Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮಗಳಿಗಾಗಿ 36 ವರ್ಷಗಳಿಂದ ‘ಅವನಾಗಿದ್ದ ಅವಳು’ ನಿಜಕ್ಕೂ ರೋಚಕ!
ದೇಶಪ್ರಮುಖರಿಲೇಷನ್‌ಶಿಪ್

ಮಗಳಿಗಾಗಿ 36 ವರ್ಷಗಳಿಂದ ‘ಅವನಾಗಿದ್ದ ಅವಳು’ ನಿಜಕ್ಕೂ ರೋಚಕ!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ತನ್ನ ಮಗಳ ರಕ್ಷಣೆಗಾಗಿ 36 ವರ್ಷ ಪುರುಷರ ವೇಷ ಧರಿಸಿದ ಅಮ್ಮನ ಕಥೆ ನಿಜಕ್ಕೂ ರೋಚಕವಾಗಿದೆ. ತಾಯಿಯಾದವರು ತನ್ನ ಮಕ್ಕಳ ಏಳಿಗೆಗಾಗಿ ಎಂತಹ ನಿರ್ಧಾರಗಳನ್ನಾದರೂ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ತಮಿಳುನಾಡಿನ ಗ್ರಾಮವೊಂದರಲ್ಲಿ ತನ್ನ ಮಗಳ ಸುರಕ್ಷತೆಗಾಗಿ ತೆಗೆದುಕೊಂಡ ನಿರ್ಧಾರ ಜನರ ಮೆಚ್ಚುಗೆಗೆ ಕಾರಣವಾಗಿದೆ.

ತಮಿಳುನಾಡಿನ ತೂತುಕುಡಿಯ ಕಟ್ಟುನಾಯಕನ್‌ಪಟ್ಟಿ ಗ್ರಾಮದ ಪಿತೃ ಪ್ರಧಾನ ಕುಟುಂಬವೊಂದರಲ್ಲಿ ಜನಿಸಿದ ಮಗಳ ರಕ್ಷಣೆಗಾಗಿ ಪೆಚ್ಚಿಯಮ್ಮಾಳ್ ಎಂಬ ಮಹಿಳೆ ಪುರುಷನ ವೇಷ ಧರಿಸುವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಪ್ರಸ್ತುತ 57 ವರ್ಷ ಪೆಚ್ಚಿಯಮ್ಮಾಳ್ ಅವರು ಮದುವೆಯಾದ 15 ದಿನಗಳಲ್ಲಿ ಪತಿಯನ್ನು ಕಳೆದುಕೊಳ್ಳುತ್ತಾರೆ. ಪತಿಯನ್ನು ಕಳೆದುಕೊಂಡಾದ ಪೆಚ್ಚಿಯಮ್ಮಾಳ್ ಅವರಿಗೆ ಕೇವಲ 20 ವರ್ಷ ವಯಸ್ಸು. ಇದಾದ ಬಳಿಕ ಅವರು ಷಣ್ಮುಗಸುಂದರಿಗೆ ಜನ್ಮ ನೀಡಿದರು.

ಗಂಡನನ್ನು ಕಳೆದುಕೊಂಡ ಪೆಚ್ಚಿಯಮ್ಮಾಳ್ ಅವರು ಆರಂಭದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದರು. ಅವರ ಕುಟುಂಬ ವಾಸವಿದ್ದ ಸ್ಥಳದಲ್ಲಿ ಪುರುಷರ ಪ್ರಾಬಲ್ಯ ಹೆಚ್ಚಿತ್ತು. ಇದರಿಂದಾಗಿ ಒಬ್ಬೊಂಟಿಯಾದ ಪೆಚ್ಚಿಯಮ್ಮಾಳ್ ಪುರುಷರಿಂದ ನಿಂದನೆ, ಕಿರುಕುಳ ಹಾಗೂ ಲೈಂಗಿಕ ದೌಜನ್ಯದಂತಹ ಕಷ್ಟಗಳನ್ನು ಎದುರಿಸಬೇಕಾಯಿತು. ಈ ಎಲ್ಲಾ ಕೆಟ್ಟ ವ್ಯವಸ್ಥೆಯಿಂದ ತನ್ನ ಮಗಳನ್ನು ರಕ್ಷಿಸಲು ಪುರುಷನಾಗುವ ನಿರ್ಧಾರವನ್ನು ತೆಗೆದುಕೊಂಡ ಪೆಚ್ಚಿಯಮ್ಮಾಳ್ ಪಂಚೆ, ಶಾರ್ಟ್‌ ಧರಿಸಿ ತನ್ನ ಹೆಸರನ್ನು ‘ಮುತ್ತು’ ಎಂದು ಮರುನಾಮಕರಣ ಮಾಡಿಕೊಂಡರು.

ಅಂದಿನಿಂದ ಪೆಚ್ಚಿಯಮ್ಮಾಳ್ ಅವರು ಮುತ್ತು ಎಂಬ ಹೆಸರಿನಲ್ಲಿ 36 ವರ್ಷಗಳ ಕಾಲ ಪುರುಷನ ವೇಷದಲ್ಲಿಯೇ ಇದ್ದರು. ‘ನಾವು 20 ವರ್ಷಗಳ ಹಿಂದೆ ಕಟ್ಟುನಾಯಕನಪಟ್ಟಿಯಲ್ಲಿ ಪುನರ್ವಸತಿ ಮಾಡಿಕೊಂಡೆವು. ನನ್ನ ಹತ್ತಿರದ ಸಂಬಂಧಿಗಳು ಮತ್ತು ನನ್ನ ಮಗಳಿಗೆ ಮಾತ್ರ ನಾನು ಒಬ್ಬ ಮಹಿಳೆ ಎಂಬುದು ತಿಳಿದಿತ್ತು’ ಎಂದು ಮಾಧ್ಯವೊಂದರ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ಪೆಚ್ಚಿಯಮ್ಮಾಳ್ ಮಗಳಾದ ಷಣ್ಮುಗಸುಂದರಿ ಈಗ ಮದುವೆಯಾಗಿದ್ದಾರೆ. ಅವರ ಕುಟುಂಬವು ಆರ್ಥಿಕವಾಗಿ ಉತ್ತಮವಾಗಿದೆ. ಆದರೆ ಪೆಚ್ಚಿಯಮ್ಮಾಳ್ 36 ವರ್ಷಗಳಿಂದೆ ಧರಿಸಿದ ಉಡುಪು ಬದಲಾಯಿಸಲು ಈಗಾಲೂ ಸಿದ್ಧರಿಲ್ಲ. ಅವರ ಅಂದು ತೆಗೆದುಕೊಂಡ ನಿರ್ಧಾರ ಇಂದು ಅವರ ಗುರುತಾಗಿ ಮಾರ್ಪಟ್ಟಿದೆ. ‘ನಾನು ಮುತ್ತು ಆಗಿಯೇ ಮುಂದುವರೆಯುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ಅಮೆಜಾನ್‌ನಲ್ಲಿ ಲೂಟಿ ಆಫರ್, ಸ್ಟಾಕ್ ಖಾಲಿಯಾಗೋ ಮುಂಚೆ ನೋಡಿ!

TAGGED:It's really exciting to be 'the one who was him' for my daughter for 36 years!
Share This Article
Facebook Twitter Copy Link Print
Previous Article ಸಾರಿಗೆ ಸಂಘಟನೆಗಳ ಕೈಕಟ್ಟಿ ಹಾಕಿದ ಸರ್ಕಾರ!ಹಳೆಯ ಅಧಿಸೂಚನೆ ಅಂತ್ಯ, ಹೊಸ ನಿಷೇಧ ಜಾರಿಗೆ
Next Article ಹೊಸವರ್ಷದ ಮೊದಲ ದಿನವೇ ಭಾರತದಲ್ಲಿ ಸ್ಫೋಟ;ಪ್ರವಾಸಿಗರ ಜನದಟ್ಟಣೆ ನಡುವೆ ನಡೆಯಿತಾ ಸ್ಫೋಟ?

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?