Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್‌ಗೆ 2026ರ ಆರಂಭದಲ್ಲೇ ಅದೃಷ್ಟ ಒಲಿದು ಬಂದಿದೆ. ಒಂದೇ ದಿನ ಎರಡು ಸಿನಿಮಾಗಳು ರಿಲೀಸ್ ಆಗುತ್ತಿವೆ. ದುನಿಯಾ ವಿಜಯ್ ನಟನೆಯ ‘ಲ್ಯಾಂಡ್‌ಲಾರ್ಡ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದೇ ಇನ್ನೊಂದು ಕಡೆ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಎರಡೂ ಸಿನಿಮಾಗಳ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
‘ಕಲ್ಟ್’ ಸಿನಿಮಾದ ಪ್ರಚಾರದ ವೇಳೆ ಬಾಡಿ ಶೆಮಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ ರಚಿತಾ, ಎಲ್ಲಾ ಹೆಣ್ಣು ಮಕ್ಕಳ ಬಾಡಿ ಟೈಪ್ ಒಂದೊಂದು ತರ ಇರುತ್ತೆ. ಡಯೆಟ್ ಮಾಡಿದರೂ ದಪ್ಪ ಆಗುತ್ತಾರೆ. ಕೆಲವರಿಗೆ ಪಿಸಿಒಡಿ ಹಾಗೂ ಪಿಸಿಒಸಿ ಸಮಸ್ಯೆ ಇರುತ್ತೆ. ಕೆಲವರು ಮಾನಸಿಕ ಒತ್ತಡದಿಂದಲೂ ದಪ್ಪ ಆಗುತ್ತಾರೆ. ಅವರವರ ಬಾಡಿ ಟೈಪ್ ಅವರಿಗೆ ಮಾತ್ರ ಗೊತ್ತಿರುತ್ತೆ. ಎಲ್ಲರೂ ವರ್ಕ್ಔಟ್ ಮಾಡುತ್ತೇವೆ. ಎಲ್ಲರೂ ಡಯೆಟ್ ಮಾಡುತ್ತೇವೆ. ಎಂದಿದ್ದಾರೆ
“ಇಷ್ಟು ಓಪನ್ ಆಗಿ ಮಾತಾಡುತ್ತಿದ್ದೇವೆ ಅಂದಾಗ, ಮುಟ್ಟಾಗುವುದಕ್ಕೂ ಐದು ದಿನ ಮುನ್ನ ಬಾಡಿ ಕೋಲ್ಡ್ ಆಗುತ್ತೆ. ಮುಟ್ಟು ಮುಗಿದ ಐದು ದಿನಗಳು ಆದ್ಮೇಲೆ ನಾವು ಕುಗ್ಗಿ ಹೋಗುತ್ತೇವೆ. ಎಲ್ಲಾ ಗಂಡು ಮಕ್ಕಳಿಗೂ ನಾವು ನಾನು ಹೀಗಿದ್ದೇನೆ ಎಂದು ಮೆಚ್ಚಿಸುವುದಕ್ಕೆ ಆಗುವುದಿಲ್ಲ. ನಮ್ಮ ಬಾಡಿ.. ನಮ್ಮ ಇಷ್ಟ.. ನಮ್ಮ ಲೈಫ್ ಎಂದಿದ್ದಾರೆ.
“ನಮ್ಮ ದೇಹವನ್ನು ನಾವು ಪೂಜಿಸಬೇಕು. ಇದು ನಮ್ಮ ದೇಹ. ನಾವು ಯಾಕೆ ಬೇರೆಯವರಿಗೋಸ್ಕರ ಖಿನ್ನತೆಗೆ ಒಳಗಾಗಬೇಕು. ನನಗೆ ಏನು ಬೇಕು ಅಂತ ನನಗೆ ಗೊತ್ತಿದೆ. ನಾನು ಹೇಗೆ ವರ್ಕ್‌ಔಟ್ ಮಾಡಬೇಕು. ಇನ್ನೊಂದು ಗೊತ್ತಾ ಕೆಲವರು ಐದು ಗಂಟೆ ನಿದ್ದೆ ಮಾಡಿದರೆ ದಪ್ಪ ಆಗುತ್ತಾರೆ. ಅವರಿಗೆ ಎಂಟು ಗಂಟೆ ನಿದ್ದೆ ಮಾಡಲೇ ಬೇಕಾಗುತ್ತೆ. ನನಗೆ ಏಳರಿಂದ ಎಂಟು ಗಂಟೆ ನಿದ್ದೆ ಮಾಡಲೇಬೇಕು. ಇಲ್ಲಾ ಅಂದರೆ, ನಾನು ದಪ್ಪಗೆ ಕಾಣುತ್ತೇನೆ.” ಎಂದು ರಚಿತಾ ರಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಿಚ್ಚನ ಬೆನ್ನುಬಿಡದ ವಿವಾದ; ಫಿನಾಲೆಯಲ್ಲಿ ಸ್ಪಷ್ಟನೆ ಕೊಡ್ತಾರಾ ಸುದೀಪ್?