Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಾರ್ತಿಕ್ ಆರ್ಯನ್ ಅಭಿನಯದ ಹೊಸ ಸಿನಿಮಾ ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಸೋತಿದೆ. ಈ ಸಿನಿಮಾಗೆ ಬಂಡವಾಳ ಹೂಡಿದ ಕರಣ್ ಜೋಹರ್ ಅವರಿಗೆ ಬಹುಕೋಟಿ ರೂಪಾಯಿ ನಷ್ಟ ಆಗಿದೆ. ಆದ್ದರಿಂದ ಕಾರ್ತಿಕ್ ಆರ್ಯನ್ 15 ಕೋಟಿ ರೂಪಾಯಿ ಸಂಬಳ ಬಿಟ್ಟುಕೊಟ್ಟಿದ್ದಾರೆ.
ಧರ್ಮ ಪ್ರೊಡಕ್ಷನ್ಸ್’ ಮೂಲಕ ಕರಣ್ ಜೋಹರ್ ಅವರು ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಸಿನಿಮಾ 2025ರ ಡಿಸೆಂಬರ್ನಲ್ಲಿ ಬಿಡುಗಡೆಯಗಿತ್ತು.ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಮಾಡಲಿಲ್ಲ.
ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಅನನ್ಯಾ ಪಾಂಡೆ ಜೊತೆಯಲ್ಲಿ ನೀನಾ ಗುಪ್ತಾ, ಜಾಕಿ ಶ್ರಾಫ್ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ಈ ಸಿನಿಮಾ ಅಂದಾಜು 90 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಆಗಿತ್ತು. ಆದರೆ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಗಳಿಸಿದ್ದು 30 ಕೋಟಿ ರೂಪಾಯಿ ಮಾತ್ರ. ಇದರಿಂದಾಗಿ ನಿರ್ಮಾಪಕ ಕರಣ್ ಜೋಹರ್ ಅವರು ನಷ್ಟ ಅನುಭವಿಸಿದ್ದಾರೆ. ಹೀಗಾಗಿ ನಿರ್ಮಾಪಕರ ನಷ್ಟ ಕಡಿಮೆ ಮಾಡಲು ಕಾರ್ತಿಕ್ ಆರ್ಯನ್ ಅವರು 15 ಕೋಟಿ ರೂಪಾಯಿ ಸಂಭಾವನೆ ಬಿಟ್ಟುಕೊಟ್ಟಿದ್ದಾರೆ ಎಂದು ವರದಿ ಆಗಿದೆ.