Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಡಿಸೆಂಬರ್‌ನಲ್ಲಿ ದಾಖಲೆಯ ಚಳಿ ದಾಖಲಾಗಿದ್ದರಿಂದ, ಈ ಬಾರಿಯ ಬೇಸಿಗೆ ಬಿರು ಬೇಸಿಗೆ ಆಗಲಿದೆ. ಯಾಕಂದ್ರೆ ಈ ಬಾರಿ ಸಾಮಾನ್ಯಕ್ಕಿಂತಲೂ ಹೆಚ್ಚು ತಾಪಮಾನ ಇರುತ್ತೆ ಅಂತಾ ಹವಾಮಾನ ತಜ್ಞರು ಹೇಳಿದ್ದಾರೆ. ರಾಜ್ಯದಲ್ಲಿ ಈ ವರ್ಷವೂ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗುವ ಸಾಧ್ಯತೆ ಹೆಚ್ಚಿದೆ.ಜನವರಿ ಅಂತ್ಯದ ವೇಳೆಗೆ ಚಳಿ ಕಡಿಮೆಯಾಗಿ, ಫೆಬ್ರವರಿಯಿಂದಲೇ ಬಿಸಿಲು ಆರಂಭವಾಗಲಿದೆ.
ಹವಾಮಾನ ಇಲಾಖೆ ಪ್ರಕಾರ ಮಾರ್ಚ್‌ನಿಂದ ಮೇ.31ವರೆಗೆ ಬೇಸಿಗೆಗಾಲ ಎಂದು ಕರೆಯಲಾಗುತ್ತದೆ. ಆದರೆ, ವಾಡಿಕೆಗಿಂತ ಮುನ್ನವೇ ಅಂದರೆ ಫೆ.1ರಿಂದ ಬೇಸಿಗೆ ಶುರುವಾಗುವ ಸಾಧ್ಯತೆ ಇದೆ. ಫೆಬ್ರವರಿ ಆರಂಭದಲ್ಲೇ ಉಷ್ಣಾಂಶ ಹೆಚ್ಚಳವಾಗುವ ಸಾಧ್ಯತೆ ಇದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಬಿಸಿಲಿನ ತೀವ್ರತೆ ಜಾಸ್ತಿ ಇರಲಿದೆ. ಈ ಸಂದರ್ಭದಲ್ಲಿ ಬೀಸಿಗಾಳಿ(ಹೀಟ್‌ವೇವ್) ಬೀಸಲಿದೆ.
ಜಾಗತಿಕ ತಾಪಮಾನ ಏರಿಕೆ, ತೇವಾಂಶ ಕೊರತೆ, ಶುಭ್ರ ಆಕಾಶ, ಲಾ ನಿನಾ ತಗ್ಗುವುದು ಮತ್ತು ಒಣಗಾಳಿ ಬೀಸುವುದೂ ಸೇರಿ ಇತರ ಹವಾಮಾನ ವೈಪರೀತ್ಯ ಕಾರಣಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 5-6 ಡಿ. ಸೆ.ಉಷ್ಣಾಂಶ ಹೆಚ್ಚಳವಾಗಲಿದೆ.
ಶುಷ್ಕ ವಾತಾವರಣದಿಂದಾಗಿ ಜನರು ನಾನಾ ರೋಗಗಳಿಗೆ ಒಳಗಾಗುತ್ತಿದ್ದಾರೆ. ಸೂರ್ಯನ ಪ್ರಖರ ಕಿರಣಗಳಿಂದ ಚರ್ಮ ಸುಡುವುದು, ಚರ್ಮದ ಅಲರ್ಜಿಗಳು, ಶ್ವಾಸಕೋಶ ತೊಂದರೆ, ಉಷ್ಣದ ಕೆಮ್ಮು, ತಲೆ ಸುತ್ತು, ಅಂಗೈ-ಅಂಗಾಲು ಉರಿ, ಉರಿ ಮೂತ್ರ, ಮಲಬದ್ಧತೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಗಳಾಗಿವೆ. ಜತೆಗೆ ಬೇಸಿಗೆಯಲ್ಲಿಇವು ಹೆಚ್ಚಾಗಲಿವೆ ಎನ್ನುತ್ತಿದ್ದಾರೆ ವೈದ್ಯರು..
ತಾಪಮಾನ ಹೆಚ್ಚಳಕ್ಕೆ ಕಾರಣವೇನು?
* ಮಣ್ಣಿನಲ್ಲಿ ತೇವಾಂಶ ಕೊರತೆ
* ಕೆರೆ,ಗುಂಟೆಗಳಲ್ಲಿ ನೀರು ಬರಿದಾಗುವುದು
* ತೇವಾಂಶ ಭರಿತ ಮೋಡ ಇಲ್ಲದಿರುವುದು
* ಅರಣ್ಯ ನಾಶ
* ಪಳೆಯುಳಿಕೆ ಇಂಧನ ಸುಡುವುದು
* ಕರ್ನಾಟಕದ ಹೆಚ್ಚಿನ ಭಾಗಗಳು ಶುಷ್ಕ, ಅರೆ ಶುಷ್ಕ ಸ್ಥಿತಿ
ಪರಿಣಾಮವೇನು?
* ಕೃಷಿ ಉತ್ಪಾದನೆಯಲ್ಲಿ ಗಣನೀಯ ಕುಂಠಿತ
* ವಿದ್ಯುತ್ ಕೊರತೆ
* ಕುಡಿಯುವ ನೀರಿಗೆ ಹಾಹಾಕಾರ
* ಮೂಲಸೌಕರ್ಯಕ್ಕೆ ಅಡ್ಡಿ
* ಗಾಳಿಯ ಗುಣಮಟ್ಟ ಹದಗೆಡುವುದು
* ಕಾಡಿನಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಜೀವಕ್ಕೆ ಕಂಟಕ
* ಜನರಿಗೆ ಆರೋಗ್ಯ ಸಮಸ್ಯೆ
* ನಿರ್ಜಲೀಕರಣದಿಂದ ಸಾವು
* ಹೀಟ್ ಸ್ಟ್ರೋಕ್‌ದಿಂದ ಸಾವು ಸಂಭವ
ಪ್ರತಿ ವರ್ಷ ತಾಪಮಾನ ಏರುತ್ತಲೇ ಇದೆ. ಅದೇ ಪ್ರವೃತ್ತಿ ಈ ಬಾರಿಯೂ ಮುಂದುವರಿದಿದೆ. ಹಿಂದೆಲ್ಲಾ ಫೆಬ್ರವರಿಯಲ್ಲಿ ಸರಾಸರಿ ತಾಪಮಾನ ಇರುತ್ತಿತ್ತು. ಈ ಬಾರಿ ಆ ತಾಪಮಾನದ ಪ್ರಮಾಣ 35 ಡಿಗ್ರಿ ಸೆ. ದಾಟಲಿದೆ. ಮಾರ್ಚ್ – ಏಪ್ರಿಲ್‌ನಲ್ಲಿ ತಾಪಮಾನ ತೀವ್ರವಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳುತ್ತಿದೆ.
https://www.newsics.com/2026/01/22/rift-between-yuzvendra-chahal-and-rj-mahwash/