Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಟೆಕ್ಕಿ ಯುವತಿಗೆ ₹1.75 ಕೋಟಿ ವಂಚಿಸಿದ ಕಿರಾತಕ ಕುಟುಂಬ!; ಸತ್ಯ ಬಯಲಾಗಿದ್ದು ಹೇಗೆ?
ಕರ್ನಾಟಕಪ್ರಮುಖ

ಟೆಕ್ಕಿ ಯುವತಿಗೆ ₹1.75 ಕೋಟಿ ವಂಚಿಸಿದ ಕಿರಾತಕ ಕುಟುಂಬ!; ಸತ್ಯ ಬಯಲಾಗಿದ್ದು ಹೇಗೆ?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮ್ಯಾಟ್ರಿಮೋನಿ ಸೈಟ್‌ಗಳ ಮೂಲಕ ಪರಿಚಯವಾಗಿ, ಕೋಟಿ ಕೋಟಿ ಆಸ್ತಿಯ ಆಮಿಷವೊಡ್ಡಿ, ಮದುವೆಯಾಗುವುದಾಗಿ ನಂಬಿಸಿ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಗೆ ಬರೋಬ್ಬರಿ 1.75 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಈ ಪ್ರಕರಣದಲ್ಲಿ ಕೇವಲ ಒಬ್ಬ ವ್ಯಕ್ತಿಯಲ್ಲದೆ, ಆತನ ಇಡೀ ಕುಟುಂಬವೇ ಸೇರಿ ವಂಚನೆಗೆ ಸ್ಕೆಚ್ ಹಾಕಿರುವ ಆಘಾತಕಾರಿ ಸತ್ಯ ಬಯಲಾಗಿದೆ.
ವೈಟ್‌ಫೀಲ್ಡ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಗೆ 2024ರ ಮಾರ್ಚ್‌ನಲ್ಲಿ ಮ್ಯಾಟ್ರಿಮೋನಿ ಸೈಟ್ ಮೂಲಕ ವಿಜಯ್ ರಾಜ್ ಗೌಡ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ತಾನು ದೊಡ್ಡ ಉದ್ಯಮಿ, ಸುಮಾರು 715 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ನಂಬಿಸಿದ್ದ ವಿಜಯ್, ಯುವತಿಯ ಮನ ಗೆದ್ದಿದ್ದ. ಅಲ್ಲದೆ ತನ್ನ ತಂದೆ ಬೋರೆಗೌಡ ಅವರನ್ನು ‘ನಿವೃತ್ತ ತಹಶೀಲ್ದಾರ್’ ಎಂದು ಸುಳ್ಳು ಹೇಳಿ ಪರಿಚಯ ಮಾಡಿಕೊಟ್ಟಿದ್ದ.
ಅಲ್ಲದೇ, ವಿಜಯ್ ರಾಜ್ ಗೌಡ ಎಂಬಾತನಿಗೆ ಈಗಾಗಲೇ ಮದುವೆಯಾಗಿ ಒಂದು ಮಗುವೂ ಇತ್ತು. ಆದರೆ ಯುವತಿಯನ್ನು ನಂಬಿಸಲು ತನ್ನ ಸ್ವಂತ ಪತ್ನಿ ಸೌಮ್ಯಳನ್ನೇ ‘ಅಕ್ಕ’ ಎಂದು ಪರಿಚಯಿಸಿದ್ದ! ಕೆಂಗೇರಿ ಬಳಿ ಯುವತಿಯನ್ನು ಕರೆಸಿಕೊಂಡಿದ್ದ ಈ ಕುಟುಂಬ, ತಾವೆಲ್ಲರೂ ಸೇರಿ ಮದುವೆಯ ಮಾತುಕತೆ ನಡೆಸುವ ನಾಟಕವಾಡಿದ್ದರು. ಈ ವೇಳೆ ವಿಜಯ್ ತಂದೆ ಬೋರೆಗೌಡ, “ನಿಮ್ಮ ಹಣಕ್ಕೆ ನಾನೇ ಗ್ಯಾರೆಂಟಿ” ಎಂದು ಅಭಯ ನೀಡಿದ್ದರು.
ಬಹಳ ದಿನ ಕಳೆದರೂ ಹಣ ವಾಪಸ್ ನೀಡದಿದ್ದಾಗ ಯುವತಿ ಒತ್ತಾಯ ಮಾಡಲಾರಂಭಿಸಿದ್ದಳು. ಆಗ ವಿಜಯ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಇದೆ ಎಂದು ಕಾಲಹರಣ ಮಾಡಿದ್ದ. ಒತ್ತಡ ಹೆಚ್ಚಾದಾಗ ಕೇವಲ 22 ಲಕ್ಷ ರೂ. ವಾಪಸ್ ನೀಡಿ, ಉಳಿದ ಹಣ ಕೇಳಿದರೆ ಜೀವ ಬೆದರಿಕೆ ಹಾಕಲಾರಂಭಿಸಿದ್ದ. ಇದರಿಂದ ಅನುಮಾನಗೊಂಡ ಯುವತಿ ವಿಜಯ್‌ನ ಹಿನ್ನೆಲೆ ತಲಾಷ್ ನಡೆಸಿದ್ದಾಳೆ. ಈ ವೇಳೆ ಆತನಿಗೆ ಈಗಾಗಲೇ ಮದುವೆಯಾಗಿರುವುದು ಮತ್ತು ಆತ ಪರಿಚಯಿಸಿದ ‘ಅಕ್ಕ’ ಎಂಬ ಮಹಿಳೆ ಆತನ ಹೆಂಡತಿ ಎಂಬ ಸತ್ಯ ಗೊತ್ತಾಗಿ ಆಘಾತಕ್ಕೊಳಗಾಗಿದ್ದಾರೆ.
ಮೋಸ ಹೋದ ಯುವತಿ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ವಿಜಯ್ ರಾಜ್ ಗೌಡ, ಬೋರೆಗೌಡ ಮತ್ತು ಸೌಮ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆ ನಡೆದ ಸ್ಥಳ ಕೆಂಗೇರಿ ವ್ಯಾಪ್ತಿಯಲ್ಲಿ ಬರುವುದರಿಂದ ಪ್ರಕರಣವನ್ನು ಕೆಂಗೇರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಹಂತ ಹಂತವಾಗಿ ನಡೆದ ಲೂಟಿ

  • ಒಮ್ಮೆ ಯುವತಿಯ ನಂಬಿಕೆ ಗಳಿಸಿದ ನಂತರ ವಿಜಯ್ ತನ್ನ ಅಸಲಿ ಆಟ ಶುರು ಮಾಡಿದ್ದ.
  • ಮೊದಲಿಗೆ ತನ್ನ ಆಸ್ತಿ ವಿಚಾರವಾಗಿ ಇಡಿ (ED) ಕೇಸ್ ದಾಖಲಾಗಿದೆ, ಬ್ಯಾಂಕ್ ಅಕೌಂಟ್ ಫ್ರೀಜ್ ಆಗಿದೆ ಎಂದು ನಂಬಿಸಲು ನಕಲಿ ಕೋರ್ಟ್ ದಾಖಲೆಗಳನ್ನು ತೋರಿಸಿದ್ದ.
  • ತುರ್ತು ಅಗತ್ಯವಿದೆ ಎಂದು ಹೇಳಿ ಮೊದಲು 15 ಸಾವಿರ ರೂ. ಪಡೆದಿದ್ದ.
  • ನಂತರ ‘ಒಟ್ಟಿಗೆ ಬ್ಯುಸಿನೆಸ್ ಮಾಡೋಣ’ ಎಂದು ಯುವತಿಯ ಹೆಸರಿನಲ್ಲಿ ವಿವಿಧ ಬ್ಯಾಂಕುಗಳಿಂದ ಲೋನ್ ಮಾಡಿಸಿದ್ದ.
  • ಯುವತಿ ಮಾತ್ರವಲ್ಲದೆ, ಆಕೆಯ ಸ್ನೇಹಿತರು ಮತ್ತು ಸಂಬಂಧಿಕರಿಗೂ ಬ್ಯುಸಿನೆಸ್ ಲಾಭದ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ಸಾಲ ಕೊಡಿಸಿದ್ದ. ಹೀಗೆ ಹಂತ ಹಂತವಾಗಿ ಬರೋಬ್ಬರಿ 1.75 ಕೋಟಿ ರೂಪಾಯಿಯನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

TAGGED:A family of thieves who cheated a young techie of ₹1.75 crore!; How did the truth come to light?
Share This Article
Facebook Twitter Copy Link Print
Previous Article ಬಿಗ್ ಬಾಸ್ ಕನ್ನಡ ಸೀಸನ್ 12ರ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?
Next Article ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಬೃಹತ್ ಹಾವು ಪ್ರತ್ಯಕ್ಷ; ಇನ್ನೊಂದಡೆ ಶಿವಲಿಂಗು ಪತ್ತೆ

Popular Posts

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read

Uttarakannada Trauma Center | ಕುಮಟಾದಲ್ಲಿ ಜಿಲ್ಲೆಯ ಮೊದಲ ಅತ್ಯಾಧುನಿಕ ಟ್ರಾಮಾ ಕೇರ್ ಸೆಂಟರ್ ಆರಂಭ

3 Min Read

You Might Also Like

ದೇಶಪ್ರಮುಖ

Indian Navy Upgrade | INS ಮಾಲ್ವನ್ ನಾಳೆ ಭಾರತೀಯ ನೌಕಾಪಡೆಗೆ ಸೇರ್ಪಡೆ: ಸಮುದ್ರ ಭದ್ರತೆಗೆ ಮತ್ತೊಂದು ಸ್ವದೇಶಿ ಶಕ್ತಿ

2 Min Read
ಕರ್ನಾಟಕಮನರಂಜನೆ

Toxic New Song | ಯಶ್–ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ಹಾಡು ಬಿಡುಗಡೆ

1 Min Read
ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read
ಕರ್ನಾಟಕಪ್ರಮುಖ

Karnataka Cabinet Expension| ಕಾಂಗ್ರೆಸ್ ಕಲಿಗಳು ಮತ್ತೆ ದೆಹಲಿಗೆ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ ತೀವ್ರ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?