Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ತೆಲುಗು ಚಿತ್ರರಂಗದ ಯುವ ಸ್ಟಾರ್ ನಟ ವಿಜಯ್ ದೇವರಕೊಂಡ ಅವರು ಚಿತ್ರರಂಗಕ್ಕೆ ಮಾರಕವಾಗಿ ಪರಿಣಮಿಸಿರುವ ಒಂದು ದೊಡ್ಡ ಸಮಸ್ಯೆ ಬಗ್ಗೆ ಮಾತನ್ನಾಡಿದ್ದಾರೆ. ಅವರದೇ ದೃಷ್ಟಿಕೋನದಲ್ಲಿ ಈ ಬಗ್ಗೆ ಹೇಳಿರುವ ನಟ ವಿಜಯ್ ದೇವರಕೊಂಡ ಅವರು ಹೀಗೆ ಹೇಳಿದ್ದಾರೆ. ‘ಸಿನಿಮಾ ರಂಗಕ್ಕೆ ದೊಡ್ಡ ಸಮಸ್ಯೆಯಾಗಿ ನಕಲಿ ವಿಮರ್ಶೆಗಳು ಬೆಳೆಯುತ್ತಿವೆ. ಈ ಬಗ್ಗೆ ನನಗಂತೂ ಗಂಭೀರ ಆತಂಕ ಇದೆ. ಕಥೆ, ನಿರ್ದೇಶನ, ನಟನೆ ಸೇರಿದಂತೆ ಎಲ್ಲ ಅಂಶಗಳು ಉತ್ತಮವಾಗಿದ್ದರೂ, ಕೆಲವರು ಸಾಮಾಜಿಕ ಮಾಧ್ಯಮಗಳ ಮೂಲಕ ನಕಲಿ ವಿಮರ್ಶೆಗಳನ್ನು ಹರಡಿ ಸಿನಿಮಾಗೆ ಹಿನ್ನಡೆ ಮಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿವೆ’ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ದೀರ್ಘವಾಗಿ ಪ್ರತಿಕ್ರಿಯಿಸಿರುವ ವಿಜಯ್ ದೇವರಕೊಂಡ, ‘ಇತ್ತೀಚೆಗೆ ನಕಲಿ ರಿವ್ಯೂಗಳ ವಿರುದ್ಧ ಆದೇಶ ಹೊರಬಂದಿರುವುದು ಸಂತೋಷದ ವಿಷಯವಾದರೂ, ಅದೇ ಸಂದರ್ಭದಲ್ಲಿ ಅದು ನೊವನ್ನೂ ಕೂಡ ಹೊತ್ತು ತಂದಿದೆ’ ಎಂದಿದ್ದಾರೆ.
ಬುಕ್ ಮೈ ಶೋನಲ್ಲಿ ಈ ಬದಲಾವಣೆಯನ್ನು ನೋಡುವುದು ಒಂದೇ ಸಮಯದಲ್ಲಿ ಸಂತೋಷ ಹಾಗೂ ದುಃಖವೂ ಎರಡನ್ನೂ ತರುತ್ತವೆ’ ಎಂದಿದ್ದಾರೆ. ಈ ಕ್ರಮದಿಂದ ಅನೇಕ ಜನರು ತಮ್ಮ ಕನಸುಗಳು, ಶ್ರಮ ಮತ್ತು ಹಣವನ್ನು ಉಳಿಸಿಕೊಳ್ಳಲು ಅಸಾಧ್ಯವಾಗುತ್ತಿದೆ. ಆದರೆ ದುಃಖಕರವೆಂದರೆ ನಮ್ಮದೇ ಜನರು ಇಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ” ಎಂದು ವಿಜಯ್ ಹೇಳಿದ್ದಾರೆ.
‘ಡಿಯರ್ ಕಾಮೈಡ್’ ಚಿತ್ರವು ಬಿಡುಗಡೆಯಾದ ಸಮಯವನ್ನು ನೆನಪಿಸಿಕೊಂಡ ವಿಜಯ್ ದೇವರಕೊಂಡ ಅವರು ‘ಸಂಘಟಿತ ರಾಜಕೀಯದ ದಾಳಿಗಳನ್ನು ಕಂಡು ನಾನು ನಿಜವಾಗಿಯೂ ಅಂದು ಆಘಾತಕ್ಕೊಳಗಾಗಿದ್ದೆ.. ನಾನು ಮಾತನಾಡಿದಾಗಲೆಲ್ಲಾ ಕಿವುಡ ವ್ಯಕ್ತಿಯ ಮುಂದೆ ಶಂಖ ಊದಿದಂತಾಗಿತ್ತು. ಒಳ್ಳೆಯ ಸಿನಿಮಾವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಕೆಲವರು ನನಗೆ ಧೈರ್ಯ ನೀಡಿದರು. ಜೊತೆಗೆ, ನನ್ನೊಂದಿಗೆ ಕೆಲಸ ಮಾಡಿದ ನಿರ್ದೇಶಕರು ಹಾಗೂ ನಿರ್ಮಾಪಕರು ಈ ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದರು” ಎಂದು ಹೇಳಿದ್ದಾರೆ.
ಕೆಟ್ಟ ಕ್ಷಣಗಳು ಇನ್ನೂ ಮರೆತಿಲ್ಲ
ಆದರೆ ಅಂದು ಅನುಭವಿಸಿದ ಕೆಟ್ಟ ಕ್ಷಣಗಳು ಇನ್ನೂ ಮರೆತುಹೋಗಿಲ್ಲ. “ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಯೋಚಿಸುತ್ತಾ ಅನೇಕ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ನನ್ನ ಕನಸುಗಳನ್ನು ಉಳಿಸಿಕೊಳ್ಳಲು ನಾನು ಹೇಗೆಲ್ಲಾ ಹೋರಾಡಬೇಕು ಎಂದು ಯೋಚಿಸಿದೆ. ಇಷ್ಟು ವರ್ಷಗಳ ಬಳಿಕ ಈ ವಿಚಾರ ಬಹಿರಂಗ ಚರ್ಚೆಗೆ ಬಂದಿರುವುದು ನಿಜವಾಗಿಯೂ ಸಂತೋಷದ ಸಂಗತಿ. ಚಿರಂಜೀವಿಯಂತಹ ದೊಡ್ಡ ನಟರ ಚಿತ್ರಕ್ಕೂ ಇಂತಹ ಬೆದರಿಕೆ ಇದೆ ಎಂದು ನ್ಯಾಯಾಲಯ ಗುರುತಿಸಿರುವುದು ಧೈರ್ಯ ನೀಡಿದೆ” ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.
ನೀವು ಇಲ್ಲಿ ಹುಟ್ಟುವುದು ಬೇಡ, ನಮ್ಮ ಭಾಗವನ್ನು ಮೈಸೂರಿನಂತೆ ಮಾಡಿ’: ಡಿಕೆಶಿಗೆ ಮಲ್ಲಿಕಾರ್ಜುನ ಖರ್ಗೆ ಟಾಂಗ್