Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಾಲ್ಕು ಮರಿ ಹುಲಿಗಳನ್ನು ಸುರಕ್ಷಿತವಾಗಿ ಸೆರೆಹಿಡಿಯುವ ಉದ್ದೇಶದಿಂದ ಅರಣ್ಯ ಇಲಾಖೆ ವ್ಯಾಪಕ ಕಾರ್ಯಾಚರಣೆ ಕೈಗೊಂಡಿರುವ ಘಟನೆ ಚಾಮರಾಜನಗರದ ನಂಜೇದೇವನಪುರ ಗ್ರಾಮದಲ್ಲಿ ನಡೆದಿದೆ.
ಮರಿ ಹುಲಿಗಳ ಸಂಚಾರದಿಂದ ಸಾರ್ವಜನಿಕರ ಸುರಕ್ಷತೆಗೆ ಯಾವುದೇ ಅಪಾಯ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಂಜೇದೇವನಪುರ, ಉಡಿಗಾಲ ಹಾಗೂ ವೀರನಪುರ ಗ್ರಾಮಗಳಲ್ಲಿ ಇಂದಿನಿಂದ ಜನವರಿ 15ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹುಲಿಗಳ ಚಲನವಲನವನ್ನು ಗಮನಿಸಲು ಡ್ರೋನ್‌ಗಳು, ಟ್ರ್ಯಾಪ್ ಕ್ಯಾಮೆರಾಗಳು ಹಾಗೂ ಪರಿಣತ ಸಿಬ್ಬಂದಿಯನ್ನು ಬಳಸಲಾಗುತ್ತಿದ್ದು, ಮರಿ ಹುಲಿಗಳಿಗೆ ಯಾವುದೇ ಹಾನಿಯಾಗದಂತೆ ಅತ್ಯಂತ ಎಚ್ಚರಿಕೆಯಿಂದ ಕಾರ್ಯಾಚರಣೆ ಮುಂದುವರಿದಿದೆ.
ಮರಿ ಹುಲಿಗಳು ಅರಣ್ಯ ಪ್ರದೇಶದ ಅಂಚಿನಲ್ಲೇ ಸಂಚರಿಸುತ್ತಿರುವುದರಿಂದ ಗ್ರಾಮಗಳ ಸುತ್ತಮುತ್ತ ಹೆಚ್ಚಿನ ನಿಗಾ ವಹಿಸಲಾಗಿದೆ. ನಿಷೇಧಾಜ್ಞೆ ಅವಧಿಯಲ್ಲಿ ಸಾರ್ವಜನಿಕರು ಗುಂಪಾಗಿ ಸೇರದಂತೆ, ಅಗತ್ಯವಿಲ್ಲದೆ ಹೊರಗಾಡದಂತೆ ಹಾಗೂ ಒಬ್ಬರೇ ಸಂಚರಿಸದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಹೆಚ್ಚಿನ ಎಚ್ಚರ ವಹಿಸಬೇಕೆಂದು ಮನವಿ ಮಾಡಲಾಗಿದೆ.
ಗ್ರಾಮಸ್ಥರು ತಮ್ಮ ಪಶುಗಳನ್ನು ರಾತ್ರಿ ಸಮಯದಲ್ಲಿ ಹೊರಬಿಡದಂತೆ ಹಾಗೂ ಅರಣ್ಯ ಪ್ರದೇಶದತ್ತ ತೆರಳದಂತೆ ಕಟ್ಟುನಿಟ್ಟಿನ ಸಲಹೆ ನೀಡಲಾಗಿದೆ. ಕಾರ್ಯಾಚರಣೆ ಸುಗಮವಾಗಿ ನಡೆಯಲು ಪೊಲೀಸ್ ಇಲಾಖೆ ಹಾಗೂ ಗ್ರಾಮ ಆಡಳಿತದ ಸಹಕಾರ ಪಡೆಯಲಾಗಿದ್ದು, ಗ್ರಾಮಗಳ ಪ್ರವೇಶ ಮಾರ್ಗಗಳಲ್ಲಿ ತಾತ್ಕಾಲಿಕ ತಪಾಸಣಾ ತಾಣಗಳನ್ನು ಸ್ಥಾಪಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರಂತರ ಪೆಟ್ರೋಲಿಂಗ್ ನಡೆಸಲಾಗುತ್ತಿದೆ.
ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ?; ಕೃತ್ಯವೆಸಗಿ ಬಿಸಾಕಿ ಹೋದ ದುಷ್ಟರು