Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಟೆಹ್ರಾನ್: ಇರಾನ್ ಸರ್ಕಾರದ ವಿರುದ್ದ ಜನಾಕ್ರೋಶ ಭುಗಿಲೆದಿದ್ದು, ಪ್ರತಿಭಟನೆ ಹತ್ತಿಕ್ಕಲು ಇರಾನ್ ಸರ್ಕಾರ ದೇಶದಾದ್ಯಂತ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲು ಉದ್ವಿಗ್ನತೆ ತಣ್ಣಗಾಗಿಲ್ಲ. ಈ ಪ್ರತಿಭಟನೆಯಲ್ಲಿ ಇಲ್ಲಿಯವರೆಗೂ 12 ಸಾವಿರ ಮಂದಿ ಸಾವು ಕಂಡಿದ್ದಾರೆ ಎಂದು ವರದಿಯಾಗಿದೆ.
ಅದರೆ, ಇದನ್ನು ಇರಾನ್ ನಿರಾಕರಿಸಿದೆ. ಹಾಗೇನಾದರೂ ಈ ವಿಚಾರ ನಿಜವೇ ಆಗಿದ್ದಲ್ಲಿ ಆಧುನಿಕ ಜಗತ್ತಿನ ಅತಿದೊಡ್ಡ ನರಮೇಧಕ್ಕೆ ಮಧ್ಯಪ್ರಾಚ್ಯದ ದೇಶ ಸಾಕ್ಷಿಯಾಗಲಿದೆ. ಈಗಾಗಲೇ ಇರಾನ್ ಸರ್ಕಾರದ ವರ್ತನೆಗೆ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ.
ಇರಾನ್‌ನ ಆಧುನಿಕ ಇತಿಹಾಸದಲ್ಲಿ ಇದು ಅತ್ಯಂತ ಭೀಕರ ಹತ್ಯಾಕಾಂಡ ಎಂದು ಬ್ರಿಟಿಷ್ ವೆಬ್‌ಸೈಟ್ ಬಣ್ಣಿಸಿದೆ, ಆದರೆ ರಾಯಿಟರ್ಸ್ ಸುದ್ದಿ ಸಂಸ್ಥೆ ಇರಾನಿನ ಅಧಿಕಾರಿಗಳನ್ನು ಉಲ್ಲೇಖಿಸಿ ಸಾವಿನ ಸಂಖ್ಯೆ 2,000 ಎಂದು ಹೇಳಿದೆ.
ಈ ಮಾಹಿತಿಯು ಬಹು ಮೂಲಗಳನ್ನು ಆಧರಿಸಿದೆ ಎಂದು ವೆಬ್‌ಸೈಟ್ ಹೇಳಿದೆ. ಡೇಟಾವನ್ನು ಬಹು ಹಂತಗಳಲ್ಲಿ ಪರಿಶೀಲಿಸಲಾಗಿದೆ ಮತ್ತು ಕಟ್ಟುನಿಟ್ಟಾದ ವೃತ್ತಿಪರ ಮಾನದಂಡಗಳ ಪ್ರಕಾರ ಪರಿಶೀಲಿಸಿದ ನಂತರವೇ ಬಿಡುಗಡೆ ಮಾಡಲಾಗಿದೆ. ಬಲಿಯಾದವರಲ್ಲಿ ಹೆಚ್ಚಿನವರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದಿದೆ.
ಇದರ ನಡುವೆ, ಭಾರತಕ್ಕೆ ಭೇಟಿ ನೀಡಿದ್ದ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಮಂಗಳವಾರ, ಇರಾನ್‌ನಲ್ಲಿ ಸರ್ಕಾರದ ಆಟ ಮುಗಿದಿದೆ ಎಂದು ಹೇಳಿದರು.