Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಅವಲಹಳ್ಳಿ ಫಾರೆಸ್ಟ್‌ನಲ್ಲಿ ವಾಕಿಂಗ್ ಹೋದ ಯುವತಿಗೆ ಕಿರುಕುಳ ನೀಡಿರುವುದಾಗಿ ವಿಡಿಯೋ ಮೂಲಕ ಆರೋಪ ಮಾಡಿದ್ದಾಳೆ. ಆದರೆ ಇದು ಕೇರಳ ರೀತಿ ಮಾಡಿದ ಲೈಕ್ಸ್ ವಿಡಿಯೋನಾ ಅನ್ನೋ ಅನುಮಾನ ಕಾಡಿದೆ.
ರಿತಿಕಾ ಸೂರ್ಯವಂಶಿ ಅನ್ನೋ ಯುವತಿ ಎಂದಿನಂತೆ ಅವಲಹಳ್ಳಿ ಫಾರೆಸ್ಟ್ ವಲಯದಲ್ಲಿ ವಾಕಿಂಗ್ ತೆರಳಿದ್ದಾಳೆ.
ಈ ವೇಳೆ ಹುಡುಗರ ಗುಂಪು ರಿತಿಕಾ ಸೂರ್ಯವಂಶಿ ಎದೆಭಾಗದ ಕುರಿತು ಕೆಟ್ಟ ಕಮೆಂಟ್ ಮಾಡಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ. ವಿಡಿಯೋದಲ್ಲಿ ರಿತಿಕಾ ತನ್ನ ಉಡುಪು ಹಾಗೂ ಕಮೆಂಟ್ಸ್ ಕುರಿತು ಹೇಳಿಕೊಂಡಿದ್ದಾಳೆ. ಸ್ಪೋರ್ಟ್ಸ್ ಬ್ರಾ ಹಾಗೂ ಟ್ಯಾಂಕ್ ಟಾಪ್ ಹಾಕಿದ್ದೇನೆ. ವಾಕಿಂಗ್, ರನ್ನಿಂಗ್ ವೇಳೆ ಇದು ಸಾಮಾನ್ಯ ಡ್ರೆಸ್. ಈ ಡ್ರೆಸ್‌ನಲ್ಲಿ ಸಭ್ಯತೆ ದಾಟಿದ ರೀತಿ ಇಲ್ಲ. ನನಗಿದು ಸಾಮಾನ್ಯ ಡ್ರೆಸ್. ಕನ್ನಡದಲ್ಲಿ ಹೇಳಿದ ಪದಗಲು ಅರ್ಥವಾಗಿಲ್ಲ, ಆದರೆ ಅವರು ಕಮೆಂಟ್ ಪಾಸ್ ಮಾಡಿ ನಗುವ ಮೂಲಕ ಕೆಟ್ಟ ದೃಷ್ಟಿಯಿಂದ ನೋಡಿರುವುದು ಸ್ಪಷ್ಟವಾಗಿತ್ತು ಎಂದು ರಿತಿಕಾ ಸೂರ್ಯವಂಶಿ ಹೇಳಿದ್ದಾರೆ.
ರಿತಿಕಾ ಸೂರ್ಯವಂಶಿ ಮಾಡಿದ ವಿಡಿಯೋಗೆ ಪರ ವಿರೋಧ ಚರ್ಚೆಗಳು ಶುರುವಾಗಿದೆ. ನಿಜಕ್ಕೂ ಹುಡುಗರು ಕಮೆಂಟ್ ಮಾಡಿದ್ರಾ ಇಲ್ಲಾ ಲೈಕ್ಸ್ ಗಾಗಿ ಈ ರೀತಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರಾ ಎಂಬ ಪ್ರಶ್ನೆಗಳು ಉದ್ಭವಾಗಿದೆ. ಇದಕ್ಕೆ ಕಾರಣ ಇತ್ತೀಚೆಗೆ ಕೇರಳದಲ್ಲಿ ಇತ್ತೀಚೆಗೆ ಯುವತಿಯೊಬ್ಬಳು ಬಸ್ ಪ್ರಯಾಣದ ವೇಳೆ ಮಾಡಿದ ವಿಡಿಯೋ ಭಾರಿ ಕೋಲಾಹಲ ಸೃಷ್ಟಿ ಮಾಡಿದೆ. ಬಸ್‌ನಲ್ಲಿ ತನಗೆ ಕಿರುಕುಳ ಕೊಟ್ಟಿದ್ದಾರೆ ಎಂದು ವಿಡಿಯೋ ಲೈಕ್ಸ್‌ಗಾಗಿ ವಿಡಿಯೋ ಮಾಡಿ ವ್ಯಕ್ತಿಯ ಬದುಕನ್ನೇ ಕಸಿದುಕೊಂಡಿದ್ದಾಳೆ ಎಂಬ ಆರೋಪಗಳು ಕೇಳಿಬಂದಿದೆ.
https://www.instagram.com/reel/DTsLL01D4z7/?igsh=MWxkeTFoM3p3eGJk