Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ದಿ ರಾಜಾ ಸಾಬ್ ಸಿನಿಮಾದ ನಿರ್ದೇಶಕನ ಸಂಭಾವನೆ ಎಷ್ಟು ಕೋಟಿ?
ಪ್ರಮುಖಮನರಂಜನೆ

ದಿ ರಾಜಾ ಸಾಬ್ ಸಿನಿಮಾದ ನಿರ್ದೇಶಕನ ಸಂಭಾವನೆ ಎಷ್ಟು ಕೋಟಿ?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಪ್ರಭಾಸ್ ಭಾರತದ ಟಾಪ್ ಪ್ಯಾನ್ ಇಂಡಿಯಾ ನಟ. ಅವರ ಸಂಭಾವನೆ ನೂರು ಕೋಟಿಯನ್ನೂ ದಾಟಿದೆ. ಕೆಲ ಸಿನಿಮಾಗಳಿಗೆ 150 ಕೋಟಿ ರೂಪಾಯಿ ಸಂಭಾವನೆಯನ್ನೂ ಸಹ ಪ್ರಭಾಸ್ ಪಡೆಯುತ್ತಿದ್ದಾರೆ. ಅವರಿಗಿರುವ ಮಾರುಕಟ್ಟೆಗೆ ತಕ್ಕಂತೆ ಸಂಭಾವನೆ ನಿಗದಿ ಪಡಿಸಿಕೊಂಡಿದ್ದಾರೆ.

ಆದರೆ ಅವರಿಂದಾಗಿ ಅವರ ಸಿನಿಮಾಗಳ ತಂತ್ರಜ್ಞರ ಸಂಭಾವನೆಯೂ ಏರಿಕೆ ಆಗಿದೆ. ಇದೀಗ ಪ್ರಭಾಸ್ ‘ದಿ ರಾಜಾ ಸಾಬ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ನಿರ್ದೇಶಕನ ಸಂಭಾವನೆ ಎಷ್ಟು ಕೋಟಿ ಗೊತ್ತೆ? ಆ ಸಂಭಾವನೆ ಮೊತ್ತದಲ್ಲಿ ನಾಲ್ಕೈದು ‘ಸು ಫ್ರಂ ಸೋ’ ರೀತಿಯ ಸಿನಿಮಾ ನಿರ್ಮಾಣ ಮಾಡಿ ಬಿಡಬಹುದು.

‘ದಿ ರಾಜಾ ಸಾಬ್’ ಸಿನಿಮಾ ನಿರ್ದೇಶನ ಮಾಡಿರುವುದು ಮಾರುತಿ ಹೆಸರಿನ ನಿರ್ದೇಶಕ. ಈ ಹಿಂದೆ ಈ ನಿರ್ದೇಶಕನಿಂದ ಭಾರಿ ದೊಡ್ಡ ಹಿಟ್ ಸಿನಿಮಾಗಳು ಯಾವುವೂ ಮೂಡಿ ಬಂದಿಲ್ಲ. ತೀರಾ ಸಾಧಾರಣ ಎನ್ನಬಹುದಾದ ಕೆಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ದೊಡ್ಡ ಸ್ಟಾರ್ ನಟರುಗಳೊಟ್ಟಿಗೆ ಕೆಲಸ ಮಾಡಿದ್ದು ಸಹ ಇಲ್ಲ. ಆದರೂ ಪ್ರಭಾಸ್, ಕೇವಲ ಮಾರುತಿ ಹೇಳಿದ ಕತೆ ಇಷ್ಟವಾಗಿ ಅವರೊಟ್ಟಿಗೆ ಕೆಲಸ ಮಾಡಲು ಒಪ್ಪಿಕೊಂಡರು ಮಾತ್ರವಲ್ಲದೆ, ‘ದಿ ರಾಜಾ ಸಾಬ್’ ಸಿನಿಮಾಕ್ಕೆ ತಮ್ಮ ಜೀವನದ ಎರಡು ವರ್ಷಕ್ಕೂ ಹೆಚ್ಚು ಸಮಯ ಸಹ ನೀಡಿದ್ದಾರೆ.

‘ದಿ ರಾಜಾ ಸಾಬ್’ ಸಿನಿಮಾ ಇದೇ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರ ಕಾರ್ಯ ಚಾಲ್ತಿಯಲ್ಲಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾರುತಿ, ಈ ಸಿನಿಮಾಕ್ಕೆ ತಾವು ಪಡೆದ ಸಂಭಾವನೆ ಬಗ್ಗೆಯೂ ಮಾತನಾಡಿದ್ದಾರೆ. ‘ದಿ ರಾಜಾ ಸಾಬ್’ ಸಿನಿಮಾಕ್ಕೆ ಮಾರುತಿ ಅವರಿಗೆ ಬರೋಬ್ಬರಿ 18 ಕೋಟಿ ರೂಪಾಯಿ ಸಂಭಾವನೆ ದೊರೆತಿದೆಯಂತೆ. ಇದು ಸಾಮಾನ್ಯ ಮೊತ್ತವಲ್ಲ. ಅದೂ ದೊಡ್ಡ ಹೆಸರು ಮಾಡದ ನಿರ್ದೇಶಕರೊಬ್ಬರಿಗೆ ಇಷ್ಟು ದೊಡ್ಡ ಸಂಭಾವನೆ ಸಿಗುವುದು ಬಹಳ ಅಪರೂಪ.

‘ದಿ ರಾಜಾ ಸಾಬ್’ ಸಿನಿಮಾಕ್ಕೆ ನನ್ನ ಜೀವನದ ಕಳೆದ ಮೂರು ವರ್ಷಗಳನ್ನು ವ್ಯಯಿಸಿದ್ದೇನೆ ಹಾಗಾಗಿ ಆ ಮೂರು ವರ್ಷಗಳನ್ನು ಸೇರಿಸಿ 18 ಕೋಟಿ ಸಂಭಾವನೆ ನೀಡಿದ್ದಾರೆ ಎಂದಿದ್ದಾರೆ. ಇದಕ್ಕೆ ಪರೋಕ್ಷ ಕಾರಣ ಪ್ರಭಾಸ್ ಎಂದೂ ಸಹ ಮಾರುತಿ ಹೇಳಿಕೊಂಡಿದ್ದಾರೆ. ಅಂದಹಾಗೆ ತೆಲುಗು ಚಿತ್ರರಂಗದಲ್ಲಿ ನಿರ್ದೇಶಕರುಗಳಿಗೆ ಭಾರಿ ದೊಡ್ಡ ಸಂಭಾವನೆ ನೀಡಲಾಗುತ್ತದೆ. ರಾಜಮೌಳಿ ಅವರಿಗೆ ಯಾವ ಸ್ಟಾರ್ ನಟರಿಗೂ ನೀಡದಷ್ಟು ಸಂಭಾವನೆ ನೀಡಲಾಗುತ್ತಿದೆ ‘ವಾರಣಾಸಿ’ ಸಿನಿಮಾಕ್ಕೆ. ಬೋಯಪಾಟಿ ಸೀನು ಅವರಿಗೂ ಸಹ ಸುಮಾರು 10 ಕೋಟಿಗೂ ಹೆಚ್ಚು ಮೊತ್ತದ ಸಂಭಾವನೆ ನೀಡಲಾಗುತ್ತದೆಯಂತೆ.

ಇನ್ನು ‘ದಿ ರಾಜಾ ಸಾಬ್’ ಸಿನಿಮಾ ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಪ್ರಭಾಸ್ ಮೊದಲ ಬಾರಿಗೆ ಹಾರರ್ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಪ್ರಭಾಸ್ ಅವರದ್ದು ದ್ವಿಪಾತ್ರ ಮಾತ್ರವಲ್ಲದೆ ಸಿನಿಮಾನಲ್ಲಿ ಸಂಜಯ್ ದತ್ ಸಹ ನಟಿಸಿದ್ದಾರೆ. ಸಿನಿಮಾನಲ್ಲಿ ಮಾಳವಿಕಾ ಮೋಹನನ್, ರಿಧಿ ಕುಮಾರ್, ನಿಧಿ ಅಗರ್ವಾಲ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ.

ಹೊಸವರ್ಷದ ಮೊದಲ ದಿನವೇ ಭಾರತದಲ್ಲಿ ಸ್ಫೋಟ;ಪ್ರವಾಸಿಗರ ಜನದಟ್ಟಣೆ ನಡುವೆ ನಡೆಯಿತಾ ಸ್ಫೋಟ?

TAGGED:Prabhas is currently starring in a movie called 'The Raja Saab'. Do you know how many crores the director of the movie is paid?
Share This Article
Facebook Twitter Copy Link Print
Previous Article ಸಿಗರೇಟ್, ಬೀಡಿ ಮತ್ತು ಪಾನ್ ಮಸಾಲಾ ಮೇಲೆ ಎಷ್ಟು ಜಿಎಸ್ಟಿ ವಿಧಿಸಲಾಗುವುದು?
Next Article ಊರು ಹಬ್ಬ, ಜಾತ್ರೆ-ಉತ್ಸವದಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ

Popular Posts

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ದೇಶಪ್ರಮುಖಮನರಂಜನೆ

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?