Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಕನ್ನಡ 12′ ಕಾರ್ಯಕ್ರಮದಲ್ಲಿ ರಕ್ಷಿತಾ ಶೆಟ್ಟಿ 2ನೇ ಸ್ಥಾನ ಪಡೆದಿದ್ದಾರೆ. ಅರ್ಥಾತ್ ರನ್ನರ್ ಅಪ್ ಆಗಿದ್ದಾರೆ. ಇಷ್ಟು ದಿನ ‘ಬಿಗ್ ಬಾಸ್’ ಮನೆಯಲ್ಲಿದ್ದ ರಕ್ಷಿತಾ ಶೆಟ್ಟಿಗೆ ಒಟ್ಟಾರೆ 25 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿದೆ.
ಬಿಗ್ ಮನೆಯಲ್ಲಿ ಪಟ ಪಟ ಅಂತ ಎಲ್ಲರ ಮನಗೆದ್ದ ಪಟಾಕಿ ಪೋರಿ ಅಂತಲೇ ಫೇಮಸ್ ಆಗಿರುವ ರಕ್ಷಿತಾ ರನ್ನರ್ ಆಪ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರಕ್ಷಿತಾ ಗೆಲ್ಲಬೇಕು ಅನ್ನೋದು ಅದೆಷ್ಟೋ ಅಭಿಮಾನಿಗಳ ಆಸೆ ಆಗಿತ್ತು. ಆದರೆ ಕೊನೆಯ ಹಂತದಲ್ಲಿ ಬಿಗ್ ಬಾಸ್ ಟ್ರೋಫಿ ರಕ್ಷಿತಾ ತಪ್ಪಿದೆ.
ರನ್ನರ್ ಅಪ್ ರಕ್ಷಿತಾ ಶೆಟ್ಟಿ ರಕ್ಷಿತಾ ಅವರಿಗೆ ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ 20 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯ್ತು. ಟಿಎ ಶರವಣ ಅವರು ವೇದಿಕೆಗೆ ಆಗಮಿಸಿ ರಕ್ಷಿತಾ ಅವರಿಗೆ 20 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ.
ಅದಾದ ಬಳಿಕ ಜಾರ್ ಅಪ್ಲಿಕೇಶನ್ನ ವತಿಯಿಂದ ರಕ್ಷಿತಾ ಅವರಿಗೆ ಐದು ಲಕ್ಷ ರೂಪಾಯಿ ನಗದು ಹಣವನ್ನು ಉಡುಗೊರೆಯಾಗಿ ಸಹ ನೀಡಲಾಯ್ತು. ಬಹಳ ಕಷ್ಟಪಟ್ಟು ಆಡಿದ ರಕ್ಷಿತಾಗೆ ಒಳ್ಳೆಯ ಮೊತ್ತವನ್ನೇ ಬಹುಮಾನವಾಗಿ ನೀಡಲಾಯ್ತು
https://www.newsics.com/2026/01/19/two-high-speed-trains-collide-21-dead/