https://youtube.com/shorts/2dkIPQOWaBI?si=yWrxSqwrmu8x_ve-
Subscribe ನ್ಯೂಸಿಕ್ಸ್ ಕನ್ನಡ
newsics.com
ನಟಿ ಕಾವ್ಯಾ ಗೌಡ ಹಾಗೂ ಅವರ ಪತಿ ಸೋಮಶೇಖರ್ ಮೇಲೆ ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಈ ಸಂಬಂಧ ದೂರು ಕೂಡ ದಾಖಲಾಗಿದೆ. ಈ ಮಧ್ಯೆ ಇದೀಗ ನಟಿ ಕಾವ್ಯ ಕೆಲವೊಂದು ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ನಟಿ ಕಾವ್ಯ,ಈಗ ಎಫ್‌ಐಆರ್ ಆಗಿದೆ.. ಕಾನೂನು ಕ್ರಮ ಏನಾಗಬೇಕು ಆಗುತ್ತೆ. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಅವರು ಏನೆಲ್ಲಾ ಹೇಳ್ತಿದ್ದಾರೆ ಹೇಳಲಿ. ಮದುವೆ ಆಗಿ ನಾಲ್ಕು ವರ್ಷ ಆಯ್ತು.. ಗಂಡ ಹಾಗೂ ಮಾವನ ಕಡೆಯಿಂದ ಒಂದು ರೂಪಾಯಿ ಬಂದಿಲ್ಲ. ಹದಿನೆಂಟು ವರ್ಷದಿಂದ ಇಂಡಿಪೆಂಡೆಂಟ್ ಆಗಿ ಬದುಕ್ತಿದಿನಿ ಎಂದು ಕಾವ್ಯ ಹೇಳಿದ್ದಾರೆ.
ಹಾಗೆಯೇ ನನ್ನ ಜೀವನ ನನಗೆ ಗೊತ್ತು, ಯಾರಿಗೋಸ್ಕರ ಭಯ ಪಡ್ತಿಲ್ಲ. ನನ್ನ ಮಗಳ ಮೇಲೆ ಕೈ ಮಾಡಿದ್ರು, ಎರಡು ವರ್ಷದ ಮಗು ಮೇಲೆ ಹೇಮಾ ಎಂಬಾಕೆ ಕೈ ಮಾಡಿದ್ರು. ಯಾಕೆ ಅಂತಾ ಕೇಳಿದಕ್ಕೆ ವಿಷ್ಯ ಎಲ್ಲೆಲ್ಲೋ ಹೋಯ್ತು. ನಂತರ ಆಕೆ ಅಪ್ಪ ಬಂದು ನನಗೆ ಹೊಡೆದ್ರು. ಈ ಮುಂಚೆ ಕೂಡಾ ನನಗೆ ಹೊಡೆದಿದ್ರು. ಅಷ್ಟೇ ಅಲ್ಲ ಆಯಪ್ಪ ರೇ* ಮಾಡ್ತೀನಿ ಅಂತಾ ಹೇಳಿದ್ರು. ಅದು ಕೂಡಾ ನೂರಾರು ಜನರ ಮುಂದೆ ಮಾಡ್ತೀನಿ ಅಂದ್ರು. ನಾನು ಏನ್ಮಾಡೋಣ ಹೇಳಿ. ಎಲ್ಲರೂ ನನ್ನ ಮೇಲೆ ಅಟ್ಯಾಕ್ ಮಾಡಿದ್ರು ಎಂದು ಕಾವ್ಯ ಆರೋಪಿಸಿದ್ದಾರೆ.
ಮತ್ತೊಂದೆಡೆ ನನ್ನ ಪತಿ ಐಸಿಯು ನಲ್ಲಿದ್ದಾರೆ. ಸುಮಾ ಅನ್ನೋಕೆ ನನ್ನ ಮಗಳನ್ನ ನೋಡ್ಕೋತಿದ್ದಾಳೆ. ಆಕೆ ಮೇಲೆ ಸುಮ್ಮನೆ ಕಳ್ಳತನ ಆರೋಪ ಮಾಡಿದ್ರು. ಅಷ್ಟೇ ಅಲ್ಲದೆ ಲಿವಿಂಗ್ ಏರಿಯಾದಲ್ಲಿ ನಾನು ಒಂದೇ ಒಂದು ಫೋಟೋ ತಗೊಂಡೆ ಅಷ್ಟಕ್ಕೇ ಸುಳ್ಳು ಆರೋಪ ಮಾಡಿದ್ರು. ಅಷ್ಟೇ ಅಲ್ಲ, ನನ್ನ ಮಗಳ ಮೇಲೆ ಹಲ್ಲೆ ಮಾಡಿದ್ದಕ್ಕೆ ನನಗೆ ತಡೆದುಕೊಳ್ಳೋಕೆ ಆಗಿಲ್ಲ.
ಅವರ ಅಪ್ಪ ನೂರು ಜನರ ಮುಂದೆ ರೇಪ್ ಮಾಡ್ತೀನಿ ಅಂದಾಗ ನನ್ನ ಗಂಡ ರಿಯಾಕ್ಟ್ ಮಾಡಿದ್ದಾರೆ ಎಂದು ಕಾವ್ಯ ಹೇಳಿದ್ದಾರೆ.