Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಳಿಗಾಲ ಬಂತೆಂದರೆ ಒಂದಷ್ಟು ಕಾಯಿಲೆಗಳು ಈ ಋತುವಿನಲ್ಲಿ ಕಾಣಸಿಕೊಳ್ಳುತ್ತವೆ. ಅದರಲ್ಲಿ ಮದ್ರಾಸ್ ಐ ವೈರಣು ರೋಗವೂ ಒಂದು. ಇದನ್ನು ಗುಲಾಬಿ ಕಣ್ಣು ಅಥವಾ ಕಂಜಕ್ಟಿವೈಟಿಸ್ ಎಂದೂ ಕರೆಯಲಾಗುತ್ತದೆ. ಈಗಾಗಲೇ ಈ ಕಾಯಿಲೆಯಿಂದ ಸಾಕಷ್ಟು ಜನರು ಬಳಲುತ್ತಿದ್ದಾರೆ. ಗಾಳಿಯಲ್ಲಿ ತೇವಾಂಶ ಕಾಣಿಸಿಕೊಂಡಾಗ ಇದರಿಂದ ಉತ್ಪತ್ತಿಯಾಗುವ ಸೂಕ್ಷ್ಮಾಣು ಗಾಳಿಯಿಂದ ಗಾಳಿಗೆ ಹರಡುತ್ತವೆ. ಇದರಿಂದ ಈ ಸಮಸ್ಯೆ ಜನರಲ್ಲಿ ಸಹ ಹರಡುತ್ತದೆ. ಈ ಬಾರಿ ರಾಜ್ಯದಲ್ಲಿ ತೀವ್ರ ಶೀತಗಾಳಿ ಹೆಚ್ಚಾಳವಾಗಿದೆ.
ಬೆಂಗಳೂರಿನಲ್ಲಿ ಶೀತಗಾಳಿ ಹೆಚ್ಚಳವಾಗಿದ್ದು, ತೇವಾಂಶದ ವಾತಾವರಣದಿಂದಾಗಿ ಚಿಕ್ಕ ಮಕ್ಕಳಿಂದ ಹಿಡಿದು ಅನೇಕರಿಗೆ ಮದ್ರಾಸ್ ಐಕಣ್ಣಿನ ಸೋಂಕು ಹೆಚ್ಚಳವಾಗಿದೆ. ಹೀಗಾಗಿ ವೈದ್ಯರು ಪೋಷಕರಿಗೆ ಮಕ್ಕಳ ಕಣ್ಣಿನ ಸೋಂಕಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಮಕ್ಕಳ ಕಣ್ಣಿನ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ಸಲಹೆ ನೀಡಿದ್ದಾರೆ. ಆರೊಗ್ಯ ಇಲಾಖೆ ಕೂಡ ಮದ್ರಾಸ್ ಐ ಬಗ್ಗೆ ಕೆಲವು ಸಲಹೆಗಳನ್ನ ನೀಡಿದೆ.
ಮದ್ರಾಸ್ ಐ ಲಕ್ಷಣಗಳು ಏನು?
ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳಿಂದ ಕಣ್ಣಿನಲ್ಲಿ ಉರಿ, ಸೋಂಕು ಉಂಟಾಗುತ್ತದೆ. ಧೂಳು, ಅಲರ್ಜಿಗಳು, ಮಾಲಿನ್ಯ ಇವುಗಳಿಂದಲೂ ಈ ಅಲರ್ಜಿ ಸಮಸ್ಯೆ ಬರಬಹುದು. ಇದು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುವ ಸೋಂಕಾಗಿದೆ.ಕಣ್ಣುಗಳು ಕೆಂಪಾಗುವುದು, ಸುಡುವಂತಾಗುವುದು. ಕಣ್ಣಿನಲ್ಲಿ ಮುರಳು, ಕಿಚ್ಚು ಹಾಗೂ ಜಲಸ್ರಾವವಾಗುವುದು.ರೆಪ್ಪೆಗಳು ಅಂಟಿಕೊಳ್ಳುವುದು (ಬೆಳಿಗ್ಗೆ ವಿಶೇಷವಾಗಿ)ಬೆಳಕಿಗೆ ನೋವು, ಕಣ್ಣು ಮಿಡಿಯುವುದು.
ಪರಿಹಾರ ಏನು?
ಗುಣಮುಖವಾಗುವವರೆಗೂ ಸಾಬೂನು ಬಳಸಿ ಕೈಗಳನ್ನು ಪದೇಪದೇ ತೊಳೆಯಿರಿ.
ಕಣ್ಣಿನ ವೈದ್ಯರು ಸೂಚಿಸಿದ ಔಷಧಿ, ಐಡ್ರಾಪ್ಸ್ ನಿಯಮಿತವಾಗಿ ಬಳಸುವುದು.
ಕಣ್ಣುಗಳನ್ನು ಸ್ವಚ್ಛವಾಗಿಡುವುದು.
ಬಳಸಿದ ಟಿಶ್ಯೂ, ಕಾಟನ್‌ನ್ನು ತಕ್ಷಣ ತ್ಯಜಿಸುವುದು.
ಸೋಂಕಿತ ವ್ಯಕ್ತಿಯಿಂದ ಸ್ವಲ್ಪ ದೂರವಿರುವುದು.
ಏನು ಮಾಡಬಾರದು?
- ಗುಣಮುಖರಾಗುವವರೆಗೂ ಸಾರ್ವಜನಿಕ ಸ್ಥಳಗಳಿಗೆ ಹೋಗದಿರಿ.
- ಕಣ್ಣಿಗೆ ವಿಶ್ರಾಂತಿ ಇಲ್ಲದೆ ಮೊಬೈಲ್ ಅಥವಾ ಟಿವಿ ವೀಕ್ಷಣೆ ಬೇಡ.
- ಅನಗತ್ಯ ಕಣ್ಣುಗಳ ಉಜ್ಜುವುದು, ಮುಟ್ಟುವುದು ಬೇಡ.
- ಸೋಂಕತರು ಬಳಸಿದ ಮೇಕಪ್, ಕಾಜಲ್, ಲೆನ್ಸ್ ಟವಲ್ ಬಳಕೆ ತಪ್ಪಿಸಿ.
- ಮನೆ ಮದ್ದು ಬೇಡ.
- ವೈದ್ಯರ ಸಲಹೆ ಇಲ್ಲದೆ ಔಷಧಿ ಬಳಸಬೇಡಿ.
https://www.newsics.com/2026/01/04/venezuela-will-now-be-ruled-by-the-us-donald-trump-declares/