Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಅಮೆರಿಕವು ವೆನಿಜುವೆಲಾ ದೇಶದ ವಿರುದ್ಧ ದೊಡ್ಡ ಪ್ರಮಾಣದ ದಾಳಿಯನ್ನು ಯಶಸ್ವಿಯಾಗಿ ನಡೆಸಿದೆ. ಇದರ ಬೆನ್ನಲೇ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇನ್ನು ಮುಂದೆ ವೆನೆಜುವೆಲಾವನ್ನು ಅಮೆರಿಕ ಆಳ್ವಿಕೆ ಮಾಡಲಿದೆ ಎಂದು ಘೋಷಿಸಿದ್ದಾರೆ.
ದೇಶವನ್ನು ನಡೆಸುವ ಅಧಿಕಾರವನ್ನು ತಕ್ಷಣವೇ ನಾವು ಯಾರಿಗಾದರೂ ಹಸ್ತಾಂತರಿಸಲು ಸಾಧ್ಯವಿಲ್ಲ. ಹಾಗಾಗಿ, ಸದ್ಯಕ್ಕೆ, ನಾವೇ ವೆನೆಜುವೆಲಾವನ್ನು ನಡೆಸುತ್ತೇವೆ ಎಂದು ಘೋಷಿಸಿದರು. ಮುಂದುವರೆದು, ವೆನೆಜುವೆಲಾದ ತೈಲ ಉದ್ಯಮವನ್ನ ಅಮೆರಿಕ ನಡೆಸಲಿದೆ ಎಂದು ಘೋಷಿಸಿದ ಟ್ರಂಪ್, ನಮ್ಮಲ್ಲಿ ವಿಶ್ವದ ಅತಿದೊಡ್ಡ ಮತ್ತು ಅತ್ಯುತ್ತಮ ತೈಲ ಕಂಪನಿಗಳಿವೆ, ಮತ್ತು ಈಗ ನಾವು ಅಲ್ಲಿ ನೇರವಾಗಿ ಇರುತ್ತೇವೆ ಎಂದು ತಿಳಿಸಿದರು.
ಆಪರೇಷನ್ ಅಬ್ಸೊಲ್ಯೂಟ್ ರೆಸಲ್ವ್ ಎಂಬ ಸಂಕೇತನಾಮ ಹೊಂದಿದ್ದ ಈ ಕಾರ್ಯಾಚರಣೆಯು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ದಾಳಿಗಳಲ್ಲೊಂದು ಎಂದು ಹೇಳಿದರು.
https://www.newsics.com/2026/01/04/married-couple-in-a-living-relationship-cremated/