https://youtube.com/shorts/qpCJajqGxrE?si=vJgoarkrMD0AAjgU
Subscribe ನ್ಯೂಸಿಕ್ಸ್ ಕನ್ನಡ
newsics.com
ಜೈಲಿನಲ್ಲಿರುವ ವಿಚಾರಣಾಧೀನ ಆರೋಪಿಗಳಿಗೆ ಒದಗಿಸುವ ಸೌಕರ್ಯಗಳ ಕುರಿತು ಕಾರಾಗೃಹ ಮತ್ತು ಸುಧಾರಣಾ ಸೇವೆಯ ಡಿಜಿಪಿ ಅಲೋಕ್ ಕುಮಾರ್ ಮಹತ್ವದ ಸುತ್ತೋಲೆ ಹೊರಡಿಸಿದ್ದು, ಕೈದಿಗಳಿಗೆ ಆಹಾರ, ಬಟ್ಟೆ, ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಕ್ರಮವಹಿಸುವಂತೆ ರಾಜ್ಯ ಎಲ್ಲಾ ಜೈಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಮತ್ತು ಇತರ ಆರೋಪಿಗಳು ಮನೆ ಊಟಕ್ಕೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಫುಡ್ ಮತ್ತು ಬೆಡ್ ಬಗ್ಗೆ ಹೊಸ ಆದೇಶ ಹೊರಬಿದ್ದಿದೆ.
ಹೌದು, ರಾಜ್ಯದ ಎಲ್ಲಾ ಜೈಲುಗಳಿಗೆ ಸುತ್ತೋಲೆ ಹೊರಡಿಸಿದ ಅಲೋಕ್ ಕುಮಾರ್ ಅವರು ಕೈದಿಗಳಿಗೆ ಆಹಾರ, ಬಟ್ಟೆ ಮತ್ತು ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ.
ಜೈಲು ಮ್ಯಾನ್ಯುಯಲ್ ಪ್ರಕಾರ ಆಹಾರ, ಬಟ್ಟೆ ಮತ್ತು ಹಾಸಿಗೆಗಳನ್ನು ಒದಗಿಸಲಾಗುತ್ತಿದೆ. ಸಂದರ್ಶನದ ಸಮಯದಲ್ಲಿ ಕೈದಿಗಳಿಗೆ ಖಾಸಗಿ ವ್ಯಕ್ತಿಗಳಿಂದ ಆಹಾರ ಪೂರೈಕೆಯಾಗುತ್ತಿದ್ದು ಖಾಸಗಿ ವ್ಯಕ್ತಿಗಳ ಆಹಾರ ಪೂರೈಕೆಗೆ ಕಡಿವಾಣ ಹಾಕಲು ನಿರ್ದೇಶಿಸಲಾಗಿದೆ.
ಸಂದರ್ಶನ ಸಮಯದಲ್ಲಿ ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳನ್ನು ನೀಡಲು ಅವಕಾಶ ಇದ್ದು ಅದು ನಿರ್ದಿಷ್ಟ ಗ್ರಾಂ ಗಳಲ್ಲಿ ಮಾತ್ರ ನೀಡಲು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಬಾಳೆಹಣ್ಣು, ಸೇಬು, ಮಾವು, ಪೇರಳೆ ಮತ್ತು ಚಿಕ್ಕೂಗಳು 2ಕೆ ಜಿ ಒಳಗೆ ಮಾತ್ರ ನೀಡಬೇಕು ಎನ್ನಲಾಗಿದೆ.
ಡ್ರೈ ಫ್ರೂಟ್ಸ್ ಹಾಗೂ ಬೇಕರಿ ತಿಂಡಿಗಳು ಅರ್ಧ ಕೆ.ಜಿ ಮೀರುವಂತಿಲ್ಲ. ಎರಡು ಜೊತೆ ಬಟ್ಟೆ ಹಾಗೂ ಎರಡು ಒಳಉಡುಪು ನೀಡಬೇಕು. ಅದನ್ನು ಮೀರಿ ಹೆಚ್ಚುವರಿ ಬಟ್ಟೆಗಳನ್ನು ಕೂಡ ನೀಡುವಂತಿಲ್ಲ ( ವಿಚಾರಣಾಧೀನ ಕೈದಿಗಳಿಗೆ) ಎನ್ನಲಾಗಿದೆ.
ಎರಡು ರೀತಿಯಲ್ಲಿ ತಪಾಸಣೆಗೆ ಸೂಚನೆ ನೀಡಲಾಗಿದ್ದು ದೈಹಿಕ ತಪಾಸಣೆ, ಸೆಕ್ಯುರಿಟಿ ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ. ಅವಶ್ಯಕತೆ ಬಿದ್ದರೇ ಜೈಲಾಧಿಕಾರಿಗಳು ಯಾವುದೇ ರೀತಿಯ ತಪಾಸಣೆ ಕೂಡ ನಡೆಸಬಹದು ಎನ್ನಲಾಗಿದೆ.
ತಕ್ಷಣವೇ ಈ ನಿಯಮಗಳು ಜಾರಿ ಬರುವಂತೆ ಸುತ್ತೋಲೆ ಕಳುಹಿಸಲಾಗಿದ್ದು ರಾಜ್ಯದ ಎಲ್ಲಾ ಜೈಲುಗಳಿಗೂ ಅಲೋಕ್ ಕುಮಾರ್ ಆದೇಶ ಮಾಡಿದ್ದಾರೆ. ಜೈಲಿನ ಡಿಜಿಪಿ ಅಲೋಕ್ ಕುಮಾರ್ ರಿಂದ ಆದೇಶ ಹೊರಬಿದ್ದಿದೆ.