Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಯುಜ್ವೇಂದ್ರ ಚಾಹಲ್ 2020 ರಲ್ಲಿ ಕೊರಿಯೋಗ್ರಾಫರ್ ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಧನಶ್ರೀ ವರ್ಮಾ ಅವರನ್ನು ವಿವಾಹವಾದರು. 2025ರಲ್ಲಿ ಆಕೆಯಿಂದ ವಿಚ್ಛೇದನ ಪಡೆದು ಬೇರೆಬೇರೆಯಾದರು. ಅದರ ನಂತರ ಚಾಹಲ್ ಅವರ ಹೆಸರು ಆರ್‌ಜೆ ಮಹಾವಶ್ ಅವರೊಂದಿಗೆ ತಳುಕು ಹಾಕಿಕೊಂಡಿತು.
ಕ್ರಿಕೆಟಿಗ ಯುಜ್ವೇಂದ್ರ ಚಾಹಲ್, ಧನಶ್ರೀ ವರ್ಮಾರಿಂದ ವಿಚ್ಛೇದನ ಪಡೆದ ನಂತರ ಆರ್‌ಜೆ ಮಹಾವಶ್ ಜೊತೆಗಿನ ಸ್ನೇಹದಿಂದ ಸುದ್ದಿಯಲ್ಲಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳ ನಡುವೆಯೇ, ಇದೀಗ ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ.
ತಾನು ಯಾರನ್ನೂ ಡೇಟಿಂಗ್ ಮಾಡುತ್ತಿಲ್ಲ, ತನ್ನ ವೈಯಕ್ತಿಕ ಜೀವನದ ಬಗ್ಗೆ ಹರಡುವ ಮಾಹಿತಿಗಳು ಆಧಾರರಹಿತ ಎಂದು ತಿಳಿಸಿದ್ದರು. ಈ ಹೇಳಿಕೆ ಕೆಲವು ಮಟ್ಟಿಗೆ ಊಹಾಪೋಹಗಳನ್ನು ಕಡಿಮೆ ಮಾಡಿದರೂ, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳು ಮುಂದುವರಿಯುತ್ತಲೇ ಇತ್ತು.
ಇತ್ತೀಚಿನ ಬೆಳವಣಿಗೆಯಲ್ಲಿ, ಯಜುವೇಂದ್ರ ಚಹಲ್ ಮತ್ತು ಆರ್‌ಜೆ ಮಹ್ವಾಶ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ ಎಂಬುದು ಸುದ್ದಿಯಾಗಿದೆ. ಕೆಲ ದಿನಗಳ ಹಿಂದೆ ವರೆಗೆ ಇಬ್ಬರು ಕೂಡ ಒಬ್ಬರನ್ನೊಬ್ಬರು ಫಾಲೋ ಮಾಡುತಿದ್ದರು. ಆದ್ರೆ ಇದೀಗ ಇಬ್ಬರೂ ಅನ್ ಫಾಲೋ ಮಾಡಿಕೊಂಡಿದ್ದಾರೆ.
ಈ ಘಟನೆ ಹೊರಬಂದ ನಂತರ, ಅಭಿಮಾನಿಗಳು ಮತ್ತೆ ಚಹಲ್ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ಶುರುಮಾಡಿದ್ದಾರೆ. ಅವರ ಸ್ನೇಹ ಮುರಿದುಹೋಗಲು ಕಾರಣವೇನು? ಅನ್ನೋದು ಗೊತ್ತಾಗಿಲ್ಲ.
https://www.newsics.com/2026/01/22/a-man-raped-a-two-and-a-half-month-old-puppy/