Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ʼಟಾಕ್ಸಿಕ್ʼ ದಿನ ಕಳೆದಂತೆ ಹೈಪ್ ಹೆಚ್ಚಾಗಿಸುತ್ತಿದೆ.
ಈ ವರ್ಷ ತೆರೆ ಕಾಣಲಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾಗಳಲ್ಲಿ ʼಟಾಕ್ಸಿಕ್ʼ ಕೂಡ ಒಂದು. ಶೂಟಿಂಗ್ ಮುಗಿಸಿ ಪ್ರಚಾರಕ್ಕೆ ಚಾಲನೆ ನೀಡಿರುವ ಚಿತ್ರತಂಡ ಈಗಾಗಲೇ ಕಲಾವಿದರ ಫಸ್ಟ್ ಲುಕ್ ಪೋಸ್ಟರ್ಸ್ನಿಂದಲೇ ಕುತೂಹಲ ಹೆಚ್ಚಾಗಿಸಿದೆ.
ಇತ್ತೀಚೆಗೆ ಚಿತ್ರದ ಪ್ರಮುಖ ನಟಿಯರಾದ ನಯನತಾರಾ ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಅವರ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಮಾಡಿದೆ.
ಬಹುಭಾಷಾ ನಟಿ ನಯನತಾರಾ ಅವರು ʼಗಂಗಾʼ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾಟ್ ಗನ್ ಹಿಡಿದುಕೊಂಡಿರುವ ಲುಕ್ನಲ್ಲಿ ನಯನತಾರಾ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ನಡುವೆಯೇ ʼಟಾಕ್ಸಿಕ್ʼ ಚಿತ್ರದ ಶೂಟಿಂಗ್ ಸೆಟ್ವೊಂದರ ದೃಶ್ಯ ಲೀಕ್ ಆಗಿದ್ದು, ಭಾರೀ ವೈರಲ್ ಆಗಿದೆ.
ʼBolly Blinds N Gossipʼ ಎನ್ನುವ ಪೇಜ್ನಲ್ಲಿ ಈ ದೃಶ್ಯ ವೈರಲ್ ಆಗಿದೆ. ಯಶ್ , ನಯನತಾರಾ ಅವರ ಪಾತ್ರದ ದೃಶ್ಯ ಲೀಕ್ ಆಗಿದೆ.
ಇದರಲ್ಲಿ ನಯನತಾರಾ ಅವರು ಒಬ್ಬರಿಗೆ ಹ್ಯಾಂಡ್ ಶೇಕ್ ಮಾಡಿದ್ದಾರೆ. ಯಶ್ ಅವರ ಹಿಂದೆ ಬಂದಿದ್ದು, ಅವರು ಕೂಡ ಹ್ಯಾಂಡ್ ಶೇಕ್ ಮಾಡಿದ್ದಾರೆ. ಕ್ಲಬ್ವೊಂದರಲ್ಲಿ ಶೂಟ್ ಆಗಿರುವ ದೃಶ್ಯ ಇದಾಗಿದ್ದು, ಯಾರೋ ಮೊಬೈಲ್ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.
ಮಾಲಿವುಡ್ನ ಗೀತು ಮೋಹನ್ದಾಸ್ ನಿರ್ದೇಶನದ ʼಟಾಕ್ಸಿಕ್ʼ ಇದೇ ಮಾರ್ಚ್ 19ರಂದು ವರ್ಲ್ಡ್ ವೈಡ್ ರಿಲೀಸ್ ಆಗಲಿದೆ.
ಜನವರಿ 8ಕ್ಕೆ ಯಶ್ ಅವರ ಹುಟ್ಟುಹಬ್ಬವಿದ್ದು, ಈ ವೇಳೆ ಚಿತ್ರದ ಟೀಸರ್ ರಿಲೀಸ್ ಆಗುವ ಸಾಧ್ಯತೆಯಿದೆ.