https://youtube.com/shorts/Z7vopgc72sA?si=i8gXEm_aRXlM3wI8
Subscribe ನ್ಯೂಸಿಕ್ಸ್ ಕನ್ನಡ
newsics.com
ನಟಿ ಶ್ರುತಿ ಹಾಸನ್, ಆಕಾಶಮ್ಲೋ ಓಕಾ ತಾರಾ ಚಿತ್ರದ ತಮ್ಮ ವೈರಲ್ ಸಿಗರೇಟ್ ಧಮ್ ಹೊಡೆಯುವ ಫೋಟೋದ ಕುರಿತು ಸುದ್ದಿಯಲ್ಲಿದ್ದಾರೆ.
ದುಲ್ಕರ್ ಸಲ್ಮಾನ್ ಈಗ ‘ಆಕಾಶಮ್ಲೋ ಒಕ್ತ ತಾರಾ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಈ ಚಿತ್ರವನ್ನು ಪವನ್ ಸಾದಿನೇನಿ ನಿರ್ದೇಶಿಸುತ್ತಿದ್ದಾರೆ. ಪ್ರತಿಷ್ಠಿತ ಗೀತಾ ಆರ್ಟ್ಸ್ ಮತ್ತು ಸ್ವಪ್ನ ಸಿನಿಮಾ ಅಡಿಯಲ್ಲಿ ಸಂದೀಪ್ ಗುನ್ನಮ್ ಮತ್ತು ರಮ್ಯಾ ಗುನ್ನಮ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದುಲ್ಕರ್‌ಗೆ ನಾಯಕಿಯಾಗಿ ಹೊಸ ನಾಯಕಿ ಸಾತ್ವಿಕ ವೀರವಳ್ಳಿ ನಟಿಸುತ್ತಿದ್ದಾರೆ. ಶ್ರುತಿಹಾಸನ್ ಕೂಡ ಸಿನಿಮಾದ ಭಾಗ ಆಗಿದ್ದಾರೆ.ದುಲ್ಕರ್ ಸಲ್ಮಾನ್ ಜೊತೆ ನಟಿಸುತ್ತಿರುವ ಈ ಪ್ಯಾನ್-ಇಂಡಿಯಾ ಚಿತ್ರ 2026ರಲ್ಲಿ ತೆರೆಗೆ ಬರಲಿದೆ.
ಶ್ರುತಿ ಹಾಸನ್ ಜನ್ಮದಿನದ ಪ್ರಯುಕ್ತ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಆಯ್ದ ಚಿತ್ರಗಳನ್ನು ಮಾಡುತ್ತಿರುವ ಶ್ರುತಿ ಹಾಸನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ ಚಿತ್ರತಂಡ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.
ಅವರು ಕನ್ನಡಕ ಧರಿಸಿದ್ದಾರೆ. ಅವರ ತುಟಿಗಳ ಮೇಲಿನ ಸಿಗರೇಟ್ ಮತ್ತು ಅದರಿಂದ ಬರುತ್ತಿರುವ ಹೊಗೆ ಅವರ ಪಾತ್ರಕ್ಕೆ ರಾನೆಸ್ ನೀಡಿದೆ. ಶ್ರುತಿ ಹಾಸನ್ ಪಾತ್ರವು ಕಥೆಯಲ್ಲಿ ಪ್ರಮುಖ ತಿರುವು ನೀಡಲಿದೆ ಎನ್ನಲಾಗಿದೆ. ಈ ಫೋಟೋ ವೈರಲ್ ಮಾಡಲಾಗುತ್ತಿದೆ.
https://www.instagram.com/p/DUDYIhQkzAC/?igsh=MWRsM3dvY29ydzcwYg==