newsics.com
25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ, ಪ್ರತಿ ಜಿಲ್ಲೆಯಲ್ಲೂ ಮಹಿಳಾ ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಪ್ರವಾಸೋದ್ಯಮ ಉತ್ತೇಜಿಸಲು 10 ಸಾವಿರ ಗೈಡ್ಗಳಿಗೆ ತರಬೇತಿ ಕೇಂದ್ರ ಸ್ಥಾಪನೆ, 20 ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಗೈಡ್ಗಳಿಗೆ ತರಬೇತಿ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಡಾಂಕುಣಿಯಿಂದ ಸೂರತ್ವರೆಗೂ ಸರಕು ಸಾಗಣೆ ಕಾರಿಡಾರ್, ಪರಿಸರ ಸ್ನೇಹಿ ಸರಕು ಸಾಗಣೆ ಉತ್ತೇಜಿಸಲು ಹೊಸ ಯೋಜನೆ , 5 ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗ ಘೋಷಣೆ, ಬಂಡವಾಳ ಹೂಡಿಕೆಗೆ ಅನಿವಾಸಿ ಭಾರತೀಯರಿಗೂ ಅವಕಾಶ, ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗೆ ಉನ್ನತ ಮಟ್ಟದ ಸಮಿತಿ ರಚನೆ.
ಆತ್ಮನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲು, ಭವಿಷ್ಯದ ಚಾಂಪಿಯನ್ಗಳಿಗಾಗಿ 10 ಸಾವಿರ ಕೋಟಿ ರೂಪಾಯಿ ಅನುದಾನ, ಟೀಯರ್ 2 ಹಾಗೂ 3 ನಗರಗಳ ಅಭಿವೃದ್ಧಿಗೆ ಸರ್ಕಾರ ಕ್ರಮ; ಮಧ್ಯಮ ಮತ್ತು ಸಣ್ಣ ಉದ್ಯಮಿಗಳಿಗೆ ಸಾಲದ ನೆರವು. ಖಾದಿ ಮತ್ತು ಕರಕುಶಲ ವಸ್ತುಗಳಿಗಾಗಿ ಹೊಸ ಯೋಜನೆ ಘೋಷಣೆ; ತರಬೇತಿ, ಕೌಶಲ್ಯ ಮತ್ತು ಉತ್ಪಾದನೆಯ ಗುಣಮಟ್ಟ ಸುಧಾರಣೆ; ಜಾಗತಿಕ ಮಾರುಕಟ್ಟೆ ಮತ್ತು ಬ್ರ್ಯಾಂಡಿಂಗ್ಗೆ ಕೇಂದ್ರ ನೆರವು ಎಂದಿದ್ದಾರೆ.