Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಜೈಪುರ: ರಾಜಸ್ಥಾನದ ಯುವಕನೊಬ್ಬ ಕೆಲವು ದಿನಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಹೀಗಾಗಿ, ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.
ಸಮಸ್ಯೆ ಏನೆಂದು ಕಂಡುಹಿಡಿಯಲು ವೈದ್ಯರು ಯುವಕನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದ ವೈದ್ಯರು ಶಾಕ್ ಆದರು. ಏಕೆಂದರೆ ಆತನ ಹೊಟ್ಟೆಯಲ್ಲಿ ಕಬ್ಬಿಣದ ಸ್ಪ್ಯಾನರ್‌ಗಳು ಮತ್ತು ಹಲ್ಲುಜ್ಜುವ ಬ್ರಶ್ ಸೇರಿದಂತೆ ಕೆಲವು ವಸ್ತುಗಳನ್ನು ಕಂಡು ಆಘಾತಕ್ಕೊಳಗಾದರು.
ತಕ್ಷಣವೇ ಆತನಿಗೆ ಆಪರೇಷನ್ ಮಾಡಲು ಸಿದ್ಧರಾದ ವೈದ್ಯರು ಆ ಯುವಕನ ಹೊಟ್ಟೆಯಿಂದ ಕಬ್ಬಿಣದ ಸ್ಪ್ಯಾನರ್‌ಗಳು ಮತ್ತು ಹಲ್ಲುಜ್ಜುವ ಬ್ರಷ್‌ಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಸುಮಾರು 2 ಗಂಟೆ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಯುವಕನ ಹೊಟ್ಟೆಯಿಂದ 2 ಕಬ್ಬಿಣದ ಸ್ಪ್ಯಾನರ್‌ಗಳು ಮತ್ತು 7 ಹಲ್ಲುಜ್ಜುವ ಬ್ರಷ್‌ಗಳನ್ನು ಹೊರತೆಗೆಯಲಾಯಿತು.
ಆ ಯುವಕ ಆಪರೇಷನ್ ಬಳಿಕ ಆರೋಗ್ಯವಾಗಿದ್ದಾನೆ. ಯುವಕ ಮಾನಸಿಕ ಅಸ್ವಸ್ಥನಾದ್ದರಿಂದ ಇಂತಹ ವಸ್ತುಗಳನ್ನು ನುಂಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಆದರೆ, ಆತ ಇಂತಹ ಅಪಾಯಕಾರಿ ವಸ್ತುಗಳನ್ನು ನುಂಗಲು ಖಚಿತ ಕಾರಣ ಇನ್ನೂ ಬಯಲಾಗಿಲ್ಲ.
New year ಹೊಸ ವರ್ಷಾಚರಣೆಗೆ ರಾಜ್ಯದ ಜನ ರೆಡಿ: ಟೈಟಾಗಿ ಎಲ್ಲಾದ್ರೂ ಮಲಗಿದ್ರೆ ಮನೆಗೇ ಡ್ರಾಪ್ ಕೊಡತ್ತಂತೆ ಸರ್ಕಾರ!
ಪತ್ನಿಯ ಒಪ್ಪಿಗೆ ಇಲ್ಲದೆ ಮದ್ಯ ಸೇವಿಸಿದರೆ ಎಷ್ಟು ವರ್ಷ ಜೈಲು ಶಿಕ್ಷೆ?
ಬೆತ್ತಲೆಯಾಗಿ ಓಡಾಟ : ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ – ಪತಿಯ ವಿಕೃತಿಗೆ ಬೇಸತ್ತ ಪತ್ನಿ