Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಮನೆಯಲ್ಲಿ ನನ್ ಗಂಡ ಬೆತ್ತಲೆಯಾಗಿ ಓಡಾಡ್ತಾನೆ ಎಂದು ಆರೋಪ ಮಾಡಿ ದೂರು ಕೊಟ್ಟ ಮಹಿಳೆ ವಿರುದ್ಧ ಇದೀಗ ಪತಿಯೇ ಪ್ರತಿದೂರು ದಾಖಲಿಸಿದ್ದಾರೆ. ಒಂದಲ್ಲ, ಎರಡಲ್ಲ ಮೂರು ಮದುವೆಯಾದ ಮಹಿಳೆ ವಿರುದ್ಧ ಮಂಜುನಾಥ್ ಆರೋಪಗಳ ಸುರಿಮಳೆಗೈದಿದ್ದಾರೆ.
ಈಕೆ 3 ಮದುವೆ ಮಾಡಿಕೊಂಡು ಎಲ್ಲರ ಬಳಿ ಹಣ ಕಿತ್ತು ವಂಚನೆ ಮಾಡಿದ್ದಾಳೆ ಎಂದು ಮಂಜುನಾಥ್ ಆರೋಪ ಮಾಡಿದ್ದಾರೆ.
ಶೋಕಿಗಾಗಿ ಗಂಡಂದಿರ ಹಣ ಬಳಸಿಕೊಂಡು ಹೀಗೆಲ್ಲಾ ಮಾಡ್ತಿದ್ದಾಳೆ ಎಂದು ಮಂಜುನಾಥ್ ಆರೋಪ ಮಾಡ್ತಿದ್ದಾರೆ. ಮಾಧ್ಯಮಗಳ ಜೊತೆ ಮಾತಾಡಿದ ಮಂಜುನಾಥ್, ಎರಡನೇ ಗಂಡನ ಜೊತೆ ಜಾಲಿ ಜಾಲಿ ಟ್ರಿಪ್ ಹೋಗಿದ್ಲು, ಶೋಕಿಗೆ ಆತನ ಚಿನ್ನಾಭರಣ ಬಳಸಿ ಅವನಿಗೂ ಕೈ ಕೊಟ್ಟಿದ್ದಳು. ಈಗ ನನಗೂ ಮೋಸವಾಗಿದೆ ಎಂದಿದ್ದಾರೆ.
ನಾವು ಮದುವೆಯೇ ಆಗಿಲ್ಲ ಅಂತಿರೋ ಮಂಜುನಾಥ್, ಹಾರ ಹಾಕಿ ಮದುವೆ ಎಂದು ಸುಳ್ಳು ಹೇಳ್ತಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಮೂರನೇ ಮದುವೆ ಆಗದೆ ಗಂಡ ಅಂತ ಹೇಳಿ ವಂಚಿಸಿದ್ದಾಳೆ. ನನ್ನ ಬಳಿ 30 ಲಕ್ಷ ಹಣ, 50 ಗ್ರಾಂ ಚಿನ್ನ, ಐಪೋನ್, ಐಪ್ಯಾಡ್, ಟ್ಯಾಬ್ ಪಡೆದಿರೋ ಆರೋಪ.
ಈಗಾಗಲೇ ಈಕೆ ಮೊದಲ ಗಂಡನ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದಳು. ಎರಡನೇ ಗಂಡನ ವಿರುದ್ದ ಕೂಡ ದೂರು ಕೊಟ್ಟಿದ್ದಾಳೆ. ಇತ್ತೀಚೆಗೆ ಮೂರನೇ ಗಂಡ ಎಂದು ಹೇಳಿಕೊಂಡು ಮಂಜುನಾಥ್ ವಿರುದ್ದ ಕೂಡ ದೂರು ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಇದೀಗ ದೂರು ಕೊಟ್ಟ ಮಹಿಳೆ ವಿರುದ್ಧ ಮಂಜುನಾಥ್ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಆಕೆ ಅಸಲಿ ಮುಖವಾಡವನ್ನ ಪೊಲೀಸರ ಮುಂದೆ ಬಯಲು ಮಾಡ್ತೀನಿ. ಕೇವಲ ದೇವಾಸ್ಥಾನದಲ್ಲಿ ಹಾರ ಬದಲಿಸಿಕೊಂಡು ಗಂಡ ಎಂದು ಆರೋಪಿಸಿ ದೂರು ನೀಡಿದ್ದಾಳೆ. ಹಾರ ಬದಲಿಸಿಕೊಂಡ ಬಳಿಕ 12 ಲಕ್ಷ ಹಣ ನೀಡಿ ಮನೆ ಲೀಸ್ಗೆಂದು ಕೊಡಿಸಿದ್ದೆ ಎಂದು ಮಂಜುನಾಥ್ ಹೇಳಿದ್ದಾರೆ.
ನಾನು ಮನೆಗೆ ಬಂದಾಗ ಬಟ್ಟೆ ಬದಲಿಸುವ ವೇಳೆ ಕದ್ದು ಫೋಟೋ ತೆಗೆದು ಬೇರೆ ರೀತಿ ಬಳಸಿದ ಆರೋಪ ಕೇಳಿ ಬಂದಿದೆ. ಸ್ನಾನ ಮಾಡುವಾಗಲೂ ಬೆತ್ತಲಾಗಿರುವ ಫೋಟೋವನ್ನ ಆಕೆಯೇ ಕದ್ದು ತೆಗೆದಿದ್ದಾಳೆ. ಅದೇ ಫೋಟೋಗಳನ್ನ ಇಟ್ಟುಕೊಂಡು ಹಣಕ್ಕೊಸ್ಕರ ಬ್ಲಾಕ್ ಮೇಲ್ ಮಾಡಿದ್ದಾಳೆ ಎಂದು ಮಂಜುನಾಥ್ ಆರೋಪ ಮಾಡಿದ್ದಾರೆ.
ಮಂಜುನಾಥ್ ಮಾಡಿದ ಪ್ರತ್ಯಾರೋಪದ ಬಗ್ಗೆ ಮಹಿಳೆ ಪ್ರತಿಕ್ರಿಯಿಸಿದ್ದು, ಆತ ಮಾಡಿದ ಆರೋಪಗಳೆಲ್ಲಾ ಸುಳ್ಳು ಎಂದಿದ್ದಾರೆ. ನನಗೆ ಎರಡು ಮದುವೆಯಾಗಿ ಡಿವೋರ್ಸ್ ಆಗಿರೋದು ಕೂಡ ನಿಜ. ಮಂಜುನಾಥ್ ನನ್ನ ಬಗ್ಗೆ ಸುಳ್ಳು ಆರೋಪಗಳನ್ನ ಮಾಡೋದನ್ನ ಮುಂದುವರೆಸಿದ್ರೆ ಮುಂದಿನ ಕ್ರಮ ತೆಗೆದುಕೊಳ್ತೀನಿ..
ಆತನ ಹೆಸರು ಬರೆದಿಟ್ಟು ಮುಂದೆ ಏನ್ ಮಾಡ್ಬೇಕೋ ಯೋಚನೆ. ಮಾಡ್ತೀನಿ. ನನ್ನ ಚೀಟಿ ಹಣ ಐದು ಲಕ್ಷ ಹಣ ಪಡೆದಿದ್ದಾನೆ ಎಂದು ಮಹಿಳೆ ಆರೋಪ ಮಾಡಿ ವಿಡಿಯೋ ಹರಿಬಿಟ್ಟಿದ್ದಾಳೆ. ಇಬ್ಬರ ಜಗಳ ಬೀದಿಗೆ ಬಂದಿದ್ದು, ಪೊಲೀಸರ ವಿಚಾರಣೆ ಬಳಿಕ ಸತ್ಯ-ಸತ್ಯತೆ ಹೊರಬರಬೇಕಿದೆ.
ಈ ಊರಿನವರು ಹೊರಗೆ ಓಡಾಡೋಹಾಗಿಲ್ಲ; ಯಾಕೆ ಗೊತ್ತಾ?, ಜ.15ರವರೆಗೆ ನಿಷೇಧಾಜ್ಞೆ