ಗಗಳನ್ನು ಜೋಡಿಸುವ ಕಾರಣದಿಂದ ಕಾವೇರಿ ನೀರು ಸರಬರಾಜು ಯೋಜನೆಯ ಮೊದಲನೇ ಮತ್ತು ಎರಡನೇ ಹಂತಗಳ ಜಲರೇಚಕ ಯಂತ್ರಾಗಾರಗಳನ್ನು ಫೆ.5ರ (ಗುರುವಾರ) ಬೆಳಿಗ್ಗೆ 6ರಿಂದ ಫೆ.6ರ (ಶುಕ್ರವಾರ) ಬೆಳಿಗ್ಗೆ 6ರವರೆಗೆ 24 ಗಂಟೆ ಕಾಲ ಸ್ಥಗಿತಗೊಳಿಸಲಾಗುತ್ತದೆ.
ಬೆಂಗಳೂರು ನಗರದ ಮಾಗಡಿ ರಸ್ತೆ, ಕದ್ರೆನಹಳ್ಳಿ, ಗಂಗಾಧರ ನಗರ, ಪ್ರಗತಿಪುರ, ಪದ್ಮನಾಭ ನಗರ, ಆರ್.ಕೆ ಲೇಔಟ್, ಚಿಕ್ಕಲ್ಲಸಂದ್ರ, ಹನುಮಗಿರಿ ನಗರ, ಮುನೇಶ್ವರ ನಗರ, ಬೇಂದ್ರೆನಗರ, ಕುಮಾರಸ್ವಾಮಿ ಬಡಾವಣೆ 1ನೇ ಮತ್ತು 2ನೇ ಹಂತ, ಚಂದ್ರನಗರ, ಮಾರುತಿ ಬಡಾವಣೆ, ವಿಠ್ಠಲ್ ನಗರ, ಇಸ್ರೋ ಬಡಾವಣೆ, ಟೀಚರ್ಸ್ ಕಾಲೋನಿ, ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ, ಇಲಿಯಾಸ್ ನಗರ, ಪೂರ್ಣ ಪ್ರಜ್ಞಾ ಬಡಾವಣೆ, ಮಿನಜ್ ನಗರ, ಉತ್ತರಹಳ್ಳಿ, ಕೆ.ಎಸ್.ಆರ್.ಟಿ.ಸಿ ಬಡಾವಣೆ, ಅಂಕಪ್ಪ ಬಡಾವಣೆ, ಗುಮ್ಮಯ್ಯ ಬಡಾವಣೆ, ಬನಶಂಕರಿ 5ನೇ ಹಂತ.
ಎ.ಜಿ.ಎಸ್ ಬಡಾವಣೆ, ಸಾರ್ವಭೌಮನಗರ ಸುಬ್ರಮಣ್ಯಪುರ, ಬಿ.ಹೆಚ್.ಸಿ.ಎಸ್ ಬಡಾವಣೆ, ಕೆನರಾ ಬ್ಯಾಂಕ್ ಕಾಲೋನಿ, ಕಾಕತೀಯ ನಗರ, ಸುದ್ದಗುಂಟೆಪಾಳ್ಯ, ಮಾರುತಿ ನಗರ, ಭವಾನಿ ಲೇಔಟ್, ವೆಂಟೇಶ್ವರ ಬಡಾವಣೆ, ಬೃಂದಾವನ ಲೇಔಟ್, ಮಡಿವಾಳ, ಚಿನ್ನಮ್ಮ ಲೇಔಟ್, ಕೋರಮಂಗಲ 2,4,5,6,7 ಮತ್ತು 8 ನೇ ಬ್ಲಾಕ್, ಚಿಕ್ಕಆಡುಗೋಡಿ, ಸೆಂಟ್ ಜಾನ್ ಆಸ್ಪತ್ರೆ, ರಾಜೇಂದ್ರ ನಗರ, ಆಡುಗೋಡಿ, ಜಾನ್ಸ್‌ನ್ ಮಾರ್ಕೆಟ್, ಸಿಎಲ್‌ಆರ್, ಶಾಂತಿನಗರ, ಲಾಗ್ ಪೋರ್ಡ್ ಟೌನ್, ಎಂಜಿ ರಸ್ತೆ, ರಿಚ್‌ಮಂಡ್ ಟೌನ್, ನೀಲಸಂದ್ರ, ಅಶೋಕ್ ನಗರ, ಆಸ್ಟಿನ್ ಟೌನ್, ವಿವೇಕ್ ನಗರ, ಈಜಿಪುರ, ದೊಮ್ಮಲೂರು ಲೇಔಟ್, ದೊಮ್ಮಲೂರು ವಿಲೇಜ್, ಕೋಡಿಹಳ್ಳಿ, ಕಮಾಂಡೋ ಆಸ್ಪತ್ರೆ, ಜೋಗಿಪಾಳ್ಯ, ಕೇಂಬ್ರಿಡ್ಜ್ ಲೇಔಟ್ ಚಾಮರಾಜಪೇಟೆ, ಶ್ರೀನಗರ ಬಿಎಸ್‌ಕೆ 1ನೇ ಹಂತ.
ಅಶೋಕ್ ನಗರ ಪೈಪ್ ಲೈನ್ ರಸ್ತೆ, ಜಯನಗರ 4ನೇ ಮತ್ತು ʼಟಿʼ ಬ್ಲಾಕ್, ತಿಲಕ್ ನಗರ, ಮಾಧವನ ಪಾರ್ಕ್ , ಹೊಂಬೇಗೌಡ ನಗರ, ಲಕ್ಕಸಂದ್ರ, ಶಾಂತಿನಗರ ಲೇಔಟ್, ಜೆಕೆಪುರ, ಅಕ್ಕಿತಿಮ್ಮನ ಹಳ್ಳಿ, ಜಗಜೀವನರಾಮನಗರ, ರುದ್ರಪ್ಪ ಗಾರ್ಡನ್, ವಾಲ್ಮೀಕಿ ನಗರ, ಮಾವಳ್ಳಿ, ಶಂಕರಪುರಂ, ಕೆಂಪೇಗೌಡನಗರ, ಸುಧಾಮನಗರ, ಬನಗಿರಿ, ಜಯನಗರ, 6,7 ಮತ್ತು 8ನೇ ಬ್ಲಾಕ್, ಯಡಿಯೂರು, ಇಟ್ಟಮಡು, ಎಸ್‌ಬಿಎಂ ಕಾಲೋನಿ, ಹೊಸಕೆರೆಹಳ್ಳಿ, ಐಟಿಐ ಲೇಔಟ್, ಶ್ರೀನಿವಾಸ ನಗರ, ಡಿಸೋಜಾ ನಗರ, ಕೆರೆಕೋಡಿ, ಮುನೇಶ್ವರ ನಗರ, ಜೆಪಿನಗರ 1, 2 ಮತ್ತು 3ನೇ ಹಂತ, ಮಾರೇನಹಳ್ಳಿ, ಜಯನಗರ 5 ಮತ್ತು 9ನೇ ಬ್ಲಾಕ್, ಭೈರಸಂದ್ರ, ಎಲ್ ಐ ಸಿ ಕಾಲೋನಿ, ಸಿದ್ದಾಪುರ, ವಿಲ್ಸ್‌ನ್ ಗಾರ್ಡನ್, ನಿಮಾನ್ಸ್ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.