Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > UNION BUDGET 2026 ಕೇಂದ್ರ ಬಜೆಟ್‌ನ ಸಮಗ್ರ ನೋಟ
ದೇಶಪ್ರಮುಖ

UNION BUDGET 2026 ಕೇಂದ್ರ ಬಜೆಟ್‌ನ ಸಮಗ್ರ ನೋಟ

Share
7 Min Read
SHARE

newsics.com

ಭಾನುವಾರವಾದರೂ ಪದ್ಧತಿಯಂತೆ ಫೆಬ್ರವರಿ 1 ರಂದೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದು, ಭಾನುವಾರ ಮಂಡನೆಯಾದ ಎರಡನೇ ಬಜೆಟ್ ಇದಾಗಿದೆ.

* ಸತತ 9 ಬಾರಿ ಬಜೆಟ್ ಮಂಡಿಸಿ ದಾಖಲೆ ಸೃಷ್ಟಿಸಿರುವ ನಿರ್ಮಲಾ ಸೀತಾರಾಮನ್, ಈ ಬಾರಿ 85 ನಿಮಿಷ ಬಜೆಟ್ ಮಂಡನೆ ಮಾಡಿದ್ದಾರೆ.

* ಕರ್ತವ್ಯ ಭವನದಲ್ಲಿ ಮಂಡಿಸುತ್ತಿರುವ ಮೊದಲ ಬಜೆಟ್ ಇದಾಗಿದ್ದು , 3 ಕರ್ತವ್ಯಗಳಿಗೆ ಒತ್ತು ನೀಡಿದ್ದಾರೆ.

* ಸಿಗರೇಟ್ ಮೇಲಿನ ಸುಂಕ ಏರಿಕೆ, ಬ್ಯಾಟರಿಗಳ ಮೇಲಿನ ಆಮದು ಸುಂಕ ಇಳಿಕೆ
* ಮದ್ಯದ ಬೆಲೆ ಏರಿಕೆ
ಮದ್ಯದ ಬೆಲೆ ಏರಿಕೆ ಘೋಷಣೆ ಮಾಡಲಾಗಿದೆ.

* ಅಣುವಿದ್ಯುತ್ ಸ್ಥಾವರಗಳ ಪರಿಕರಗಳ ಮೇಲಿನ ಆಮದು ಸುಂಕ ಇಳಿಕೆ.

* ಮೈಕ್ರೋಓವೆನ್ ಮೇಲಿನ ಆಮದು ಸುಂಕ ಇಳಿಕೆ.

* ಹದಿನೇಳು ಕ್ಯಾನ್ಸರ್ ಔಷಧಗಳಿಗೆ ತೆರಿಗೆ ವಿನಾಯತಿ. ಏಳು ಅಪರೂಪ ಕಾಯಿಲೆಗಳ ಔಷಧಗಳ ತೆರಿಗೆ ಇಳಿಕೆ.

* ರಕ್ಷಣಾ ವಲಯಗಳ ಯುದ್ಧ ವಿಮಾನ ನಿರ್ಮಾಣಕ್ಕೆ ಉತ್ತೇಜನ
ರಕ್ಷಣಾ ವಲಯಗಳ ವಿಮಾನ ತಯಾರಿಯ ಬಿಡಿ ಭಾಗಗಳಿಗೆ ಹಾಕುತ್ತಿದ್ದ ತೆರಿಗೆಯಲ್ಲಿ ವಿನಾಯಿತಿ ಘೋಷಣೆ. ರಿಪೇರಿ, ನಿರ್ವಹಣೆಗಾಗಿ ಆಮದು ಮಾಡುತ್ತಿದ್ದ ಬಿಡಿಭಾಗಗಳ ಮೇಲಿನ ತೆರಿಗೆ ವಿನಾಯಿತಿ.

* ಚರ್ಮ ಉತ್ಪಾದನೆಗಳ ರಫ್ತಿಗೆ ಉತ್ತೇಜನ: ಹಲವು ಉತ್ಪನ್ನಗಳ ಆಮದಿಗೆ ತೆರಿಗೆ ವಿನಾಯಿತಿ

* ಭಾರತದಲ್ಲಿ ಉತ್ಪಾದನೆಯಾಗುವ ಸೀ ಫುಡ್‌ಗಳ ರಪ್ತಿಗೆ ಉತ್ತೇಜನ.

* ಚರ್ಮ-ಸಿಂಥೆಟಿಕ್-ಶೂಗಳ ಉತ್ತೇಜನ.

* ತೆರಿಗೆ ವಿನಾಯಿತಿ– ಸೋಲಾರ್ ಗ್ಲಾಸ್ ಬಳಕೆಯ ಉತ್ಪನ್ನಗಳ ತೆರಿಗೆ ಕಡಿತ.

* ಬಯೋಗ್ಯಾಸ್ ಸಿಎನ್‌ಜಿಗಳ ಟ್ಯಾಕ್ಸ್‌ ವಿನಾಯಿತಿ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್

* ಕಂಪನಿಗಳಿಗೆ ಹೊಸ ತೆರಿಗೆ ಪದ್ಧತಿಗೆ ಸೇರಲು ಉತ್ತೇಜನ.
ತೆರಿಗೆಯ ಶೇ.15 ರಿಂದ, 14% ಮ್ಯಾಟ್ ರೇಟ್‌ಗೆ ಇಳಿಕೆ, ಆ ಮೂಲಕ ಹೊಸ ತೆರಿಗೆ ಪದ್ಧತಿಗೆ ಬದಲಾಯಿಸಿಕೊಳ್ಳಲು ಉತ್ತೇಜನ.

* ಆದಾಯ ತೆರಿಗೆ ಸಲ್ಲಿಕೆಯಲ್ಲಿ ತಪ್ಪಾಗಿದ್ದರೆ ಶಿಕ್ಷೆಯ ಬದಲು ಇನ್ನು ಮುಂದೆ ದಂಡ.

* ಸುಂಕ ವಿನಾಯತಿಯಲ್ಲಿ ಆಮದಾಗುವ ವಸ್ತುಗಳ ಮಿತಿ ಹೆಚ್ಚಳ.

* ಚರ್ಮೋತ್ಪನ್ನಗಳ ಮೇಲಿನ ಆಮದು ಸುಂಕ ಇಳಿಕೆ. ವಿಮಾನ ಬಿಡಿಭಾಗಗಳ ಸುಂಕ ಇಳಿಕೆ.

* ಐಟಿ ಸಂಸ್ಥೆಗಳಿಗೆ ಪ್ರೋತ್ಸಾಹ- ಟ್ಯಾಕ್ಸ್ ಹಾಲಿಡೇ ಘೋಷಣೆ
ತಂತ್ರಜ್ಞಾನ ಅಭಿವೃದ್ಧಿಗೆ ಸಂಬಂಧಿಸಿದಂತೆ- ಮಾಹಿತಿ ತಂತ್ರಜ್ಞಾನ ಅಡಿಯಲ್ಲಿ – 300 ರಿಂದ 2000 ಕೋಟಿ ರೂಪಾಯಿಗಳ ಯೋಜನೆ ಘೋಷಣೆ.

* ಮ್ಯಾಟ್ ಟ್ಯಾಕ್ಸ್‌ಗಳ ವಿನಾಯಿತಿ ಘೋಷಣೆ.

* ಅತಿಸಣ್ಣ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರದ ಸುಲಭ ಸಾಲದ ಸೌಲಭ್ಯ. ಭಾರತದಲ್ಲಿ ಹೂಡಿಕೆ ಮಾಡುವ ವಿದೇಶಿ ಕಂಪನಿಗಳಿಗೆ ಟ್ಯಾಕ್ಸ್ ಹಾಲಿಡೇ ಘೋಷಣೆ. ಡೇಟಾ ಸರ್ವೀಸ್ ಸೆಂಟರ್ ಕಂಪನಿಗಳಿಗೆ ತೆರಿಗೆಯಿಂದ ವಿನಾಯಿತಿ.

* ಆರೋಗ್ಯ ಮತ್ತು ವಿದ್ಯಾಭ್ಯಾಸದ ಟಿಸಿಎಸ್ ಶೇ. 5ರಿಂದ ಶೇ. 2ಕ್ಕೆ ಇಳಿಕೆ.

* ವಿದೇಶ ಯಾತ್ರೆಗಳ ಟಿಸಿಎಸ್ ಶೇ. ಎರಡರಷ್ಟು ಇಳಿಕೆ. ಅನಿವಾಸಿ ಭಾರತೀಯರ ಸ್ಥಿರಾಸ್ತಿಯ ಮೇಲೆ ಟಿಡಿಎಸ್ ಕಡಿತ.

* ಮುಂಬೈನಲ್ಲಿ Indian Institute of Creative Technology ನಿರ್ಮಾಣ.

* ಆದಾಯ ತೆರಿಗೆ ಕುರಿತು ಮಹತ್ವದ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್
* ಆದಾಯ ತೆರಿಗೆಯ ನಿಯಮಗಳ ಸರಳೀಕರಣ. ಟ್ಯಾಕ್ಸ್ ಕಟ್ಟಲು ಸಮಯಾವಕಾಶ, ಫಾರ್ಮ್ ಗಳ ಸರಳೀಕರಣ ಮಾಡಲಾಗಿದೆ.

* ಅಪಘಾತ ವಿಮೆ ಪರಿಹಾರಕ್ಕೆ ತೆರಿಗೆ ವಿನಾಯತಿ. ಸಣ್ಣ ತೆರಿಗೆ ಪಾವತಿದಾರರಿಗೆ ಹೊಸ ಪದ್ದತಿ ಘೋಷಣೆ.

* ವಿದೇಶದಲ್ಲಿನ ಆಸ್ತಿ ಘೋಷಣೆಗೆ ಆರು ತಿಂಗಳ ಸಮಯಾವಕಾಶ.

* 16ನೇ ಹಣಕಾಸು ಆಯೋಗದಡಿ ರಾಜ್ಯಗಳಿಗೆ ಅನುದಾನ
ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ 1.41 ಲಕ್ಷ ಕೋಟಿ ರೂ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಖುಷ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಆರ್ಥಿಕ ಅಭಿವೃದ್ಧಿ ಬಗ್ಗೆ ವರದಿ ಮಂಡನೆ ಮಾಡುತ್ತಿರುವ ವೇಳೆ ಪ್ರಧಾನಿ ನರೇಂದ್ರ ಮೋದಿ ಮುಖದಲ್ಲಿ ಮಂದಹಾಸ ಕಂಡು ಬಂದಿತು.

* ಪ್ರಮುಖ ನಗರಗಳಿಗೆ ನಾಲ್ಕು ಸಾವಿರ ಇಲೆಕ್ಟ್ರಿಕ್ ಬಸ್ ಒದಗಿಸಲು ನಿರ್ಧಾರ.

* ಈಶಾನ್ಯ ಭಾರತಗಳ ದೇವಾಲಯಗಳು, ತೀರ್ಥಕ್ಷೇತ್ರಗಳ ರಕ್ಷಣೆ-ಅಭಿವೃದ್ಧಿ

* ಉತ್ತರ ಭಾರತಕ್ಕೆ ನಿಮ್ಹಾನ್ಸ್ -2 ನಿರ್ಮಾಣ
ರಾಂಚಿಯಲ್ಲಿ ಮಾನಸಿಕ ಆರೋಗ್ಯಕ್ಕಾಗಿ ಆರೋಗ್ಯ ಕೇಂದ್ರಗಳ ಸ್ಥಾಪನೆ. ಜಿಲ್ಲಾ ಆಸ್ಪತ್ರೆಗಳಲ್ಲೂ ಮಾನಸಿಕ ಆರೋಗ್ಯ ಕೇಂದ್ರದ ಸ್ಥಾಪನೆ

ಕ್ರೀಡಾ ವಲಯಕ್ಕೆ ಕೇಂದ್ರದ ಘೋಷಣೆ

* ಕರ್ನಾಟಕ, ಕೇರಳದ ಕರಾವಳಿಯಲ್ಲಿ ಟ್ರೆಕ್ಕಿಂಗ್ ಮಾರ್ಗ ಅಭಿವೃದ್ದಿಗೆ ಯೋಜನೆ.

* ಕ್ರೀಡಾ ಕ್ಷೇತ್ರದ ಅಭಿವೃದ್ದಿಗಾಗಿ ಖೇಲೋ ಇಂಡಿಯಾ ಮಿಷನ್ ಆರಂಭ.

* ಕ್ರೀಡಾ ಸಂಸ್ಕೃತಿ ಬೆಳೆಸಲು ಹೊಸ ಕ್ರೀಡಾ ಸಂಕೀರ್ಣ ಆರಂಭ.

* ಶಿ ಮಾರ್ಟ್- ಮಹಿಳಾ ಉದ್ಯಮಿಗಳಿಗೆ ಉತ್ತೇಜನ
ಮಹಿಳೆಯರಿಗಾಗಿ ಶಿ -ಮಾರ್ಟ್ ಯೋಜನೆ ಮೂಲಕ ಉದ್ಯಮಿಗಳಾಗಲು ಪ್ರೋತ್ಸಾಹ,

* ಮಹಿಳೆಯರಿಗಾಗಿ ಲಕ್’ಪತಿ ಯೋಜನೆಗೆ ಇನ್ನಷ್ಟು ಆದ್ಯತೆ.

* ದಿನಸಿ ಅಂಗಡಿ ಆರಂಭಿಸುವ ಮಹಿಳೆಯರಿಗಾಗಿ ವಿಶೇಷ ಸಹಾಯಧನ.

ಕೃಷಿ ವಲಯ-ವಾಣಿಜ್ಯ ಬೆಳೆಗೆ-ತೆಂಗಿಗೆ ಭರ್ಜರಿ ಅನುದಾನ
ಹೈ ವ್ಯಾಲ್ಯು ಕ್ರಾಪ್‌ಗಳಾದ ಗೋಡಂಬಿ ಬೆಳೆ, ಕೋಕೋ, ತೆಂಗಿನ ಕಾಯಿ ಬೆಳೆಗೆ ಉತ್ತೇಜನ. ಹೊಸ ತೆಂಗು ಸಸಿ ನೆಡಲು ಕ್ರಮ, ಕರಾವಳಿ ಜಿಲ್ಲೆಗಳಿಗೆ ಇದು ಸಹಕಾರಿ, ರೈತರ ಆದಾಯ ದ್ವಿಗುಣಕ್ಕೆ, ಯುವಕರಿಗೆ ಉದ್ಯೋಗಕ್ಕೆ ಉತ್ತೇಜನ.

ಪಶುಪಾಲನೆ- ಮೀನುಗಾರಿಕೆಗೆ ಉತ್ತೇಜನ
ಸಾಲದ ವ್ಯವಸ್ಥೆ, ಡೈರಿಗಳ ಹೆಚ್ಚಳಕ್ಕೆ ತೀರ್ಮಾನ

* ಪ್ರವಾಸೋದ್ಯಮ: ಗೈಡ್‌ಗಳಿಗಾಗಿ ಪೈಲೆಟ್ ಸ್ಕೀಮ್- 20 ಪ್ರವಾಸಿ ಸ್ಥಳಗಳ ಗೈಡ್‌ಗಳಿಗೆ ಕೇಂದ್ರದ ಸಹಕಾರ-ಪರ್ವತ ರೈಲುಗಳ ಘೋಷಣೆ

* ಕೈಗಾರಿಕೆ-ಸರಕಾರದ ಮಧ್ಯೆ ಸೇತುವೆಯಾಗಿ ಕೆಲಸ ಮಾಡುವ ಹೋಟೆಲ್‌ಗಳ ಅಭಿವೃದ್ಧಿ,

* ಗೈಡ್‌ಗಳಿಗಾಗಿ ಪೈಲೆಟ್ ಸ್ಕೀಮ್- 20 ಪ್ರವಾಸಿ ಸ್ಥಳಗಳ ಗೈಡ್‌ಗಳಿಗೆ ಕೇಂದ್ರದ ಸಹಕಾರ. ಟ್ರೆಕಿಂಗ್ ಅಭಿವೃದ್ಧಿ, ಮೌಂಟೈನ್ ಟ್ರೈನ್ಸ್ ಆರಂಭಕ್ಕೆ ಒತ್ತು- ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಪೂರ್ವ ಪಶ್ಚಿಮ ಘಟ್ಟಗಳಲ್ಲೂ ನಿರ್ಮಾಣ

* ಶಿಕ್ಷಣ: ಎಲ್ಲಾ ರಾಜ್ಯಗಳಿಗೆ 5 ಯುನಿವರ್ಸಿಟಿ ಟೌನ್‌ಶಿಪ್ ನಿರ್ಮಾಣ, ಎಲ್ಲಾ ಜಿಲ್ಲೆಗೂ ವಿದ್ಯಾರ್ಥಿನಿ ನಿಲಯದ ಸ್ಥಾಪನೆ

* ಯೂನಿವರ್ಸಿಟಿ, ಸ್ಕಿಲ್ ಸೆಂಟರ್ ಗಳ ನಿರ್ಮಾಣಕ್ಕೆ ಕೇಂದ್ರದ ಸಹಕಾರ.

* ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ, ಎಲ್ಲಾ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿ ನಿಲಯದ ನಿರ್ಮಾಣ.

* ಗುಜರಾತ್’ನ ಜಾಮ್ ನಗರದಲ್ಲಿ WHO ಕೇಂದ್ರ ನಿರ್ಮಾಣ

* ಪ್ರವಾಸೋದ್ಯಮ ಕ್ಷೇತ್ರದ ಉತ್ತೇಜನಕ್ಕಾಗಿ National Institue of Hospitality ನಿರ್ಮಾಣ. ಈಶಾನ್ಯ ಭಾರತದಲ್ಲಿ ಏಮ್ಸ್ ಆಸ್ಪತ್ರೆ ನಿರ್ಮಾಣದ ಘೋಷಣೆ.

* ಪ್ರತೀ ಜಿಲ್ಲೆಗೊಂದು ಬಾಲಕಿಯರ ಹಾಸ್ಟೆಲ್ ನಿರ್ಮಾಣ.

* ಎಐ ಟೆಕ್ನಾಲಜಿ ಅಭಿವೃದ್ದಿಗೆ ಒತ್ತು
ಎಐ ಟೆಕ್ನಾಲಜಿ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರದ ವಿಶೇಷ ಆದ್ಯತೆ, ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಐದು ಮೆಡಿಕಲ್ ಹಬ್ ದೇಶಾದ್ಯಂತ ನಿರ್ಮಾಣ.

* ಪಶುಸಾಕಣೆಗೆ ಉತ್ತೇಜನ
ಪಶುವೈದ್ಯರ ಹೆಚ್ಚಳಕ್ಕೆ ಕಾಲೇಜು ನಿರ್ಮಾಣ, ವಿದೇಶಗಳ ಸಂಸ್ಥೆಗಳ ಜತೆ ಸಹಕಾರದಲ್ಲಿ ಬೆಳವಣಿಗೆ.

* ಆಯುರ್ವೇದಕ್ಕೆ ಹೆಚ್ಚಿನ ಮನ್ನಣೆ
ಆಯುರ್ವೇದಕ್ಕೆ ಹೆಚ್ಚಿನ ಒತ್ತು. 3 ಸಂಸ್ಥೆಗಳ ನಿರ್ಮಾಣ, ಆಯುಷ್ ಫಾರ್ಮಸಿಗಳ ಅಭಿವೃದ್ಧಿ, ಮೆಸಿನ್ ಸೆಂಟರ್ -ರಿಸರ್ಚ್ ಸೆಂಟರ್ ಗಳ ನಿರ್ಮಾಣಕ್ಕೆ ಒತ್ತು.

* 7 ಹೈಸ್ಪೀಡ್ ರೈಲು ಕಾರಿಡಾರ್ ನಿರ್ಮಾಣ
7 ಹೈಸ್ಪೀಡ್ ರೈಲು ಕಾರಿಡಾರನ್ನು ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದ್ದು, ಇದರ ಅನುಕೂಲ ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆಗೂ ಸಿಗಲಿದೆ.

* ದೇಶಾದ್ಯಂತ ಇಪ್ಪತ್ತು ಜಲಮಾರ್ಗ ನಿರ್ಮಾಣ: ವಾರಣಾಸಿ, ಪಾಟ್ನಾದಲ್ಲಿ ಅಭಿವೃದ್ಧಿ
ಮುಂದಿನ ಐದು ವರುಷಗಳಲ್ಲಿ ದೇಶಾದ್ಯಂತ ಇಪ್ಪತ್ತು ಜಲಮಾರ್ಗ ನಿರ್ಮಾಣ. ಪ್ರಮುಖ ಬಂದರಿಗೆ ಸಂಪರ್ಕಿಸುವಂತೆ ನಿರ್ಮಾಣ. ರಫ್ತು ಉತ್ತೇಜನಕ್ಕಾಗಿ ಜಲಮಾರ್ಗ ನಿರ್ಮಾಣ.

* ದೇಶದ ಪ್ರಮುಖ ದೇವಾಲಯಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಕ್ರಮ.

* ಕೈಗಾರಿಕಾ ಕ್ಲಸ್ಟರ್‌ಗಳ ಅಭಿವೃದ್ಧಿ-10 ಸಾವಿರ ಕೋಟಿ ರೂಪಾಯಿ ಮೀಸಲು
ಕೈಗಾರಿಕೆಗಳ ಕ್ಲಸ್ಟರ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ.

* ಸಣ್ಣ-ಮಧ್ಯಮ ವರ್ಗದ ಕೈಗಾರಿಕೆಗಳಿಗೆ 10 ಸಾವಿರ ಕೋಟಿ ರೂಪಾಯಿ ಮೀಸಲು ಕೊಡಲಾಗ್ತಿದೆ,

* ದೇಶಾದ್ಯಂತ ರೇರ್ ಅರ್ಥ್ ಗಣಿಗಾರಿಕೆಗೆ ಕೇಂದ್ರದ ವಿಶೇಷ ಆದ್ಯತೆ.

* ಬಯೋ ಫಾರ್ಮ್’ಗೆ ಹತ್ತು ಸಾವಿರ ಕೋಟಿ ಮೀಸಲು.

* ಸಣ್ಣ ಮತ್ತು ಅತಿಸಣ್ಣ ಉದ್ಯಮಕ್ಕೆ ಕೇಂದ್ರದ ವಿಶೇಷ ಪ್ಯಾಕೇಜ್.

* ದೇಶಾದ್ಯಂತ ಇನ್ನೂರು ಕೈಗಾರಿಕಾ ಹಬ್’ಗಳು ಮೇಲ್ದರ್ಜೆಗೆ.

* ಖಾದಿ, ಗ್ರಾಮೋದ್ಯೋಗ, ಕರಕುಶಲಕ್ಕೆ ಹೆಚ್ಚು ಒತ್ತು

ಟೆಕ್ಸಟೈಲ್ ಕ್ಷೇತ್ರದ ಅಭಿವೃದ್ದಿಗಾಗಿ ರಾಷ್ಟ್ರೀಯ ನೀತಿ ಘೋಷಣೆ. ಜವಳಿ ಉದ್ಯಮದ ಅಭಿವೃದ್ದಿಗೆ ಕೇಂದ್ರ ಸರ್ಕಾರ ಹಲವಾರು ಕ್ರಮ ತೆಗೆದುಕೊಳ್ಳಲಾಗಿದೆ.

* ಖಾದಿ ಉದ್ಯಮದ ಅಭಿವೃದ್ಧಿಗೆ ಹೊಸ ಯೋಜನೆ.

* ಕಂಟೈನರ್ ಅಭಿವೃದ್ದಿ ಯೋಜನೆಗಾಗಿ ಹತ್ತು ಸಾವಿರ ಕೋಟಿ. ಮೀಸಲು

* ವಿವಿಧ ಲೋಹಗಳ ಸಂಗ್ರಹಕ್ಕೆ ಕಾರಿಡಾರ್ ನಿರ್ಮಾಣ

* ದೇಶವನ್ನು ಔಷಧ ತಯಾರಿಕಾ ಹಬ್ ಅನ್ನಾಗಿ ಪರಿವರ್ತಿಸಲು ಕ್ರಮ

* ವಿರಳ ಲೋಹಗಳ ಸಂಗ್ರಹಕ್ಕೆ ದೇಶದ ವಿವಿಧೆಡೆ ಕಾರಿಡಾರ್ ನಿರ್ಮಾಣ.

* ಸೆಮಿಕಂಡಕ್ಟರ್ ಯೋಜನೆಗಾಗಿ ನಲವತ್ತು ಸಾವಿರ ಕೋಟಿ ಮೀಸಲು.

* 2026ರ ಬಜೆಟ್ ಯುವಶಕ್ತಿಯ ಬಜೆಟ್

* ನಿರ್ಮಲಾ ಸೀತಾರಾಮನ್ ಹೇಳಿದ್ದು: ಕರ್ತವ್ಯ ಭವನದಲ್ಲಿ ಮೊದಲ ಬಜೆಟ್ ಸಿದ್ದಪಡಿಸಿದ್ದೇವೆ. ನಮ್ಮ ಸರ್ಕಾರ ಬಂದಾಗಿನಿಂದ ಬಡತನದ ಪ್ರಮಾಣ ಕಮ್ಮಿಯಾಗಿದೆ. ನಮ್ಮ ದೇಶದ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿದೆ. ಸರ್ಕಾರದ ಪರವಾಗಿ ನಿಂತ ಭಾರತದ ಜನತೆಗೆ ಧನ್ಯವಾದಗಳು.

* ಕರ್ತವ್ಯ ಭವನದಲ್ಲಿ ರಚಿಸಿದ ಮೊದಲ ಬಜೆಟ್‌: 3 ಕರ್ತವ್ಯಕ್ಕೆ ಆದ್ಯತೆ
ಕರ್ತವ್ಯ ಭವನದಲ್ಲಿ ರಚಿಸಲಾದ ಮೊದಲ ಬಜೆಟ್ ಇದಾಗಿದ್ದು – 3 ಕರ್ತವ್ಯಕ್ಕೆ ಒತ್ತು ಕೊಡಲಾಗಿದೆ.
1) ಉತ್ಪನ್ನಗಳನ್ನು ಹೆಚ್ಚಿಸುವ ಮೂಲಕ ಆರ್ಥಿಕತೆಗೆ ಶಕ್ತಿ ತುಂಬುವುದು
2) ಜನರ ನಿರೀಕ್ಷೆಗಳನ್ನು ಪೂರ್ಣಗೊಳಿಸಿ-ದೇಶದ ಬೆಳವಣಿಗೆಯಲ್ಲಿ ಭಾಗವಹಿಸುವಂತೆ ಮಾಡುವುದು
3) ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಹಿನ್ನೆಲೆಯಲ್ಲಿ ಯೋಜನೆಗಳ ಜಾರಿ

* ಬಜೆಟ್ ದಿನದ ಸೀರೆಗಳು ಸಾಂಸ್ಕೃತಿಕ ಹೇಳಿಕೆ
ಇತ್ತೀಚಿನ ವರ್ಷಗಳಲ್ಲಿ, ನಿರ್ಮಲಾ ಸೀತಾರಾಮನ್ ಅವರ ಬಜೆಟ್ ದಿನದ ಸೀರೆಗಳು ಸಾಂಸ್ಕೃತಿಕ ಹೇಳಿಕೆಯಾಗಿ ಬದಲಾಗಿವೆ. ಪರಂಪರೆ ಮತ್ತು ಸಂಸ್ಕೃತಿಯನ್ನು ರಾಜಕೀಯದೊಂದಿಗೆ ಬೆರೆಸುತ್ತಿವೆ. ತಮಿಳುನಾಡಿನಲ್ಲಿ ಸಾಂಪ್ರದಾಯಿಕವಾಗಿ ನೇಯಲಾಗುವ ಕಾಂಜೀವರಂ ಸೀರೆಗಳು 2005 ರಲ್ಲಿ ಭೌಗೋಳಿಕ ಸೂಚನೆ ಟ್ಯಾಗ್ ಅನ್ನು ಪಡೆದುಕೊಂಡವು‌.

* ಮೆರೂನ್ ಕಂಚೀವರಂ ಸೀರೆ ಉಟ್ಟು ನಿರ್ಮಲಾ ಸೀತಾರಾಮನ್ 9ನೇ ಬಾರಿಗೆ ಬಜೆಟ್ ಮಂಡನೆ.

* ದೇಶದ ಇತಿಹಾಸದಲ್ಲೇ ಎರಡನೇ ಬಾರಿ ’ಸಂಡೇ ಬಜೆಟ್’

BUDGET 2026 ಕೇಂದ್ರ ಬಜೆಟ್: ಯಾವುದು ಅಗ್ಗ? ಯಾವುದು ದುಬಾರಿ?

ಕೃಷಿಯನ್ನು ಜಾಗತಿಕ ಬ್ರ್ಯಾಂಡ್ ಮಾಡುವ ಯೋಜನೆ, ಬಜೆಟ್‌ನಲ್ಲಿ ರೈತರಿಗೆ ಸಿಕ್ಕಿದ್ದೇನು?

ಕ್ಯಾನ್ಸರ್’ ರೋಗಿಗಳಿಗೆ ಗುಡ್ ನ್ಯೂಸ್ : ಇಳಿಯಲಿದೆ ಈ ಔಷಧಗಳ ರೇಟ್

ಹೊಸ ಆದಾಯ ತೆರಿಗೆ ಬಗ್ಗೆ ಬಜೆಟ್ ನಲ್ಲಿ ಹೇಳಿದ್ದೇನು?

ಇನ್ಮುಂದೆ ಗ್ರಾಮೀಣ ಮಹಿಳೆಯರು ನಡೆಸುವ ಉದ್ಯಮಗಳಿಗೆ ಶಿ-ಮಾರ್ಟ್‌ಗಳು

TAGGED:A comprehensive look at the Union Budget
Share This Article
Facebook Twitter Copy Link Print
Previous Article ಕರ್ನಾಟಕ ಬುಲ್ಡೋಜರ್ಸ್ ದಾಳಿಗೆ ನಲುಗಿದ ಬೆಂಗಾಲ್ ಟೈಗರ್ಸ್; ಗೆಲುವಿನತ್ತ ಕಿಚ್ಚ ಬಾಯ್ಸ್
Next Article Mylaralinga Karnika ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್: ಮೈಲಾರಲಿಂಗ ಕಾರ್ಣಿಕದ ಅರ್ಥವೇನು?

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?